ಐಪಿಎಲ್ 2021: ಹೊಸ ಲೋಗೋ ಬಿಡುಗಡೆ ಮಾಡಿದ ಪಂಜಾಬ್ ಕಿಂಗ್ಸ್

ಐಪಿಎಲ್ 2021ರ ಆವೃತ್ತಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ಎಂದು ಹೊಸ ಹೆಸರನ್ನು ಇಟ್ಟುಕೊಂಡಿರುವ ಫ್ರಾಂಚೈಸಿ ಈಗ ತನಗೆ ಹೊಸ ಲೋಗೋವನ್ನು ಬಿಡುಗಡೆಗೊಳಿಸಿದೆ. ಐಪಿಎಲ್ 2021ರ ಮಿನಿ ಹರಾಜುಗೂ ಒಂದು ದಿನ ಮುನ್ನ ಈ ಲೋಗೋ ಬಿಡುಗಡೆಯಾಗಿದೆ.
ಮೂಲ ಸ್ವರೂಪದಲ್ಲಿಯೇ ಒಂದಷ್ಟು ಬದಲಾವಣೆ ಮಾಡಿಕೊಂಡು ಈ ಲೋಗೋ ರೂಪಿಸಲಾಗಿದೆ. ಈ ಲೋಗೋದಲ್ಲಿ ಮೊದಲಿಗೆ ಪಂಜಾಬ್ ಕಿಂಗ್ಸ್ ಎಂದು ಬರೆಯಲಾಗಿದೆ. ಬಳಿಕ ಎಡಗಡೆಗೆ ಮುಖಮಾಡಿ ಆರ್ಭಟಿಸುತ್ತಿರುವಂತಿರುವ ಸಿಂಹದ ಮುಖವಿದೆ. ಈ ಹಿಂದಿನ ಲೋಗೋದಲ್ಲಿ ಎಡ ಹಾಗೂ ಬಲಭಾಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಎರಡು ಸಣ್ಣ ಸಿಂಹದ ಮುಖಗಳು ಇದ್ದವು.
ಪಂಜಾಬ್ ಮೂಲದ ಈ ಫ್ರಾಂಚೈಸಿ ಕಳೆದ 13 ಆವೃತ್ತಿಗಳಲ್ಲಿ ಪಾಲ್ಗೊಂಡಿದ್ದರೂ ಒಂದು ಬಾರಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಒಂದು ಬಾರಿ ಮಾತ್ರವೇ ಫೈನಲ್‌ಗೆ ಪ್ರವೇಶ ಪಡೆದುಕೊಳ್ಳುವಲ್ಲಿ ಸಫಲವಾಗಿದ್ದರೆ ಎರಡು ಬಾರಿ ಮಾತ್ರ ಪ್ಲೇ ಆಫ್‌ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಹೀಗಾಗಿ ಹೆಸರು ಬದಲಾಯಿಸಿಕೊಂಡು ಅದೃಷ್ಟಪರೀಕ್ಷೆಗೆ ಇಳಿಯಲಿದೆ.
ಇನ್ನು ಹೆಸರು ಬದಲಾವಣೆ ಮಾಡಿಕೊಳ್ಳುವುದು ಐಪಿಎಲ್‌ನಲ್ಲಿ ಹೊಸದಲ್ಲ. ಈ ಹಿಂದೆ ಪುಣೆ ಸೂಪರ್‌ಜೈಂಟ್ಸ್ ತಂಡ ಹೆಸರನ್ನು ಬದಲಾಯಿಸಿಕೊಂಡಿದ್ದರೆ ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ಕೂಡ ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿತ್ತು.
ಪಂಜಾಬ್ ಕಿಂಗ್ಸ್ ತಂಡವನ್ನು ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮುನ್ನಡಸಲಿದ್ದಾರೆ. ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಈ ಬಾರಿಯೂ ಜವಾಬ್ಧಾರಿ ಹೋರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications