ಪಂಜಾಬ್ ಕಿಂಗ್ಸ್‌ನಿಂದ ಸಂಜತ್ ಬಂಗಾರ್, ಬೇಲಿಸ್‌ಗೆ ಗೇಟ್ ಪಾಸ್
ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಎಲ್ಲ ತಂಡಗಳು ಇದಕ್ಕಾಗಿ ಭರ್ಜರಿ ಪ್ಲ್ಯಾನ್ ನಡೆಸಿವೆ. ಪಂಜಾಬ್ ಕಿಂಗ್ಸ್ ಆಕ್ಷನ್‌ಗೂ ಮುನ್ನವೇ ಆಕ್ಟಿವ್ ಆಗಿದೆ. ಇತ್ತಿಚಿಗೆ ಪಂಜಾಬ್ ತಂಡ ರಿಕ್ಕಿ ಪಾಂಟಿಂಗ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಈ ಮೂಲಕ ಕಿಂಗ್ಸ್ ತಾನು 18ನೇ ಆವೃತ್ತಿಯ ಐಪಿಎಲ್‌ಗೆ ತಯಾರಿರುವುದಾಗಿ ಸಾರಿ ಹೇಳಿದೆ.
ಹರಾಜಿಗೂ ಮುನ್ನವೇ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೇಜರ್ ಸರ್ಜರಿ ನಡೆದಿದೆ. ತಂಡ ಕ್ರಿಕೆಟ್ ನಿರ್ದೇಶಕ ಹುದ್ದೆಯಲ್ಲಿದ್ದ ಸಂಜಯ್ ಬಂಗಾರ್ ಹಾಗೂ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಇಬ್ಬರನ್ನು ವಜಾಗೊಳಿಸಿದೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದ ಹಿನ್ನೆಲೆ, ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ಬಂಗಾರ್‌ಗೆ ಗೇಟ್ ಪಾಸ್
2025ರ ಐಪಿಎಲ್‌ಗಾಗಿ ಫ್ರಾಂಚೈಸಿ ರಿಶೆಫಲ್‌ಗೆ ಮುಂದಾದಂತೆ ಕಾಣುತ್ತಿದೆ. ಇದರ ಭಾಗವಾಗಿಯೇ ಈ ಕಾರ್ಯಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಸಂಜಯ್ ಬಂಗಾರ್ ಅವರು ಡಿಸೆಂಬರ್ 2023 ರಲ್ಲಿ ಪಂಜಾಬ್ ಕಿಂಗ್ಸ್ ಕ್ರಿಕೆಟ್‌ನ ನಿರ್ದೇಶಕರಾಗಿ ನೇಮಕ ಗೊಂಡರು. ಇದೇ ವೇಳೆ ಅನಿಲ್ ಕುಂಬ್ಳೆ ಅವರಿಂದ ತೆರವಾದ ಮುಖ್ಯ ಕೋಚ್ ಸ್ಥಾನಕ್ಕೆ ಬೇಲಿಸ್ ಅವರನ್ನು ನೇಮಿಸಲಾಗಿತ್ತು. ಆದರೆ ಈ ಕೋಚಿಂಗ್ ಸಿಬ್ಬಂದಿಯ ಮುಂದಾಳತ್ವದಲ್ಲೂ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಂಡದ ನಿರ್ದೇಶಕ ಸಂಜಯ್ ಬಂಗಾರವನ್ನು ಕೈ ಬಿಟ್ಟಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಪೋ ವರದಿ ಮಾಡಿದೆ. ಇದಕ್ಕೂ ಮೊದಲು ಸಂಜಯ್ ಬಂಗಾರ್ ತಂಡ ಮುಖ್ಯ ಕೋಚ್ ಆಗಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರು. ಇವರ ಅಧಿಕಾರ ಅವಧಿಯಲ್ಲಿ ತಂಡ 2014ರಲ್ಲಿ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿತ್ತು. ಪಂಜಾಬ್ ಕಿಂಗ್ಸ್ ತಂಡ ಟ್ರೋಫಿ ಗೆಲ್ಲುವಲ್ಲಿ ಸತತ ಎಡವುತ್ತಿರುವುದು ತಂಡದ ಮ್ಯಾನೇಜ್ಮೆಂಟ್ ಚಿಂತೆಯನ್ನು ದ್ವಿಗುಣ ಗೊಳಿಸಿದೆ.
ಇದೇ ವರ್ಷ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರಿಕ್ಕಿ ಪಾಂಟಿಂಗ್, ತಂಡದ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ತಂಡವನ್ನು ತೊರೆದಿದ್ದರು. ಅಲ್ಲದೆ ಪಾಂಟಿಂಗ್ ಹೊಸ ಫ್ರಾಂಚೈಸಿಯ ಹುಡುಕಾಟದಲ್ಲಿದ್ದರು. ಇದೇ ವೇಳೆ ಅವರಿಗೆ ಪಂಜಾಬ್ ಕಿಂಗ್ಸ್ ಮಣೆ ಹಾಕಿದೆ. ಪಾಂಟಿಂಗ್ ಆಕ್ರಮಣಕಾರಿ ನಾಯಕತ್ವದ ಶೈಲಿಗೆ ಮೊದಲು ಹೆಸರುವಾಸಿಯಾಗಿದ್ದರು. ಪಂಜಾಬ್ ಜೊತೆ ಪಾಂಟಿಂಗ್ ನಾಲ್ಕು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇವರು ಪಂಜಾಬ್ ಕಿಂಗ್ಸ್ ತಂಡವನ್ನು ಬಹು ವರ್ಷಗಳಿಂದ ಕಾಡುತ್ತಿರುವ ಐಪಿಎಲ್ ಟ್ರೋಫಿ ಬರವನ್ನು ನೀಗಿಸುವ ಕನಸು ಹೊಂದಿದ್ದಾರೆ. ಈಗಾಗಲೇ ಚುಕ್ಕಾಣಿ ಹಿಡಿದಿರುವ ಪಾಂಟಿಂಗ್ ತಮ್ಮ ತೀಕ್ಷಣ ಮಾತಿನ ಶೈಲಿಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಲು ಸಂಜಯ್ ಬಂಗಾರ್, ವೀರೇಂದ್ರ ಸೆಹ್ವಾಗ್, ಬ್ರಾಡ್ ಹಾಡ್ಜ್, ಮೈಕ್ ಹೆಸನ್, ಅನಿಲ್ ಕುಂಬ್ಳೆ ಮತ್ತು ಟ್ರೆವರ್ ಬೇಲಿಸ್ ಶ್ರಮಿಸಿದ್ದಾರೆ. ಆದರೂ ಫಲ ಲಭಿಸಲಿಲ್ಲ. ಈ ಬಾರಿ ಏನ್ ಆಗುತ್ತದೋ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications