Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Big Boss: ಅತಿದೊಡ್ಡ ರಿಯಾಲಿಟಿ ಶೋ ವೇದಿಕೆಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನ ಘೋಷಣೆ!

ಕಳೆದ ಕೆಲವು ದಿನಗಳಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಸಿದ್ಧತೆಗಳು ನಡೆಯುತ್ತಿದೆ. ಎಲ್ಲೆಡೆ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದ ಅಪ್ಡೇಟ್‌ಗಳು ಸದ್ದು ಮಾಡುತ್ತಿವೆ. ಇದರ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿ ಕೂಡ ಸದ್ದು ಮಾಡುತ್ತಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಿದೆ. ಆದರೆ, ಈ ಬಲಿಷ್ಠ ತಂಡವನ್ನು ಮುನ್ನಡೆಸಲು ನಾಯಕನ ಹುಡುಕಾಟದಲ್ಲಿದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ಸಮರ್ಥ ಆಟಗಾರ ಸಿಕ್ಕಿದ್ದಾರೆ. ಈ ಆಟಗಾರನ ಬಿಗ್‌ಬಾಸ್ 18 ಹಿಂದಿ ರಿಯಾಲಿಟಿ ಶೋ ವೇದಿಕೆಯಲ್ಲಿ ಬಹಿರಂಗಪಡಿಸಲಾಗುತ್ತದೆ ಎಂದು ವರದಿಗಳಾಗಿವೆ.

ಭಾರತದಲ್ಲಿ ಅತಿಹೆಚ್ಚು ಜನ ಮನ್ನಣೆ ಪಡೆದಿರುವ ರಿಯಾಲಿಟಿ ಶೋಗಳಲ್ಲಿ ಒಂದಾದ ಹಿಂದಿ ಬಿಗ್‌ಬಾಸ್ ಸೀಸನ್ 18 ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಿದೆ. ಇದಕ್ಕೂ ಮುನ್ನ ಈ ವಾರ ನಡೆಯಲಿರುವ 'ವೀಕೆಂಡ್​ ಕಾ ವಾರ್​' ಎಪಿಸೋಡ್‌ನಲ್ಲಿ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಭಾನುವಾರದ ಎಪಿಸೋಡ್‌ನಲ್ಲಿ ಭಾರತೀಯ ಕ್ರಿಕೆಟಿಗರು ಕೂಡ ಬರಲಿದ್ದಾರೆ.

Punjab Kings team captain announced on the Bigg Boss 18 Hindi reality show stage

ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಆಪ್ತ ಸ್ನೇಹಿತೆ ಹಾಗು ಸ್ಟಾರ್ ಬಾಲಿವುಡ್ ನಟಿ ರವೀನಾ ಟಂಟನ್, ಅವರ ಮಗಳು ರಾಶಾ ಹಾಗೂ ಅಜಯ್ ದೇವಗನ್ ಸಹೋದರಳಿ ಅಮನ್ ಕೂಡ ಬಿಗ್‌ಬಾಸ್‌ ​ ಮನೆಗೆ ಪ್ರವೇಶ ಮಾಡಲಿದ್ದಾರೆ. ಇದರೊಂದಿಗೆ ಭಾನುವಾರದ ಎಪಿಸೋಡ್​ನಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರಾದ ಯುಜುವೇಂದ್ರ ಚಹಾಲ್, ಶ್ರೇಯಸ್ ಅಯ್ಯರ್ ಜೊತೆಗೆ ಅನ್‌ಕ್ಯಾಪ್ಡ್ ಬ್ಯಾಟರ್ ಶಶಾಂಕ್ ಸಿಂಗ್ ಕೂಡ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಬಿಗ್‌ಬಾಸ್ ಸೀಸನ್ 18 ಶೋನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನ ಘೋಷಣೆ ಮಾಡಲಿದ್ದಾರೆ. ಹಿಂದಿ ಬಿಗ್‌ಬಾಸ್ ಶೋ ಅನ್ನು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ.

ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಐಪಿಎಲ್ 2024 ಚಾಂಪಿಯನ್ ಮಾಡುವಲ್ಲಿ ಶ್ರೇಯಸ್ಸ್ ಅಯ್ಯರ್ ನಾಯಕನಾಗಿ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿ ಶ್ರೇಯಸ್ಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಒಂದು ಬಾರಿಯೂ ಕಪ್ ಗೆಲ್ಲದ ಪಂಜಾಬ್ ಈ ಬಾರಿ ಶ್ರೇಯಸ್ಸ್ ಅಯ್ಯರ್ ನೇತೃತ್ವದಲ್ಲಿ ಕಪ್ ಗೆಲ್ಲಲು ಬಯಸಿದೆ. ಹೀಗಾಗಿ ಶ್ರೇಯಸ್ಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕನ್ನಾಗಿ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಕೋಚ್ ಪಾಂಟಿಂಗ್ ಹೇಳಿದ್ದೇನು?

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಬಿಡ್ ಮಾಡಿದ ನಂತರ ಪಂಜಾಬ್ ಕಿಂಗ್ಸ್ ಹೆಡ್‌ಕೋಚ್ ರಿಕಿ ಪಾಂಟಿಂಗ್ ಸಂತಸ ವ್ಯಕ್ತಪಡಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ಪಾಂಟಿಂಗ್. ಶ್ರೇಯಸ್ ಅವರೊಂದಿಗೆ ಮೊದಲು ಕೆಲಸ ಮಾಡಿದ್ದೇನೆ. ಅವರು ಒಬ್ಬ ಶ್ರೇಷ್ಠ ಆಟಗಾರ. ನಾವು ಅವರಿಗೆ ತಂಡದ ಜವಾಬ್ದಾರಿ ನೀಡಿದರೆ, ಅವರು ನಮ್ಮ ತಂಡಕ್ಕೆ ಉತ್ತಮ ನಾಯಕರಾಗುತ್ತಾರೆ. ನಾವು ಬಹುಶಃ ಅವರನ್ನು ನಾಯಕನ್ನಾಗಿ ಮಾಡುತ್ತೇವೆ ಎಂಬ ಭರವಸೆಯಿದೆ ಎಂದು ಹೇಳಿದ್ದರು.

ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ 26.75 ಕೋಟಿ ರೂ. ನೀಡಿ ಬಿಡ್ ಮಾಡಿದೆ. ಏಕೆಂದರೆ ಅಯ್ಯರ್ ಅವರನ್ನು ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಜೊತೆಗೆ ಚಹಾಲ್ ಅವರನ್ನು 18 ಕೋಟಿ ರೂ.ಗೆ ಖರೀದಿಸಿದ್ದರೆ, ಅನ್‌ಕ್ಯಾಪ್ಡ್ ಬ್ಯಾಟರ್ ಶಶಾಂಕ್ ಸಿಂಗ್ ಅವರನ್ನು 5.5 ಕೋಟಿ ರೂ.ಗೆ ಉಳಿಸಿಕೊಂಡಿದೆ.

Story first published: Sunday, January 12, 2025, 14:43 [IST]
Other articles published on Jan 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+