ಕರ್ನಾಟಕ ಕ್ರಿಕೆಟ್ ತಂಡದ ಕೋಚ್ ಆಗಿ ಶಶಿಕಾಂತ್
ಬೆಂಗಳೂರು, ಏಪ್ರಿಲ್ 27: ಕರ್ನಾಟಕ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಆಟಗಾರ ಪಿ.ವಿ. ಶಶಿಕಾಂತ್ ಅವರನ್ನು ನೇಮಿಸಲಾಗಿದೆ. ಜಿ.ಕೆ.ಅನಿಲ್ ಕುಮಾರ್ ಅವರು ಸಹಾಯಕ ಕೋಚ್ ಅಗಿದ್ದಾರೆ.
ಕಳೆದ 5 ವರ್ಷಗಳಿಂದ ಜೆ.ಅರುಣ್ ಕುಮಾರ್ ಹಾಗೂ ಮನ್ಸೂರ್ ಅಲಿ ಖಾನ್ ಅವರು ಕರ್ನಾಟಕ ತಂಡದ ಕೋಚ್ ಗಳಾಗಿದ್ದರು. 51 ವರ್ಷದ ಶಶಿಕಾಂತ್ ಹಾಗೂ 43 ವರ್ಷದ ಅನಿಲ್ ಕುಮಾರ್ ಅವರು ಈಗ ಕೋಚ್ ಗಳಾಗಿ ಮುಂದಿನ ರಣಜಿ ಟ್ರೋಫಿ ಹಾಗೂ ದೇಶಿ ಕ್ರಿಕೆಟ್ ಋತುವಿನಲ್ಲಿ ತಂಡವನ್ನು ತರಬೇತಿಗೊಳಿಸಲಿದ್ದಾರೆ.

ಕೆಎಸ್ಸಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ 10 ವರ್ಷಗಳಿಂದ ಕರ್ನಾಟಕದ ವಿವಿಧ ವಯೋಮಿತಿ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವನ್ನು ಶಶಿಕಾಂತ್ ಹಾಗೂ ಅನಿಲ್ ಕುಮಾರ್ ಹೊಂದಿದ್ದಾರೆ.
'ಜಾಕ್ ಹಾಗೂ ಮ್ಯಾಕ್' ಜೋಡಿ ಖ್ಯಾತಿಯ ಅರುಣ್ ಕುಮಾರ್ ಹಾಗೂ ಮನ್ಸೂರ್ ಅಲಿ ಖಾನ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿಯಲ್ಲಿ 2 ಬಾರಿ ಚಾಂಪಿಯನ್ ಆಗಿದ್ದರೆ, 2 ಬಾರಿ ಕ್ವಾರ್ಟರ್ಫೈನಲ್ ಪ್ರವೇಶಿಸಿತ್ತು. ಜತೆಗೆ 2013-14 ಹಾಗೂ 2014-15ನೇ ಸಾಲಿನಲ್ಲಿ ದೇಶೀಯ ಪ್ರತಿಷ್ಠಿತ ಟೂರ್ನಿಗಳಾದ ರಣಜಿ ಟ್ರೋಫಿ, ವಿಜಯ ಹಜಾರೆ ಹಾಗೂ ಇರಾನಿ ಕಪ್ಗಳನ್ನು ಸತತ 2ನೇ ಬಾರಿ ಜಯಿಸಿದ ಸಾಧನೆ ಮಾಡಿತ್ತು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: PV Shashikanth to coach Karnataka
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications