Punjab Kings: ಐಪಿಎಲ್ ಆರಂಭಿಕ ಪಂದ್ಯಗಳಿಗೆ ವಿಶ್ವದ ನಂ.1 ಆಲ್‌ರೌಂಡರ್ ಅಲಭ್ಯ: ಪಂಜಾಬ್‌ಗೆ ಪೆಟ್ಟು
ಐಪಿಎಲ್ ಹವಾ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಶ್ರೀಮಂತ ಲೀಗ್‌ನಲ್ಲಿ ವಿಶ್ವದ ಸ್ಟಾರ್ ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ನಿಟ್ಟಿನಲ್ಲಿ 10 ತಂಡಗಳು ಮೈದಾನದಲ್ಲಿ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಲಿವೆ. ಈ ವೇಳೆ ಪಂಜಾಬ್ ಕಿಂಗ್ಸ್ ಸಹ ತನ್ನ ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿದೆ. ಮಾರ್ಚ್ 22 ರಿಂದ ಐಪಿಎಲ್ ಟೂರ್ನಿಗಳು ಆರಂಭವಾದ್ರೆ, ಮಾ.25 ರಂದು ಪಂಜಾಬ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಗುಜರಾತ್ ವಿರುದ್ಧ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್‌ಗೆ ಪೆಟ್ಟು ಬಿದ್ದಿದೆ.
ಪಂಜಾಬ್ ತಂಡ ಹಲವು ಸ್ಟಾರ್ ಆಟಗಾರರಿಗೆ ಈ ಬಾರಿ ಮಣೆ ಹಾಕಿದೆ. ಈ ವೇಳೆ ಅಫ್ಘಾನಿಸ್ತಾನದ ಸೂಪರ್ ಸ್ಟಾರ್ ಆಲ್‌ರೌಂಡರ್‌ರನ್ನು ಖರೀದಿಸಿತ್ತು. ಆದರೆ ಈ ಪ್ಲೇಯರ್ ಪಂಜಾಬ್ ಪರ ಆರಂಭಿಕ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ತಡವಾಗಲು ಕಾರಣ ಏನು?
ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಆಲ್‌ರೌಂಡರ್ ಆಗಿರುವ ಆಫ್ಘಾನ್‌ನ ಅಜ್ಮತುಲ್ಲಾ ಉಮರ್ಜೈ ಕೌಟುಂಬಿಕ ಕಾರಣಗಳಿಂದ ಆರಂಭಿಕ ಪಂದ್ಯಗಳನ್ನು ಆಡುತ್ತಿಲ್ಲ. ಇವರು ವೈಯಕ್ತಿಕ ಕಾರಣಗಳಿಂದ ತಂಡವನ್ನು ತಡವಾಗಿ ಸೇರಿಕೊಳ್ಳಲಿದ್ದಾರೆ ಎಂದು ಮ್ಯಾನೇಜ್ಮೆಂಟ್ ತಿಳಿಸಿದೆ. ಸೋಮವಾರದಿಂದ ಪಂಜಾಬ್ ಕ್ಯಾಂಪ್‌ನ್ನು ವಿದೇಶಿ ಆಟಗಾರರು ಸೇರಿಕೊಳ್ಳುತ್ತಿದ್ದಾರೆ. ಆದರೆ ಐಸಿಸಿ ವರ್ಷದ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿ ಪಡೆದಿರುವ ಅಜ್ಮತುಲ್ಲಾ ಉಮರ್ಜೈ ತಂಡ ಸೇರುವುದು ಕೊಂಚ ವಿಳಂಬವಾಗಲಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಅಫ್ಘಾನಿಸ್ತಾನದ ಸ್ಟಾರ್ ಆಲ್‌ರೌಂಡರ್ ಅಜ್ಮತುಲ್ಲಾ ಉಮರ್ಜೈ ಅವರ ಮನೆಯಲ್ಲಿ ಏನೋ ಸಮಸ್ಯೆ ಇದೆ. ಅವರು ತಡವಾಗಿ ತಂಡ ಸೇರುತ್ತಾರೆ. ಇಂದಿನಿಂದ ತಂಡದ ಇತರ ವಿದೇಶಿ ಆಟಗಾರರು ಆಗಮಿಸಲು ಪ್ರಾರಂಭಿಸಿದ್ದಾರೆ" ಎಂದು ಐಪಿಎಲ್ ಮೂಲವೊಂದು ತಿಳಿಸಿದೆ.
ಆಲ್‌ರೌಂಡರ್ ಸಾಧನೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜ್ಮತುಲ್ಲಾ ಉಮರ್ಜೈ ಅಮೋಘ ಪ್ರದರ್ಶನ ನೀಡಿದ್ದರು. ಇವರು ಆಡಿದ ಮೂರು ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 126 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ಇವರು ಕಳೆದ ಆವೃತ್ತಿಯಲ್ಲಿ 7 ಪಂದ್ಯಗಳನ್ನು ಆಡಿದ್ದು 42 ರನ್ ಸಿಡಿಸಿದ್ದಾರೆ. ಅಲ್ಲದೆ 4 ವಿಕೆಟ್ ಕಬಳಿಸಿದ್ದಾರೆ.
ಪಂಜಾಬ್ ತಂಡ: ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ಹರ್‌ಪ್ರೀತ್ ಬ್ರಾರ್, ವಿಷ್ಣು ವಿನೋದ್, ಮಾರ್ಕೊ ಜಾನ್ಸೆನ್, ಲಾಕಿ ಫರ್ಗುಸನ್, ಜೋಶ್ ಇಂಗ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ಜೋಶ್ ಇಂಗ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ಪಿ, ಕುಲದೀಪ್ ಎ. ಖಾನ್, ಹರ್ನೂರ್ ಪನ್ನು, ಆರನ್ ಹಾರ್ಡಿ, ಪ್ರಿಯಾಂಶ್ ಆರ್ಯ, ಅಜ್ಮತುಲ್ಲಾ ಒಮರ್ಜಾಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications