Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PV Sindhu: ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತಕ್ಕೆ ಪೆಟ್ಟು

ಇನ್ನೇನು ಕೆಲವೇ ದಿನಗಳಲ್ಲಿ ಚೀನಾದ ಕಿಂಗ್‌ಡಾವೊದಲ್ಲಿ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ 2025 ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಸಹ ಭಾಗವಹಿಸುತ್ತಿದೆ. ಆದರೆ ಟೂರ್ನಿಗೆ ಭಾರತ ತಂಡ ಮೈದಾನಕ್ಕೆ ಇಳಿಯುವ ಮುನ್ನವೇ ಆಘಾತ ಎದುರಾಗಿದೆ. 2025 ರ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ಗಾಗಿ ಭಾರತ ತನ್ನ 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ತಂಡದಲ್ಲಿ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಹೆಸರು ಸಹ ಸೇರಿಸಲಾಗಿತ್ತು. ಆದರೆ ಈ ಟೂರ್ನಿಗೂ ಅವರು ಒಂದು ಅವರು ಮಾಡಿರುವ ಆ ಒಂದು ಪೋಸ್ಟ್ ಸಖತ್ ವೈರಲ್ ಆಗ್ತಾ ಇದೆ.

ಪಿವಿ ಸಿಂಧು ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಮುಂಬರುವ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ 2025 ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಬಹಿರಂಗ ಪಡಿಸಿದ್ದಾರೆ. ಸಿಂಧು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

PV Sindhu Withdraws from Badminton Asia Mixed Team Championship 2025 Due to Injury

ಸಿಂಧು ಬರೆದಿದ್ದರಲ್ಲಿ ಏನಿದೆ?

ನನಗೆ ಈ ನಿರ್ಧಾರವನ್ನು ತಿಳಿಸುವುದು ಕಷ್ಟವಾಗಿದೆ. 2025 ರ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಪಿವಿ ಸಿಂಧು ಫೆಬ್ರವರಿ 9 ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಫೆ.4 ರಂದು ಗುವಾಹಟಿಯಲ್ಲಿ ತರಬೇತಿ ಪಡೆಯುವ ವೇಳೆ ಮಂಡಿರಜ್ಜು ನೋವು ಕಾಣಿಸಿಕೊಂಡಿದ್ದರಿಂದ ಹಿಂದೆ ಸರಿಯಬೇಕಾಯಿತು. ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಸಮಯ ಚೇತರಿಕೆಗೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಎಂಆರ್‌ಐ ವೇಳೆ ತಿಳಿದು ಬಂದಿದೆ. ಹೀಗಾಗಿ ನಾನು ಟೂರ್ನಿಯಿಂದ ಹಿಂದೆ ಸರಿಯಬೇಕಾಯಿತು. ಭಾರತ ತಂಡಕ್ಕೆ ನನ್ನ ಶುಭಾಶಯಗಳು ಎಂದು ತಿಳಿಸಿದ್ದಾರೆ.

2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆಯೂ ಸಿಂಧು ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಇವರು ವಿಶ್ವ ಚಾಂಪಿಯನ್‌ಶಿಪ್‌ಗಳು ಮತ್ತು ವಿಶ್ವ ಟೂರ್ ಫೈನಲ್‌ಗಳು ಸೇರಿದಂತೆ ಉಳಿದ ಎಲ್ಲಾ ಸ್ಪರ್ಧೆಗಳಿಂದ ಹೊರಗುಳಿಯ ಬೇಕಾಗಿತ್ತು.

PV Sindhu Withdraws from Badminton Asia Mixed Team Championship 2025 Due to Injury

2025 ರ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ, ಭಾರತ "ಜಿ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ಫೆಬ್ರವರಿ 12 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಮಕಾವು ವಿರುದ್ಧ ಕಾದಾಟ ನಡೆಸಲಿದೆ. ಇನ್ನು ಫೆ.13 ರಂದು ದಕ್ಷಿಣ ಕೋರಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

ಸಿಂಧು ಸಾಧನೆ

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌ನಲ್ಲಿ ಪಿವಿ ಸಿಂಧು 1 ಬಂಗಾರ, 2 ಬೆಳ್ಳಿ, 2 ಕಂಚಿನ ಸಾಧನೆ ಮಾಡಿದ್ದಾರೆ. ಇನ್ನು ಒಲಿಂಪಿಕ್ಸ್‌ನಲ್ಲಿ ಒಂದು ಬೆಳ್ಳಿ, ಒಂದು ಬಾರಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ ಶಿಪ್‌ಗಳಲ್ಲಿ ಹಾಗೂ ಕಳೆದ ಬಾರಿ ಏಷ್ಯಾ ಟೀಮ್ ಚಾಂಪಿಯನ್‌ ಶಿಪ್‌ನಲ್ಲಿ ಬಂಗಾರ ಗೆದ್ದ ತಂಡದ ಸದಸ್ಯೆ.

Story first published: Sunday, February 9, 2025, 16:50 [IST]
Other articles published on Feb 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+