Purple Cap: 2 ಬಾರಿ ಪರ್ಪಲ್ ಕ್ಯಾಪ್ ಗೆದ್ದ 3 ಬೌಲರ್‌ಗಳು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ರೋಚಕತೆ ಹೆಚ್ಚುತ್ತಿದೆ. ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದು ಯಾರು? ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಇದೇ ವೇಳೆ ಎಲ್ಲರ ಕಣ್ಣುಗಳು ಪರ್ಪಲ್ ಕ್ಯಾಪ್ ಗೆಲ್ಲುವುದು ಯಾರು? ಎಂಬುದರ ಮೇಲೂ ನಿಂತಿದೆ. ಐಪಿಎಲ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಈ ಬಾರಿ ಈ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಮುಂಚೂಣಿಯಲ್ಲಿದ್ದಾರೆ.
ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲ ಬೌಲರ್. ಇವರು ಈಗಾಗಲೇ ಲೀಗ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಪರ್ಪಲ್ ಕ್ಯಾಪ್ ಪಡೆಯುವ ಕನಸು ಹೊಂದಿದ್ದಾರೆ. ಹಾಗಿದ್ದರೆ ಐಪಿಎಲ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪರ್ಪಲ್ ಕ್ಯಾಪ್ ಗೆದ್ದ ಆಟಗಾರರು ಯಾರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಐಪಿಎಲ್ ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಪರ್ಪಲ್ ಕ್ಯಾಪ್‌ನ್ನು ಎರಡು ಬಾರಿ ಗೆದ್ದ ಸಾಧನೆ ವೆಸ್ಟ್ ಇಂಡೀಸ್ ತಂಡದ ಡ್ವೇನ್ ಬ್ರಾವೋ ಅವರಿಗೆ ಸಲ್ಲುತ್ತದೆ. ಇವರು ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬೌಲಿಂಗ್ ಮಾಡಿ ಈ ಸಾಧನೆ ಮಾಡಿದ್ದಾರೆ. ಡೆತ್ ಓವರ್‌ಗಳಲ್ಲಿ ಕಮಾಲ್‌ನ ಬೌಲಿಂಗ್ ನಡೆಸುತ್ತಿದ್ದ ಬ್ರಾವೊ ವಿಕೆಟ್ ಬೇಟೆ ನಡೆಸಿ ಅಬ್ಬರಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ 2013 ಹಾಗೂ 2015ರಲ್ಲಿ ಒಟ್ಟು ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸಹ ತಮ್ಮದಾಗಿಸಿಕೊಂಡಿದ್ದಾರೆ.

ಭುವನೇಶ್ವರ್ ಕುಮಾರ್
ಬ್ರಾವೊ ಬಳಿಕ ಈ ಸಾಧನೆಯನ್ನು ಬ್ಯಾಕ್ ಟು ಬ್ಯಾಕ್ ಮಾಡಿದ ಹೆಗ್ಗಳಿಕೆ ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ಸಲ್ಲುತ್ತದೆ. ಇವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 2016 ಮತ್ತು 2017ರಲ್ಲಿ ಈ ಸಾಧನೆ ಮಾಡಿದ್ದಾರೆ. ಈಗ ಇವರು ಮೂರನೇ ಬಾರಿ ಈ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.

ಹರ್ಷಲ್ ಪಟೇಲ್
ಪರ್ಪಲ್ ಕ್ಯಾಪ್ ಎರಡು ಬಾರಿ ಗೆದ್ದ ಆಟಗಾರರ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಅವರಿಗೂ ಸ್ಥಾನ. ಇವರು ಎರಡು ಬೇರೆ ಬೇರೆ ಫ್ರಾಂಚೈಸಿಗಳ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದಾರೆ. 2021ರಲ್ಲಿ ಹರ್ಷಲ್ ಪಟೇಲ್ ಆರ್‌ಸಿಬಿ ಪರ ಆಡುವಾಗ ಈ ಸಾಧನೆ ಮಾಡಿದರೆ, 2024ರಲ್ಲಿ ಪಂಜಾಬ್ ಕಿಂಗ್ಸ್ ಪರ ಬೌಲ್ ಮಾಡಿ ಈ ಸಾಧನೆ ಮಾಡಿದ್ದಾರೆ.
ಪರ್ಪಲ್ ಕ್ಯಾಪ್ ಗೆದ್ದ ಬೌಲರ್‌ಗಳ ಪಟ್ಟಿ
2008, ಸೊಹೈಲ್ ತನ್ವೀರ್, ರಾಜಸ್ಥಾನ್ ರಾಯಲ್ಸ್, 22
2009, ಆರ್.ಪಿ.ಸಿಂಗ್, ಡೆಕ್ಕನ್ ಚಾರ್ಜರ್ಸ್, 23
2010, ಪ್ರಗ್ಯಾನ್ ಓಜಾ, ಡೆಕ್ಕನ್ ಚಾರ್ಜರ್ಸ್, 21
2011, ಲಸಿತ್ ಮಾಲಿಂಗ, ಮುಂಬೈ ಇಂಡಿಯನ್ಸ್, 28
2012, ಮೋರ್ನೆ ಮೊರ್ಕೆಲ್, ಡೆಲ್ಲಿ ಡೇರ್‌ಡೆವಿಲ್ಸ್, 25
2013, ಡ್ವೇನ್ ಬ್ರಾವೋ, ಚೆನ್ನೈ ಸೂಪರ್ ಕಿಂಗ್ಸ್, 32
2014, ಮೋಹಿತ್ ಶರ್ಮಾ, ಚೆನ್ನೈ ಸೂಪರ್ ಕಿಂಗ್ಸ್, 23
2015, ಡ್ವೇನ್ ಬ್ರಾವೋ, ಚೆನ್ನೈ ಸೂಪರ್ ಕಿಂಗ್ಸ್, 26
2016, ಭುವನೇಶ್ವರ್ ಕುಮಾರ್, ಸನ್‌ರೈಸರ್ಸ್ ಹೈದರಾಬಾದ್, 23
2017, ಭುವನೇಶ್ವರ್ ಕುಮಾರ್, ಸನ್‌ರೈಸರ್ಸ್ ಹೈದರಾಬಾದ್, 26
2018, ಆಂಡ್ರ್ಯೂ ಟೈ, ಕಿಂಗ್ಸ್ XI ಪಂಜಾಬ್, 24
2019, ಇಮ್ರಾನ್ ತಾಹೀರ್, ಚೆನ್ನೈ ಸೂಪರ್ ಕಿಂಗ್ಸ್, 26
2020, ಕಗಿಸೊ ರಬಾಡ, ಡೆಲ್ಲಿ ಕ್ಯಾಪಿಟಲ್ಸ್, 30
2021, ಹರ್ಷಲ್ ಪಟೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, 32
2022, ಯುಜ್ವೇಂದ್ರ ಚಹಾಲ್, ರಾಜಸ್ಥಾನ್ ರಾಯಲ್ಸ್, 27
2023, ಮೊಹಮ್ಮದ್ ಶಮಿ, ಗುಜರಾತ್ ಟೈಟನ್ಸ್, 28
2024, ಹರ್ಷಲ್ ಪಟೇಲ್, ಪಂಜಾಬ್ ಕಿಂಗ್ಸ್, 24
2025, ಪ್ರಸಿದ್ಧ್ ಕೃಷ್ಣ, ಗುಜರಾತ್ ಟೈಟನ್ಸ್, 25
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications