For Quick Alerts
ALLOW NOTIFICATIONS  
For Daily Alerts
 

Badminton: ಪಿವಿ ಸಿಂಧು ಕ್ವಾರ್ಟರ್‌ ಫೈನಲ್‌ಗೆ: ಲಕ್ಷ್ಯ ಸೇನ್‌ಗೆ ಸೋಲು

ಕೌಲಾಲಂಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ ಸಿಂಧು 21-8, 21-13 ರಿಂದ ಜಪಾನ್‌ನ ಟೊಮೊಹಾ ಮಿಯಾಜಾಕಿ ವಿರುದ್ಧ ಭರ್ಜರಿ ಜಯ ಸಾಧಿಸಿದರು. ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು. 33 ನಿಮಿಷದ ಹೋರಾಟದಲ್ಲಿ ಸಿಂಧು ಭರ್ಜರಿ ಪ್ರದರ್ಶನ ನೀಡಿದರು. ಆರಂಭದಿಂದಲೂ ಸಿಂಧು ತಮ್ಮ ನೈಜ ಆಟವನ್ನು ಆಡಿ ಗಮನ ಸೆಳೆದರು.

PV Sindhu Cruises into Malaysia Open Quarterfinals Satwik-Chirag Duo Advances

ಮೊದಲ ಗೇಮ್‌ನ ಆರಂಭದಲ್ಲಿ ಉಭಯ ಆಟಗಾರ್ತಿಯರು ಅಂಕಗಳಿಸಲು ಕೊಂಚ ಹರಸಾಹಸ ಪಟ್ಟರು. ಆದರೆ ಸಿಂಧು 6-4 ರಿಂದ ಮುನ್ನಡೆ ಸಾಧಿಸಿದ್ದಾಗ ಅಮೋಘ ಪ್ರದರ್ಶನ ನೀಡಿ ಸತತ 13 ಅಂಕಗಳನ್ನು ಕಲೆ ಹಾಕಿದರು. ಈ ಮೂಲಕ ಸಿಂಧು 19-4 ರಿಂದ ಮುನ್ನಡೆ ಸಾಧಿಸಿದರು. ಅಲ್ಲದೆ ಮೊದಲ ಗೇಮ್‌ನ್ನು ಸುಲಭವಾಗಿ ಗೆದ್ದು ಬೀಗಿದರು. ಎರಡನೇ ಗೇಮ್‌ನಲ್ಲಿ ಜಪಾನ್ ಆಟಗಾರ್ತಿ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿದರು. ಈ ಗೇಮ್‌ನಲ್ಲೂ ಸಿಂಧು 11-8 ರಿಂದ ಮುನ್ನಡೆ ಸಾಧಿಸಿದರು. ಆದರೆ ಈ ಬಳಿಕ ಜಪಾನ್‌ ಆಟಗಾರ್ತಿ ಟೊಮೊಹಾ ಮಿಯಾಜಾಕಿ ಅವರಿಗೆ ಸಿಂಧು ಪುಟಿದೇಳುವ ಬಿಡಲಿಲ್ಲ.

ಸಿಂಧು ಅವರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ಅಕಾನೆ ಯಮಗುಚಿ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಉಭಯ ಆಟಗಾರ್ತಿಯರ ಗೆಲುವಿನ ಶೇಕಾಡ ಸಹ ಹೆಚ್ಚು ಕಡಿಮೆ ಒಂದೇ ರೀತಿಯಾಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ನಿರಾಸೆ

ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಆಯುಷ್‌ ಶೆಟ್ಟಿ ಹಿನ್ನಡೆ ಅನುಭವಿಸಿದರು. ಇವರು 18-21, 21-18, 12-21 ರಿಂದ ಶಿ ಯು ಕಿ ಅವರ ವಿರುದ್ಧ ಸೋಲು ಕಂಡರು. ಇನ್ನೊಂದು ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು 20-22, 15-20 ರಿಂದ ಲೀ ಚೆಕ್ ಯಿಯು ವಿರುದ್ಧ 53 ನಿಮಿಷಗಳ ಹೋರಾಟದಲ್ಲಿ ಸೋಲು ಕಂಡರು. ಲಕ್ಷ್ಯ ಸೇನ್‌ ಮೊದಲ ಗೇಮ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅಂಕಗಳಿಕೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದರು. ಪರಿಣಾಮ ಮೊದಲ ಗೇಮ್‌ ಕೈ ಚೆಲ್ಲಿದರು. ಅಲ್ಲದೆ ಎರಡನೇ ಗೇಮ್‌ನಲ್ಲಿ ನಿರಾಸೆ ಅನುಭವಿಸಿದರು.

PV Sindhu Cruises into Malaysia Open Quarterfinals Satwik-Chirag Duo Advances

ಚಿರಾಗ್‌ ಜೋಡಿಗೆ ಮುನ್ನಡೆ

ಪುರುಷರ ಡಬಲ್ಸ್‌ ಪಂದ್ಯದಲ್ಲಿ ಸಾತ್ವಿಕ್ ಸಾಯಿ ರಾಜ್ ರಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಭರ್ಜರಿ ಪ್ರದರ್ಶನ ನೀಡಿ ಮಲೇಷ್ಯಾ ಆಟಗಾರರನ್ನು ಮಣಿಸಿತು. ಭಾರತೀಯ ಜೋಡಿ 21-18, 21-11 ರಿಂದ 39 ನಿಮಿಷಗಳ ಹೋರಾಟದಲ್ಲಿ ಪಂದ್ಯ ಗೆದ್ದು ಬೀಗಿತು. ಪಂದ್ಯದ ಯಾವುದೇ ಹಂತದಲ್ಲೂ ಚಿರಾಗ್‌ ಜೋಡಿಯ ಸವಾಲನ್ನು ಮೀರಿ ನಿಲ್ಲುವಲ್ಲಿ ಮಲೇಷ್ಯಾ ಜೋಡಿ ವಿಫಲವಾಯಿತು.

Story first published: Thursday, January 8, 2026, 17:15 [IST]
Other articles published on Jan 8, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+