Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂಜಬ್‌ ಸುಲಭವಾಗಿ ಪಂದ್ಯ ಗೆಲ್ಲಲು ಆ ಇಬ್ಬರು ಆಟಗಾರರೇ ಕಾರಣ

19ನೇ ಆವೃತ್ತಿ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಅಮೋಘ ಪ್ರದರ್ಶನ ಮುಂದುವರಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ತನ್ನ ಸ್ಥಿರ ಪ್ರದರ್ಶನದಿಂದ 54 ರನ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಪಡೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ಗೆಲುವು ದಾಖಲಿಸಲು ಕಾರಣವಾಗಿದ್ದು ಆ ಇಬ್ಬರು ಯುವ ಆಟಗಾರರ ಬ್ಯಾಟಿಂಗ್‌.

ನ್ಯೂ ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಆರಂಭಿಕ ಪ್ರಭ್‌ಸಿಮ್ರನ್ ಸಿಂಗ್ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಯುವ ಆಟಗಾರರಾದ ಪ್ರಿಯಾಂಶ್ ಆರ್ಯ ಹಾಗೂ ಕೂಪರ್ ಕನೋಲಿ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು.

Punjab Kings

ಆರಂಭದಲ್ಲಿ ಮೊಹಮ್ಮದ್‌ ಶಮಿ ಪಂಜಾಬ್‌ ಬ್ಯಾಟರ್‌ಗಳಿಗೆ ಕಾಡಿದರು. ಆದರೆ ಪ್ರಿಯಾಂಶ್ ಹಾಗೂ ಕೂಪರ್ ಸೆಟ್ಲ್ ಆದ ಬಳಿಕ ಯಾವೊಬ್ಬ ಬೌಲರ್‌ ಸ್ಥಿರ ಪ್ರದರ್ಶನ ನೀಡಲಿಲ್ಲ. ಎಲ್ಲರೂ ದುಬಾರಿಯಾದರು. ರನ್‌ ವೇಗಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದ ಬೌಲರ್ಸ್‌ ರನ್‌ಗಳನ್ನು ಬಿಟ್ಟುಕೊಟ್ಟು ತಂಡವನ್ನು ಸಂಕಷ್ಟಕ್ಕೆ ಸಿಲುಕಿದರು. ಪಂಜಾಬ್ ತಂಡದ ಯುವ ಆಟಗಾರರು ಮಿಡ್ಲ್ ಓವರ್‌ನಲ್ಲೇ ಡೆತ್‌ ಓವರ್‌ ರೀತಿ ಬ್ಯಾಟ್ ಮಾಡಿದರು.

ಮಧ್ಯದ ಓವರ್‌ಗಳಲ್ಲಿ ಪ್ರಿಯಾಂಶ್ ಹಾಗೂ ಕೂಪರ್‌ ಲೈವ್ ಪಂದ್ಯವನ್ನೇ ಮರುಪ್ರಸಾರದ ರೀತಿ ಮಾಡಿ ಬಿಟ್ಟರು. ಈ ಇಬ್ಬರೂ ಆಟಗಾರರು ಪ್ರತಿ ಓವರ್‌ನಲ್ಲಿ ತಲಾ ಒಂದು ಬೌಂಡರಿ, ಅಥವಾ ಸಿಕ್ಸರ್‌ಗಳನ್ನು ಬಾರಿಸುತ್ತಲೇ ಸಾಗಿದರು. ಈ ಜೋಡಿ 80 ಎಸೆತಗಳಲ್ಲಿ 182 ರನ್ ಸೇರಿಸಿತು. ಈ ಮೂಲಕ ತಂಡ ದಾಖಲೆಯ ಮೊತ್ತ ಕಲೆ ಹಾಕುವಲ್ಲಿ ಈ ಜೋಡಿ ಕಾರಣವಾಯಿತು. ಇಬ್ಬರೂ ಎಡಗೈ ಆಟಗಾರರ ಆಟ ಪಂಜಾಬ್‌ಕ್ಕೆ ಬಲವನ್ನು ತಂದಿತು.

ಭರ್ಜರಿ ಜೊತೆಯಾಟ

ಪ್ರಿಯಾಂಶ್ ಆರ್ಯ 251ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಇವರು 37 ಎಸೆತಗಳಲ್ಲಿ 4 ಬೌಂಡರಿ, 9 ಸಿಕ್ಸರ್ ಸಹಾಯದಿಂದ 93 ರನ್‌ ಸಿಡಿಸಿದರು. ಆಸ್ಟ್ರೇಲಿಯಾದ ಯುವ ಬ್ಯಾಟರ್‌ ಕೂಪರ್ ಕನೋಲಿ ಸಹ ಇದೇ ರೀತಿ ಬ್ಯಾಟಿಂಗ್ ಪ್ರದರ್ಶಿಸಿದರು. ಇವರು 46 ಎಸೆತಗಳಲ್ಲಿ 87 ರನ್‌ ಸಿಡಿಸಿದರು. ಈ ವೇಳೆ 8 ಬೌಂಡರಿ, 7 ಸಿಕ್ಸರ್‌ಗಳನ್ನು ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು. ಈ ಜೋಡಿಯ ಆಟವೇ ಪಂಜಾಬ್‌ ಪಂದ್ಯವನ್ನು ಗೆಲ್ಲಲು ಕಾರಣವಾಯಿತು.

ಪಂಜಾಬ್ ಕಿಂಗ್ಸ್‌ ಈ ಪಂದ್ಯದಲ್ಲಿ 300ಕ್ಕೂ ಹೆಚ್ಚು ರನ್‌ ಬಾರಿಸಬಹುದು ಎಂದು ಒಂದು ಹಂತದಲ್ಲಿ ಅಂದಾಜಿಸಲಾಗಿತ್ತು. ಆದರೆ ಎಲ್‌ಎಸ್‌ಜಿ ಬೌಲರ್‌ಗಳು ಕೊಂಚ ಲಯ ಕಂಡುಕೊಂಡರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 254 ರನ್ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 200 ರನ್‌ ಸೇರಿಸಿ ಸೋಲು ಕಂಡಿತು.

Story first published: Monday, April 20, 2026, 7:02 [IST]
Other articles published on Apr 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+