Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Purple Cap: ಪರ್ಪಲ್‌ ಕ್ಯಾಪ್‌ ಮೇಲೆ ಕನ್ನಡಿಗ ಪ್ರಸಿದ್ಧ ಕೃಷ್ಣ, ಕುಲ್‌ದೀಪ್‌ ಕಣ್ಣು

ಇಂಡಿಯನ್ ಪ್ರೀಮಿಯರ್ ಹಾಫ್‌ ವೇ ಮಾರ್ಕ್‌ನತ್ತ ಸಾಗುತ್ತಿದೆ. ಈ ವೇಳೆ ಹಲವು ಆಟಗಾರರು ತಮ್ಮ ಸ್ಥಿರ ಪ್ರದರ್ಶನದಿಂದ ಅಭಿಮಾನಿಗ ಗಮನ ಸೆಳೆದಿದ್ದಾರೆ. ಇನ್ನು ಹಲವು ಆಟಗಾರರು ಲಯ ಕಂಡುಕೊಳ್ಳಲು ಹೆಣಗಾಟ ನಡೆಸಿದ್ದಾರೆ. ಯುವ ಆಟಗಾರರು ತಮ್ಮ ಶಿಸ್ತು ಬದ್ಧ ಆಟದ ನೆರವಿನಿಂದ ಅಬ್ಬರಿಸುತ್ತಿದ್ದಾರೆ. ಇದೇ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ.

ಶನಿವಾರ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡುವ ಪ್ರಸಿದ್ಧ ಕೃಷ್ಣ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕುಲ್‌ದೀಪ್‌ ಯಾದವ್ ಕಣಕ್ಕೆ ಇಳಿಯಲಿದ್ದು ಪರ್ಪಲ್‌ ಕ್ಯಾಪ್‌ ಗಾಗಿ ಕಾದಾಟ ನಡೆಸಲಿದ್ದಾರೆ.

Purple Cap Race Heats Up Prasidh Krishna and Kuldeep Yadav Eye Top Spot in IPL 2025

ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಪರ ವೇಗದ ಬೌಲಿಂಗ್ ನೊಗವನ್ನು ಹೊತ್ತು ಕೊಂಡಿರುವ ಪ್ರಸಿದ್ಧ ಕೃಷ್ಣ, ಅಮೋಘ ಬೌಲಿಂಗ್ ನಡೆಸುತ್ತಿದ್ದಾರೆ. ಇವರು ಈ ಬಾರಿಯ ಐಪಿಎಲ್‌ನಲ್ಲಿ ಮಿಡ್ಲ್ ಓವರ್‌ಗಳಲ್ಲಿ ಬೌಲಿಂಗ್ ಮಾಡುತ್ತಿದ್ದು ಪರಿಣಾಮ ಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರನ್‌ಗಳಿಗೆ ಕಡಿವಣಾ ಹಾಕಿ ವಿಕೆಟ್‌ ಬೇಟೆ ನಡೆಸುತ್ತಿರುವ ಪ್ರಸಿದ್ಧ ಪರ್ಪಲ್ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ.

ಪ್ರಸಕ್ತ ಐಪಿಎಲ್‌ನಲ್ಲಿ ಅಪ್‌ಡೇಟ್‌ ವರ್ಷನ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ಪ್ರಸಿದ್ಧ ಆರ್ಭಟಿಸಿದ್ದಾರೆ. ತಮ್ಮ ಲೈನ್‌ ಹಾಗೂ ಲೆಂಥ್‌ನಿಂದ ಎದುರಾಳಿಗಳನ್ನು ಕಾಡುವ ಪ್ರಸಿದ್ಧ, ಸ್ಲೋವರ್ ಒನ್‌ನಿಂದಲೂ ಕಾಡುತ್ತಿದ್ದಾರೆ. ಇದೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ ನೀಡಿ 2 ವಿಕೆಟ್‌ ಪಡೆದ ಇವರ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಪ್ರಸಿದ್ಧ ಆಡಿದ 6 ಪಂದ್ಯಗಳಲ್ಲಿ 10 ವಿಕೆಟ್‌ ಕಬಳಿಸಿದ್ದಾರೆ.

Purple Cap Race Heats Up Prasidh Krishna and Kuldeep Yadav Eye Top Spot in IPL 2025

ಪ್ರಸಿದ್ಧ ಕೃಷ್ಣ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್ ಟೈಟನ್ಸ್‌ ಮಧ್ಯಾಮ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಪ್ರಸಿದ್ಧ ಅವರ ಮೇಲೆ ನೆಟ್ಟಿರಲಿದೆ. ಈ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ 3 ವಿಕೆಟ್‌ ಪಡೆದಿದ್ದೇ ಆದಲ್ಲಿ ಪರ್ಪಲ್‌ ಕ್ಯಾಪ್‌ ಪಡೆಯ ಬಹುದಾಗಿದೆ.

ಕುಲ್‌ದೀಪ್ ಅಮೋಘ

ಡೆಲ್ಲಿ ಕ್ಯಾಪಿಟಲ್ಸ್‌ ಪರ ಬೌಲಿಂಗ್ ಮಾಡುವ ಕುಲ್‌ದೀಪ್ ಯಾದವ್ ಸಹ ಪರ್ಪಲ್‌ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಸಹ ಈ ಟೂರ್ನಿಯಲ್ಲಿ ಬಿಗುವಿ ದಾಳಿ ನಡೆಸುತ್ತಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಇವರು ಆಡಿದ 6 ಪಂದ್ಯಗಳಲ್ಲಿ 11 ವಿಕೆಟ್‌ ಪಡೆದಿದ್ದಾರೆ. ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆದಿದ್ದೇ ಆದಲ್ಲಿ ಇವರು ಸಹ ಪರ್ಪಲ್‌ ಕ್ಯಾಪ್ ಪಡೆಯಬಹುದು. ಸದ್ಯ ಪರ್ಪಲ್‌ ಕ್ಯಾಪ್‌ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸ್ಪಿನ್ ಬೌಲ್‌ ನೂರ್‌ ಅಹ್ಮದ್‌ ಆಡಿದ 7 ಪಂದ್ಯಗಳಲ್ಲಿ 12 ವಿಕೆಟ್‌ ಕಬಳಿಸಿದ್ದಾರೆ.

18ನೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

  1. ನೂರ್ ಅಹ್ಮದ್‌ (ಸಿಎಸ್‌ಕೆ), 7 ಪಂದ್ಯ, 12 ವಿಕೆಟ್‌
  2. ಜೋಶ್‌ ಹ್ಯಾಜಲ್‌ವುಡ್‌ (ಆರ್‌ಸಿಬಿ), 7 ಪಂದ್ಯ, 12 ವಿಕೆಟ್‌
  3. ಕುಲ್‌ದೀಪ್ ಯಾದವ್ (ಡಿಸಿ), 6 ಪಂದ್ಯ, 11 ವಿಕೆಟ್‌
  4. ಹಾರ್ದಿಕ್ ಪಾಂಡ್ಯ (ಎಂಐ), 6 ಪಂದ್ಯ, 11 ವಿಕೆಟ್‌
  5. ಖಲೀಲ್‌ ಅಹ್ಮದ್‌ (ಸಿಎಸ್‌ಕೆ), 7 ಪಂದ್ಯ, 11 ವಿಕೆಟ್‌

Story first published: Saturday, April 19, 2025, 8:43 [IST]
Other articles published on Apr 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+