For Quick Alerts
ALLOW NOTIFICATIONS  
For Daily Alerts
 

ಚೇಸಿಂಗ್ ಸ್ಟಾರ್ ವಿರಾಟ್ ಆಟೋಗ್ರಾಫ್ ಸಿಕ್ಕಿದ್ದಕ್ಕೆ ಕುಣಿದು ಉರುಳಾಡಿದ ಪುಟ್ಟ ಪೋರ: ವಿಡಿಯೋ ವೈರಲ್

ಭಾನುವಾರದಿಂದ ಪರ್ತ್‌ ಅಂಗಳದಲ್ಲಿ ಬಹು ನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಅವರು ಅಂಗಳಕ್ಕೆ ಇಳಿಯಲಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸುಮಾರು 7 ತಿಂಗಳ ಬಳಿಕ ಈ ಸ್ಟಾರ್ ಆಟಗಾರರು ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳಿಗೆ ಆಸೀಸ್‌ನಲ್ಲಿ ಕೆಲವು ಪಂದ್ಯಗಳು ಸಿಗಲಿವೆ. ಈ ಇಬ್ಬರ ಸ್ಟಾರ್ ಆಟಗಾರರ ಆಟವನ್ನು ಕಣ್ಣು ತುಂಬಿಕೊಂಡ ಅಭಿಮಾನಿಗಳು ಹುಚ್ಚರಂತೆ ಕುಣಿದಿದ್ದನ್ನು ನೋಡಿದ್ದೇವೆ. ಆದರೆ ಭಾರತ ತಂಡ ಅಭ್ಯಾಸ ನಡೆಸುವ ವೇಳೆ ಪುಟ್ಟ ಬಾಲಕ, ವಿರಾಟ್‌ ಕೊಹ್ಲಿ ಅವರ ಅಟೋಗ್ರಾಫ್‌ ಪಡೆದು ಸಂಭ್ರಮಿಸಿದ ಪರಿ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Pure Joy Young Fan s Viral Reaction After Getting Virat Kohli s Autograph in Perth

ಭಾರತ ತಂಡ ಆಸ್ಟ್ರೇಲಿಯಾಕ್ಕೆ ತಲುಪುತಿದ್ದಂತೆ ಒಂದು ದಿನ ವಿಶ್ರಾಂತಿ ಮಾಡಿತು. ಅಕ್ಟೋಬರ್ 16 ರಂದು ತಂಡ ತನ್ನ ಮೊದಲ ಅಭ್ಯಾಸವನ್ನು ಆರಂಭಿಸಿತು. ಈ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಮೇಲೆ ನೆಟ್ಟಿದ್ದವು. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ಅಲ್ಲದೆ ಅವರೊಂದಿಗೆ ಫೋಟೋ ಹಾಗೂ ಆಟೋಗ್ರಾಫ್‌ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದರು.

ಪುಟ್ಟ ಬಾಲಕನ ಸಂಭ್ರಮಾಚರಣೆ ವೈರಲ್

ಚಾಂಪಿಯನ್ಸ್‌ ಟ್ರೋಫಿಯ ಬಳಿಕ ಅಂಗಳಕ್ಕೆ ಇಳಿಯುತ್ತಿರುವ ಸ್ಟಾರ್ ಆಟಗಾರರ ಆಟವನ್ನು ನೋಡಲು ಆಸ್ಟ್ರೇಲಿಯಾದಲ್ಲೂ ಅಭಿಮಾನಿಗಳು ಕಾತುರರಾಗಿದ್ದಾರೆ. ಇದೇ ವೇಳೆ ವಿರಾಟ್‌ ಕೊಹ್ಲಿ ಅಭ್ಯಾಸವನ್ನು ಮುಗಿಸಿ ಮರಳುತ್ತಿದ್ದಾಗ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಪುಟ್ಟ ಪೋರ್‌ ವಿರಾಟ್ ಅವರ ಆಟೋಗ್ರಾಫ್ ಪಡೆದು ಕುಣಿದು ಕುಪ್ಪಳಿಸಿದ್ದಾನೆ. ಈ ಪುಟ್ಟ ಪೋರನ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಇದೇ ವೇಳೆ ಇವರಿಬ್ಬರಿಗೂ ಇದೇ ಕೊನೆಯ ಏಕದಿನ ಸರಣಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಸರಣಿಯಲ್ಲಿ ತಮ್ಮ ಅಬ್ಬರದ ಪ್ರದರ್ಶನವನ್ನು ನೀಡಿ ತಾವು ಏಕದಿನ ವಿಶ್ವಕಪ್‌ಗೆ ತಾವು ಅರ್ಹರು ಎಂದು ಸಾಬೀತು ಪಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಹಲವು ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್‌ ಹೆಡ್‌ ರೋಹಿತ್ ಶರ್ಮಾ, ಮುಂದಿನ ಏಕದಿನ ವಿಶ್ವಕಪ್ ಆಡಬೇಕು. ಅಲ್ಲದೆ ಭಾರತ ತಂಡ ಗೆಲ್ಲಬೇಕು ಎಂದು ಆಶೀಸಿದ್ದಾರೆ.

Story first published: Friday, October 17, 2025, 17:05 [IST]
Other articles published on Oct 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+