For Quick Alerts
ALLOW NOTIFICATIONS  
For Daily Alerts
 

IPL 2025: ಕೋಲ್ಕತ್ತಾ ಎದುರು ಗೆಲುವಿನ ನಿರೀಕ್ಷೆಯಲ್ಲಿ ಪಂಜಾಬ್; ಶ್ರೇಯಸ್ ಅಯ್ಯರ ಆಟದ ಮೇಲೆ ಚಿತ್ತ

ಐಪಿಎಲ್ 2025 ರಲ್ಲಿ ಲೀಗ್ ಹಂತದ ಪಂದ್ಯಗಳು ಭಾರಿ ಕುತೂಹಲ ಮೂಡಿಸಿವೆ. ಈಗ ಪ್ರತಿಯೊಂದು ಪಂದ್ಯವನ್ನು ಪ್ಲೇ ಆಫ್‌ಗೆ ಬಹಳ ಮುಖ್ಯವೆಂದು ಆಡಲಾಗುತ್ತಿದೆ. ಈ ಪಂದ್ಯಗಳಲ್ಲಿ ಪಡೆದ ಅಂಕಗಳು ಪಾಯಿಂಟ್ ಟೇಬಲ್‌ನಲ್ಲಿ ಆಗ್ರಸ್ಥಾನ ಪಡೆಯಲು ಸಹಾಯ ಮಾಡಲಿವೆ. ಐಪಿಎಲ್ 2025ರ 31ನೇ ಪಂದ್ಯವು ಮಂಗಳವಾರ, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಪಂಜಾಬ್ ತಂಡದ ತವರು ಮೈದಾನವಾದ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ.

ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಕಳೆದ ಮೂರು ಪಂದ್ಯಗಳಲ್ಲಿ ಎರಡು ಸೋಲುಗಳನ್ನು ಅನುಭವಿಸಿದೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಕಳೆದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಗಳಿಸಿದೆ.

Punjab Kings vs Kolkata Knight Riders IPL 2025 31th Match Preview

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿಯೂ ಬ್ಯಾಟರ್ಸ್‌ ಅಬ್ಬರವಿದ್ದು, ಬೌಲಿಂಗ್‌ನಲ್ಲಿ ಕೊಂಚ ಸುಧಾರಣೆ ಕಾಣಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕೋಲ್ಕತ್ತಾ ಎದುರು ಪಂಜಾಬ್ ಗೆಲುವಿನ ನಿರೀಕ್ಷೆಯಲ್ಲಿದೆ.

ಹೆಡ್‌ ಟು ಹೆಡ್‌

ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಲವು ರೋಚಕ ಪಂದ್ಯಗಳು ನಡೆದಿವೆ. ಉಬಭ ತಂಡಗಳು ಇಲ್ಲಿವರೆಗೆ ಒಟ್ಟು 33 ಪಂದ್ಯಗಳಲ್ಲಿ ಕೆಕೆಆರ್ 21 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ 12 ರಲ್ಲಿ ಜಯ ಕಂಡಿದೆ. ಆದರೆ, ಪಂಜಾಬ್ ಕಳೆದ ಮೂರು ಪಂದ್ಯಗಳಲ್ಲಿ ಎರಡಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದೆ. ಇಂದಿನ ಪಂದ್ಯ ಕೂಡ ಕೂತುಹಲ ಮೂಡಿಸಿದೆ. ಕಳೆದ ಬಾರಿ ಕೋಲ್ಕತ್ತಾ ತಂಡವನ್ನು ಚಾಂಪಿಯನ್ ಮಾಡಿದ ನಾಯಕ ಶ್ರೇಯಸ್ ಅಯ್ಯರ್ ಈಗ ಪಂಜಾಬ್ ತಂಡದವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ತಮ್ಮ ಮಾಜಿ ತಂಡದ ವಿರುದ್ಧ ಅಯ್ಯರ್ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲಿದೆ.

ಪಿಚ್ ವರದಿ

ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ತವರಿನಲ್ಲಿ ಅದೃಷ್ಟ ಕೈ ಹಿಡಿದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೂ ತವರಿನ ಮೈದಾನದಲ್ಲಿ ಗೆಲುವು ಸಿಕ್ಕಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ಯಾರ ಪರವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಪಿಚ್‌ನಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 200 ಕ್ಕೂ ಹೆಚ್ಚು ರನ್‌ಗಳನ್ನು ಕಲೆ ಹಾಕಿವೆ. ಹೀಗಾಗಿ ಪಿಚ್ ಬ್ಯಾಟರ್ ಸ್ನೇಹಿಯಾಗಿರುವುದು ಕಾಣಿಸುತ್ತಿದೆ. ಇಂದಿನ ಪಂದ್ಯದಲ್ಲಿಯೂ ರನ್ ಮಳೆ ಸುರಿಯುವ ಸಾಧ್ಯತೆಯಿದೆ. ಟಾಸ್ ಗೆದ್ದವರು ಮೊದಲಿ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು.

ಲಕ್ನೋ ಟಾಪ್‌ ರನ್‌ ಗೆಟರ್ಸ್‌

ಅಜಿಂಕ್ಯಾ ರಹಾನೆ- 6 ಪಂದ್ಯ, 204 ರನ್
ಕ್ವಿಂಟನ್ ಡಿ ಕಾಕ್- 6 ಪಂದ್ಯ, 141 ರನ್
ಅಂಗ್ಕ್ರಿಶ್ ರಘುವಂಶಿ- 6 ಪಂದ್ಯ, 133 ರನ್

ಟಾಪ್‌ ವಿಕೆಟ್‌ ಟೇಕರ್ಸ್‌

ವರುಣ್ ಚಕ್ರವರ್ತಿ- 6 ಪಂದ್ಯ, 8 ವಿಕೆಟ್
ಹರ್ಷಿತ್ ರಾಣಾ- 6 ಪಂದ್ಯ, 7 ವಿಕೆಟ್
ವೈಭವ್ ಆರೋರಾ- 5 ಪಂದ್ಯ, 7 ವಿಕೆಟ್

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್-11: ಅಜಿಂಕ್ಯಾ ರಹಾನೆ (ನಾಯಕ) ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಮೊಯಿನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.

ಲಕ್ನೋ ಟಾಪ್‌ ರನ್‌ ಗೆಟರ್ಸ್‌

ಶ್ರೇಯಸ್ ಅಯ್ಯರ್- 5 ಪಂದ್ಯ, 250 ರನ್
ಪ್ರಿಯಾಂಶ್ ಆರ್ಯ- 5 ಪಂದ್ಯ, 194 ರನ್
ನೆಹಾಲ್ ವಧೇರಾ- 4 ಪಂದ್ಯ, 141 ರನ್

ಟಾಪ್‌ ವಿಕೆಟ್‌ ಟೇಕರ್ಸ್‌

ಅರ್ಷದೀಪ್ ಸಿಂಗ್- 5 ಪಂದ್ಯ, 7 ವಿಕೆಟ್
ಲಾಕಿ ಫರ್ಗುಸನ್- 4 ಪಂದ್ಯ, 5 ವಿಕೆಟ್
ಗ್ಲೆನ್ ಮ್ಯಾಕ್ಸ್‌ವೆಲ್‌- 5 ಪಂದ್ಯ, 3 ವಿಕೆಟ್

ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್-11: ಶ್ರೇಯಸ್ ಅಯ್ಯರ್(ನಾಯಕ) ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್‌ಕೀಪರ್), ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಹಾಲ್.

Story first published: Tuesday, April 15, 2025, 7:32 [IST]
Other articles published on Apr 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+