PBKS vs DC IPL 2025: ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತ ಪಡಿಕೊಳ್ಳಲು ಹೋರಾಟ
ಧರ್ಮಶಾಲಾದಲ್ಲಿ ಇಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ 18ನೇ ಆವೃತ್ತಿಯ ಐಪಿಎಲ್‌ನ 58ನೇ ಪಂದ್ಯ ನಡೆಯಲಿದೆ. ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದಾಗಿದೆ. ಪಂಜಾಬ್ 15 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 13 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್ ಮೇಲೆ ಕಣ್ಣು ನೆಟ್ಟಿರುವ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದಾಗಿದೆ.
ಪಂಜಾಬ್, ಡೆಲ್ಲಿ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಈ ಆಟಗಾರರು ಗುರುವಾರ ನಡೆಯುವ ಪಂದ್ಯದಲ್ಲಿ ಸ್ಥಿರ ಆಟದ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಉಭಯ ತಂಡಗಳಿಗೂ ಪ್ಲೇ ಆಫ್‌ಗೆ ಎಂಟ್ರಿ ಪಡೆಯಲು ಗೆಲುವು ಅನಿವಾರ್ಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಆದರೆ ಈಗ ಸೋಲುಗಳನ್ನು ಕಂಡಿದ್ದರಿಂದ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಸ್ಥಾನವನ್ನು ಸುಧಾರಿಸಿಕೊಳ್ಳುವ ಆಸೆ ಡೆಲ್ಲಿ ತಂಡದ್ದಾಗಿದೆ.

ಹೇಗಿದೆ ಪಿಚ್?
ಧರ್ಮಶಾಲಾದಲ್ಲಿ ಮಳೆ ಸೂಚನೆಗಳು ಕಾಣುತ್ತಿವೆ. ಪಂದ್ಯಕ್ಕೆ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಅಭ್ಯಾಸ ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವೀಘನತೆಯಿಂದಾಗಿ ಧರ್ಮಶಾಲಾದ ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಈ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ವೇಗಿಗಳು ಆರಂಭದಲ್ಲಿ ಲಾಭ ಪಡೆದಿದ್ದಾರೆ. ಸ್ಪಿನ್ ಬೌಲರ್‌ಗಳು ಸಹ ಇದರ ಉಪಯೋಗ ಪಡೆದಿದ್ದಾರೆ.
ಯುವ ಆಟಗಾರರು ಆಕರ್ಷಣೆ
ಪ್ರಸಕ್ತ ಐಪಿಎಲ್‌ನಲ್ಲಿ ಎಲ್ಲರ ಮನ ಗೆದ್ದಿರುವ ಆರಂಭಿಕ ಜೋಡಿಗಳಲ್ಲಿ ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ ಸಹಾ ಒಂದು. ಈ ಯುವ ಜೋಡಿ ಪಂಜಾಬ್ ತಂಡಕ್ಕೆ ಹಲವು ಪಂದ್ಯಗಳಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದೆ. ಡೆಲ್ಲಿ ವಿರುದ್ದ ಪಂದ್ಯದಲ್ಲೂ ಈ ಜೋಡಿ ಉತ್ತಮ ಆರಂಭವನ್ನು ನೀಡುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ನೆಹಾಲ್ ವಧೇರಾ, ಶಶಾಂಕ್ ಸಿಂಗ್, ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಶ್ರಮಿಸಬೇಕಿದೆ.

ವೇಗದ ಬೌಲಿಂಗ್ ಹೊಣೆಯನ್ನು ಭರವಸೆಯ ಆಟಗಾರ ಅರ್ಷದೀಪ್ ಸಿಂಗ್ ಹೊರಲಿದ್ದಾರೆ. ಇವರಿಗೆ ಅಜರ್ಮತುಲ್ಲಾ ಓಮರಜೈ, ವಿಜಯ್‌ಕುಮಾರ್ ವೈಶಾಖ್ ಸ್ಥಿರ ಬೌಲಿಂಗ್ ದಾಳಿಯನ್ನು ನಡೆಸಬೇಕಿದೆ. ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಉತ್ತಮ ಲಯದಲ್ಲಿದ್ದು ಗೆಲುವಿನಲ್ಲಿ ಕಾಣಿಕೆ ನೀಡಬೇಕಿದೆ.
ಗೆಲುವಿನ ಒತ್ತಡ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ಒತ್ತಡದಲ್ಲಿದೆ. ಸತತ ಮೂರು ಪಂದ್ಯಗಳಿಂದ ಡೆಲ್ಲಿ ಗೆಲುವು ಕಂಡಿಲ್ಲ. ಹೀಗಾಗಿ ಪಂಜಾಬ್ ವಿರುದ್ಧ ಪಂದ್ಯ ಮಹತ್ವದಾಗಿದೆ. ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಕುಲ್‌ದೀಪ್ ಯಾದವ್ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳುವ ಫಾಫ್ ಡುಪ್ಲೇಸಿಸ್ ಹಾಗೂ ಅಭಿಷೇಕ್ ಪೋರೆಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕದ ಕರುಣ್ ನಾಯರ್, ಕೆಎಲ್ ರಾಹುಲ್, ಸ್ಥಿರ ಪ್ರದರ್ಶನ ನೀಡಿ ಎದುರಾಳಿ ಬೌಲರ್‌ಗಳನ್ನು ಕಾಡಬೇಕಿದೆ. ಉಳಿಂದತೆ ಆಲ್‌ರೌಂಡರ್ ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್, ಆಶುತೋಷ್ ಶರ್ಮಾ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಅಂದಾಗ ಪೂರ್ಣ ಎರಡು ಅಂಕ ಕಲೆ ಹಾಕಲು ಸಾಧ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications