For Quick Alerts
ALLOW NOTIFICATIONS  
For Daily Alerts
 

PV Sindhu Wedding: ಸಪ್ತ ಪದಿ ತುಳಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಹಸಿ ಮಣೆ ಏರಿದ್ದಾರೆ. ಪಿವಿ ಸಿಂಧು ದತ್ತ ಸಾಯಿ ಅವರೊಂದಿಗೆ ಸಪ್ತ ಪದಿ ತುಳಿದಿದ್ದಾರೆ. ಅವರು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾದರು. ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿಯರಿಗೆ ಶುಭ ಹಾರೈಸಲು ಹಲವು ಗಣ್ಯರು ಭಾಗಿಯಾಗಿದ್ದರು. ಪಿವಿ ಸಿಂಧು ದತ್ತ ಸಾಯಿ ಅವರೊಂದಿಗೆ ಸಪ್ತ ಪದಿ ತುಳಿದಿದ್ದಾರೆ. ಹಿಂದೂ ಸಂಪ್ರದಾಯದಂತೆ ಸಿಂಧು ಮದುವೆ ಸಮಾರಂಭ ನಡೆಯಿತು. ಇವರಿಗೆ ಶುಭಹಾರೈಸಲು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಜರಿದ್ದರು. ಇವರು ವಧು, ವರರಿಗೆ ಶುಭ ಕೋರಿ ಸಾಮಾಜಿಕ ತಾಣದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಮಧುವೆಗೆ ಆಪ್ತ ನೆಂಟರು, ಖ್ಯಾತ ನಾಮ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಮಂಗಳವಾರ ಇವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅನೇಕ ಗಣ್ಯ ಅತಿಥಿಗಳು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಿಂಧು ಅವರ ಹಲವು ಕೇಂದ್ರ ಸಚಿವರು, ಹಲವು ಕ್ರೀಡಾ ಕ್ಷೇತ್ರದ ಸಾಧಕರಿಗೆ ಆಹ್ವಾನ ನೀಡುತ್ತಿದ್ದರು.

PV Sindhu Marries Venkat Dutta Sai in a Grand Udaipur Ceremony

ಸಾಮಾನ್ಯವಾಗಿ ಭಾರತೀಯ ವಧು ಮಧುವೆ ಸಮಾರಂಭದಲ್ಲಿ ಕೆಂಪು ಬಣ್ಣದ ಸಿರೆಯನ್ನು ಉಟ್ಟುಕೊಳ್ಳುವುದು ಸಾಮಾನ್ಯ. ಆದರೆ ಪಿವಿ ಸಿಂಧು ತಮ್ಮ ಮಧವೆಯ ಸಮಾರಂಭದಲ್ಲಿ ವಿಶೇಷ ಉಡುಗಿನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಕ್ರೀಂ ಬಣ್ಣದ ಸೀರೆಯನ್ನು ಅವರು ಉಟ್ಟಿದ್ದರು. ಸಿಂಧು ಗೋಲ್ಡನ್ ಕ್ರೀಮ್ ಕಲರ್ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರು. ಇಟಲಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಆದಾಗಲೂ ಇದೇ ರೀತಿಯ ವಿಶೇಷ ಉಡುಗೆ ತೊಟ್ಟಿದ್ದನ್ನು ಗಮನಿಸಬಹುದು.

ಪಿವಿ ಸಿಂಧು ಅವರು ಹಲವು ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಿದ್ದರು. ಸಿಂಧು ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮನೆಗೆ ತೆರಳಿ ಮಧುವೆ ಆಮಂತ್ರಣವನ್ನು ನೀಡಿದ್ದರು. ಅಲ್ಲದೆ ಕೇಂದ್ರ ಸಚಿವ ಶಿವಾರಜ್ ಸಿಂಗ್ ಚೌಹಾಣ್, ಆಂಧ್ರ ಪ್ರದೇಶ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ದು ಅವರಿಗೂ ಆಮಂತ್ರಣವನ್ನು ನೀಡಿದ್ದರು ಗಣ್ಯರು, ಆರತಕ್ಷತೆಗೆ ಆಗಮನಿಸುವ ಸಾಧ್ಯತೆ ಇದೆ.

ಸಿಂಧು ಸಾಧನೆ

ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಎರಡು ಒಲಿಂಪಿಕ್ಸ್‌ ಪದಕವನ್ನು ಬಾಚಿಕೊಂಡ ಮೊದಲ ಭಾರತದ ಮಹಿಳಾ ಆಟಗಾರ್ತಿ. ಇವರು ರಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಸೋತು ಬೆಳ್ಳಿಯನ್ನು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಸಾಧನೆ ಮಾಡಿದ ಸಾಧಕಿ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌ನಲ್ಲಿ ಸಿಂಧು ಅಮೋಘ ಸಾಧನೆ ಮಾಡಿದ್ದಾರೆ. 2019 ಟೂರ್ನಿಯಲ್ಲಿ ಬಂಗಾರ, 2017, 2018 ರಲ್ಲಿ ಬೆಳ್ಳಿ, 2013, 2014ರಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಉಳಿದಂತೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಇವರು ಎರಡು ಬಂಗಾರ, ಎರಡು ಬೆಳ್ಳಿ, ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಡಿದ್ದಾರೆ. ಇವರು ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ನಡೆದಿದ್ದ ಸೈಯದ್ ಮೋದಿ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದರು.

Story first published: Monday, December 23, 2024, 13:13 [IST]
Other articles published on Dec 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+