Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RR vs PBKS: ಪ್ಲೇ ಆಫ್‌ ಮೇಲೆ ಪಂಜಾಬ್‌ ಕಣ್ಣು: ತಂಡಕ್ಕೆ ಮರಳಿದ ಸಂಜು

ರಾಜಸ್ಥಾನ ರಾಯಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್ ನಡುವಣ 18ನೇ ಆವೃತ್ತಿಯ 59ನೇ ಪಂದ್ಯ ಜೈಪುರ್‌ದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪಂಜಾಬ್‌ ಒಂದು ಕಾಲು ಪ್ಲೇ ಆಫ್‌ಗೆ ಇಡುವ ಕನಸು ಕಾಣುತ್ತಿದೆ. ಇನ್ನು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರ ಬಿದ್ದಿರುವ ರಾಜಸ್ಥಾನ ರಾಯಲ್ಸ್‌ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡುವ ಪ್ಲ್ಯಾನ್ ಮಾಡಿಕೊಂಡಿದೆ.

59ನೇ ಪಂದ್ಯ ಮಧ್ಯಾಹ್ನ ನಡೆಯಲಿದ್ದು ಜೈಪುರ್‌ದಲ್ಲಿನ ಬಿಸಿಲು ಆಟಗಾರರಿಗೆ ಸವಲಾಗಲಿದೆ. ಇಲ್ಲಿ 42 ಡಿಗ್ರಿ ಬಿಸಿಲು ಇದ್ದು, ನಿಧನವಾಗಿ ಪಿಚ್ ವರ್ತಿಸಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಪಂದ್ಯದಲ್ಲಿ ಇಬ್ಬನಿ ಬೀಳುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು, ಈಗಾಗಲೇ ಉಭಯ ತಂಡಗಳು ಐಪಿಎಲ್‌ನಲ್ಲಿ 29 ಬಾರಿ ಮುಖಾಮುಖಿಯಾಗಿವೆ. 12 ಪಂದ್ಯಗಳಲ್ಲಿ ಪಂಜಾಬ್ ಜಯ ಸಾಧಿಸಿದರೆ, ರಾಜಸ್ಥಾನ 17 ಪಂದ್ಯಗಳನ್ನು ಗೆದ್ದಿದೆ.

Punjab Kings Eye Playoff Berth as They Face Rajasthan Royals in Crucial IPL 2025 Clash

ವೈಭವ್ ಆಕರ್ಷಣೆ

ಈ ಆವೃತ್ತಿಯಲ್ಲಿ ಆಡುವ ಅವಕಾಶವನ್ನು ಪಡೆದಿರುವ ಯಂಗ್ ಪ್ಲೇಯರ್ ವೈಭವ್ ಸೂರ್ಯವಂಶಿ ಪ್ರಮುಖ ಆಕರ್ಷಣೆ ಆಗಿದ್ದಾರೆ. ಇವರು ಪ್ರಸಕ್ತ ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇನ್ನು ಯಶಸ್ವಿ ಜೈಸ್ವಾಲ್‌ ಸಹ ಉತ್ತಮ ಟಚ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್ ಮಾಡಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಸಂಜು ನಾಯಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಉಳಿದಂತೆ ರಿಯಾನ್‌ ಪರಾಗ್, ಧ್ರುವ್ ಜುರೇಲ್‌, ಶಿಮ್ರೋನ್ ಹೆಟ್ಮೆಯರ್ ತಂಡದ ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕಿದೆ. ಅಂದಾಗ ಗೆಲುವಿನ ಆಸೆ ಫಲಿಸುತ್ತದೆ.

ವೇಗದ ಬೌಲಿಂಗ್ ನೊಗವನ್ನು ಮಹೀಶ್‌ ತೀಕ್ಷಣಾ, ತುಷಾರ್ ದೇಶಪಾಂಡೆ ಹೊರುವ ಸಾಧ್ಯತೆ ಇದೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ವನಿಂದು ಹಸರಂಗ ಎದುರಾಳಿಗಳಿಗೆ ತಮ್ಮ ಪಿರ್ಕಿ ಮೂಲಕ ಕಾಡಬೇಕಿದೆ. ಅಂದಾಗ ಗೆಲುವಿನ ಆಸೆ ಫಲಿಸುತ್ತದೆ.

Punjab Kings Eye Playoff Berth as They Face Rajasthan Royals in Crucial IPL 2025 Clash

ಯುವಕರೇ ಬಲ

ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ ಜೋಡಿ ತಂಡಕ್ಕೆ ಭರ್ಜರಿ ಆರಂಭವನ್ನು ನೀಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್, ನೆಹಲ್ ವದೇರಾ, ಅಜ್ಮತುಲ್ಲಾ ಒಮರಜಾಯಿ, ಶಶಾಂಕ್‌ ಸಿಂಗ್‌ ತಂಡಕ್ಕೆ ನೆರವಾಗುವ ಆಟಗಾರರು. ಇನ್ನು ವೇಗದ ಬೌಲಿಂಗ್ ನೊಗವನ್ನು ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸನ್‌ ಹೊರಲಿದ್ದಾರೆ. ತಮ್ಮ ಸ್ಪಿನ್ ಮೋಡಿಯಿಂದ ಯುಜುವೇಂದ್ರ ಚಹಾಲ್‌ ಎದುರಾಳಿಗಳನ್ನು ಕಾಡಬಲ್ಲರು.

ಅಂಕಿ ಅಂಶ

- ಯಶಸ್ವಿ ಜೈಸ್ವಾಲ್‌ ಹಾಗೂ ಪ್ರಿಯಾಂಶ್‌ ಆರ್ಯ ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಪವರ್‌ ಪ್ಲೇನಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲಿಸಿದ ಆಟಗಾರರು.
- ಆಡಿರುವ 11 ಪಂದ್ಯಗಳಲ್ಲಿ 7 ಜಯ ಸಾಧಿಸಿ 15 ಅಂಕಗಳೊಂದಿಗೆ ಪಂಜಾಬ್‌ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ 6 ಅಂಕ ಕಲೆ ಹಾಕಿದ್ದು ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
- ಪ್ರಭಾಸಿಮ್ರಾನ್ ಸಿಂಗ್ ಈ ಪಂದ್ಯದಲ್ಲಿ 63 ರನ್‌ ಬಾರಿಸಿದಲ್ಲಿ ಒಂದೇ ಋತುವಿನಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಗೆ ಎಂಟ್ರಿ ಪಡೆಯಲಿದ್ದಾರೆ.

Story first published: Sunday, May 18, 2025, 7:30 [IST]
Other articles published on May 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+