PBKS vs MI: ಗೆಲುವಿನ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್
ಧರ್ಮಶಾಲಾ: 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಂಜಾಬ್ ಕಿಂಗ್ಸ್ ಸತತ ನಾಲ್ಕು ಸೋಲುಗಳನ್ನು ಕಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಆವೃತ್ತಿಯ ಲೀಗ್ ಹಂತದ 58ನೇ ಪಂದ್ಯದಲ್ಲಿ ಪಂಜಾಬ್, ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಲೀಗ್ ಹಂತದಲ್ಲೇ ಹೊರ ನಡೆದಿದ್ದು, ಪಂಜಾಬ್‌ಗೆ ಈ ಪಂದ್ಯ ಮಹತ್ವದಾಗಿದೆ.
ನಾಲ್ಕು ಸೋಲಿನ ನೋವನ್ನು ಮರೆತು ಪಂಜಾಬ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಲು ಇದು ಒಳ್ಳೆಯ ಅವಕಾಶವಾಗಿದೆ. ಇದೇ ಅಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬಹುದಾದ ಪಂದ್ಯವನ್ನು ಪಂಜಾಬ್ ಕೈ ಚೆಲ್ಲಿತು. ಹೀಗಾಗಿ ಪ್ಲೇ ಆಫ್ ಕನಸು ಸಹ ಈಗ ಮುಂದಿನ ಪಂದ್ಯಗಳ ಫಲಿತಾಂಶದ ಮೇಲೆ ನಿಂತಿದೆ. ಪಂಜಾಬ್ ತಂಡ ಮುಂಬೈ ತಂಡವನ್ನು ಮಣಿಸಿದರೆ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ 19 ಪಂದ್ಯಗಳಲ್ಲಿ 6 ಗೆಲುವು, 4 ಸೋಲು, 1 ಪಂದ್ಯ ರದ್ದಾಗದ್ದರಿಂದ ಪಂಜಾಬ್ 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಂಜಾಬ್ ಈ ಲೀಗ್‌ನಲ್ಲಿ ಇನ್ನು ಮೂರು ಪಂದ್ಯಗಳನ್ನು ಆಡಲಿದ್ದು ಈ ಮೂರು ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್ ಆಸೆ ಫಲಿಸುತ್ತದೆ.
ಒತ್ತಡದಲ್ಲಿ ಪಂಜಾಬ್
ಪಂಜಾಬ್ ತಂಡದಲ್ಲಿರುವ ಯುವ ಆಟಗಾರರಾದ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಉತ್ತಮ ಆರಂಭವನ್ನು ನೀಡುತ್ತಿದ್ದಾರೆ. ಈ ಆಟಗಾರರು ಮುಂಬೈ ಬೌಲರ್‌ಗಳ ತಂತ್ರವನ್ನು ಅರಿತು ಬ್ಯಾಟ್ ಮಾಡಿ ಪವರ್ ಪ್ಲೇನಲ್ಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಕೂಪರ್ ಕೋನೊಲಿ ಹಾಗೂ ಶ್ರೇಯಸ್ ಅಯ್ಯರ್ ಅವರು ಮಧ್ಯದ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಅನಿವಾರ್ಯತೆ ಇದೆ. ಉಳಿದ ಬ್ಯಾಟರ್‌ಗಳು ಜವಾಬ್ದಾರಿಯುತ ಆಟವನ್ನು ಆಡಿದರೆ ಜಯದ ಆಸೆ ಫಲಿಸುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಬಿಗುವಿನ ದಾಳಿ ನಡೆಸಿದ್ದರು. ಈ ದಾಳಿಯನ್ನೇ ಮುಂದುವರೆಸುವ ಅನಿವಾರ್ಯತೆ ಇದೆ. ಮಾರ್ಕೊ ಜಾನ್ಸನ್, ಮಾರ್ಕಸ್ ಸ್ಟೋಯ್ನಿಸ್ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ವಿಕೆಟ್ ಬೇಟೆ ನಡೆಸಬೇಕಿದೆ. ಪಿಚ್ ಮರ್ಮ ಅರಿತು ಯುಜುವೇಂದ್ರ ಚಹಾಲ್ ಅವರಿಗೆ ಬೌಲಿಂಗ್ ನೀಡಬೇಕಾಗುತ್ತದೆ. ಮುಂಬೈ ವಿರುದ್ಧದ ಗೆಲುವು ನಿಶ್ಚಿತವಾಗಿ ಪಂಜಾಬ್‌ಗೆ ಹೊಸ ಬೂಸ್ಟ್ ನೀಡಲಿದೆ.
ಮುಂಬೈ ಇಂಡಿಯನ್ಸ್ ಈಗಾಗಲೇ ಲೀಗ್‌ನಿಂದ ಹೊರ ನಡೆದಿದೆ. ಆದರೆ ಮುಂದಿನ ಆವೃತ್ತಿಯ ದೃಷ್ಟಿಯಿಂದ ತಂಡದ ಸಂಯೋಜನೆಯತ್ತ ಗಮನ ಹರಿಸಲಿದೆ. ಅನುಭವಿ ಆಟಗಾರರ ದಂಡೇ ಈ ತಂಡದಲ್ಲಿ ಇದ್ದು, ಆಟಗಾರರು ಪರಿಸ್ಥಿತಿಗೆ ಅನುಗುಣವಾಗಿ ಆಡಿದರೆ ಪಂಜಾಬ್‌ಗೆ ಶಾಕ್ ನೀಡಬಹುದಾಗಿದೆ. ಜಸ್ಪ್ರೀತ್ ಬುಮ್ರಾ ತಮ್ಮ ಹಳೆದ ಖದರ್‌ನಲ್ಲಿ ಕಾಣಿಸಿಕೊಳ್ಳಬೇಕಿದೆ. ಅಂದಾಗ 2 ಅಂಕದ ಕನಸು ನನಸಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications