For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್‌ಗೆ ಶಾಕ್‌ ನೀಡಿದ ಪಂಜಾಬ್‌ಗೆ ಅಗ್ರಸ್ಥಾನ: ಕಿಂಗ್ಸ್‌ ಕ್ವಾಲಿಫೈಯರ್‌ಗೆ ಕ್ವಾಲಿಫೈ

18ನೇ ಆವೃತ್ತಿಯ 69ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಪಂಜಾಬ್‌ ಕಿಂಗ್ಸ್‌ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಮೂಲಕ ಪ್ರಸಕ್ತ ಲೀಗ್‌ನಲ್ಲಿ ಕ್ವಾಲಿಫೈಯರ್‌ಗೆ ಕ್ವಾಲಿಫೈ ಆದ ಮೊದಲ ತಂಡ ಎಂಬ ಶ್ರೇಯಕ್ಕೆ ಕಿಂಗ್ಸ್ ಪಾಲಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯುವ ಮುಂಬೈ ಇಂಡಿಯನ್ಸ್‌ ತಂಡದ ಆಸೆ ಮಣ್ಣು ಪಾಲಾಗಿದೆ. ಈ ಮೂಲಕ ಮುಂಬೈ ತಂಡ ಎಲಿಮಿನೇಟರ್‌ ಪಂದ್ಯದಲ್ಲಿ ಹೋರಾಟ ನಡೆಸಲಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್‌ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್‌ ಕಲೆ ಹಾಕಿತು. ಈ ಮೂಲಕ ಪಂಜಾಬ್‌ ಕಿಂಗ್ಸ್‌ ಆಡಿದ 14 ಪಂದ್ಯಗಳಲ್ಲಿ 9 ಜಯ ಸಾಧಿಸಿ 19 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ.

Punjab Kings Secure Top Spot and Qualify for Playoffs with Dominant Win Over Mumbai Indians

ಪಂಜಾಬ್‌ ಕಿಂಗ್ಸ್‌ ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್‌ಗೆ ಕ್ವಾಲಿಫೈ ಆಗಿದೆ. ಈ ಮೂಲಕ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಶ್ರೇಯ ತನ್ನದಾಗಿಸಿಕೊಂಡಿದೆ. ಅಲ್ಲದೆ ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ಯಾರ ವಿರುದ್ಧ ಕಾದಾಟ ನಡೆಸಲಿದೆ ಎಂಬುದು ಇನ್ನು ಕುತೂಹಲ ಮೂಡಿಸಿದೆ. ಎರಡನೇ ಸ್ಥಾನ ಪಡೆಯಲು ಆರ್‌ಸಿಬಿ, ಎಲ್‌ಎಸ್‌ಜಿ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ.

ಶತಕದ ಜೊತೆಯಾಟ

ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಪ್ರಭಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಜೋಡಿ 34 ರನ್‌ ಜೊತೆಯಾಟವನ್ನು ನೀಡಿತು. ಎರಡನೇ ವಿಕೆಟ್‌ಗೆ ಪ್ರಿಯಾಂಶ್‌ ಆರ್ಯ ಹಾಗೂ ಜೋಸ್ ಇಂಗ್ಲಿಷ್‌ ಜೋಡಿ ಅಬ್ಬರದ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ 59 ಎಸೆತಗಳಲ್ಲಿ 109 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡವನ್ನು ಉತ್ತಮ ಸ್ಥಿತಿಯಲ್ಲಿಟ್ಟಿತು. 35 ಎಸೆತಗಳಲ್ಲಿ 62 ರನ್‌ ಸಿಡಿಸಿದ್ದ ಪ್ರಿಯಾಂಶ್ ಆರ್ಯ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಮಧ್ಯಮ ಕ್ರಮಾಂಕದ ಜೋಸ್ ಇಂಗ್ಲಿಷ್ 42 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 73 ರನ್‌ ಸಿಡಿಸಿದರು. ನಾಯಕ ಶ್ರೇಯಸ್ ಅಯ್ಯರ್‌ ಅಜೇಯ 26 ರನ್‌ ಬಾರಿಸಿ ಜಯದಲ್ಲಿ ಮಹತ್ವದ ಕಾಣಿಕೆ ನಿಡಿದರು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ರಯಾನ್‌ ರಿಕಲ್ಟನ್‌ (27), ರೋಹಿತ್ ಶರ್ಮಾ (24) ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 45 ರನ್‌ ಜೊತೆಯಾಟವನ್ನು ನೀಡಿದರು. ತಿಲಕ್ ವರ್ಮಾ (1) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ಭರವಸೆಯ ಬ್ಯಾಟರ್‌ ವಿಲ್ ಜಾಕ್ಸ್‌ 17 ರನ್‌ ಬಾರಿಸಿ ಔಟ್ ಆದರು.

ಸೂರ್ಯ ಅರ್ಧಶತಕ

ಐದನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ 23 ಎಸೆತಗಳಲ್ಲಿ 44 ರನ್‌ ಸಿಡಿಸಿತು. ಹಾರ್ದಿಕ್ ಪಾಂಡ್ಯ 2 ಬೌಂಡರಿ, 2 ಸಿಕ್ಸರ್‌ ಸಿಡಿಸಿದರು. ನಮನ್‌ ಧೀರ್‌ 2 ಸಿಕ್ಸರ್ ಸೇರಿದಂತೆ 20 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿದಂತೆ 57 ರನ್‌ ಸಿಡಿಸಿ ಔಟ್ ಆದರು. ಇವರ ಉತ್ತಮ ಆಟದ ಫಲವಾಗಿ ಮುಂಬೈ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ಪಂಜಾಬ್ ಕಿಂಗ್ಸ್‌ ಪರ ಅರ್ಷದೀಪ್‌ ಸಿಂಗ್‌, ಮಾರ್ಕೊ ಜಾನ್ಸನ್‌, ವಿಜಯ್‌ಕುಮಾರ್ ವೈಶಾಕ್‌ ತಲಾ ಎರಡು ವಿಕೆಟ್‌ ಕಬಳಿಸಿದರು.

Story first published: Monday, May 26, 2025, 23:21 [IST]
Other articles published on May 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+