For Quick Alerts
ALLOW NOTIFICATIONS  
For Daily Alerts
 

ಚತುಷ್ಕೋನ ಸರಣಿ: ಟ್ರೋಫಿ ಎತ್ತಿ ಹಿಡಿದ ಮನೀಶ್ ಪಾಂಡೆ ಬಳಗ

Quadrangular Series 2018: India B vs Australia A, India A vs South Africa A

ಬೆಂಗಳೂರು, ಆಗಸ್ಟ್ 29: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಬಿ ತಂಡ ಟ್ರೋಫಿಯನ್ನು ಗೆದ್ದುಕೊಂಡಿದೆ.

ನಾಯಕ ಮನೀಶ್ ಪಾಂಡೆ, ಮಯಂಕ್ ಅಗರ್ವಾಲ್ ಮತ್ತು ಶುಭ್‌ಮನ್ ಗಿಲ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನ ಹಾಗೂ ಬೌಲರ್‌ಗಳ ಚುರುಕಿನ ದಾಳಿಯಿಂದ ಟ್ರೋಫಿ ಭಾರತ ಬಿ ಪಾಲಾಯಿತು.

ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಆಸ್ಟ್ರೇಲಿಯಾ ಎ ತಂಡಕ್ಕೆ ಡಿ ಆರ್ಸಿ ಶಾರ್ಟ್ ಮತ್ತು ಉಸ್ಮಾನ್ ಖವಾಜಾ ಉತ್ತಮ ಆರಂಭ ಒದಗಿಸಿದರು.

Quadrangular Series 2018: India B vs Australia A, India A vs South Africa A

ಖವಾಜಾ ಔಟಾದ ಬಳಿಕ ಭಾರತದ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಪಡೆದುಕೊಂಡರು. ಕೊನೆಯಲ್ಲಿ ಅಲೆಕ್ಸ್ ಕ್ಯಾರಿ ಹೋರಾಟ ನಡೆಸಿದರೂ ಆಸ್ಟ್ರೇಲಿಯಾ 225ಕ್ಕೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಶ್ರೇಯಸ್ ಗೋಪಾಲ್, ಸಿದ್ಧಾರ್ಥ್ ಕೌಲ್, ನವದೀಪ್ ಸೈನಿ ಮತ್ತು ದೀಪಕ್ ಹೂಡಾ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದರು.

ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರಕಿತು. ಮಯಂಕ್ ಅಗರ್ವಾಲ್ ಮೈದಾನದ ಮೂಲೆ ಮೂಲೆಗೂ ಬೌಂಡರಿ ಬಾರಿಸಿದರು. ಆದರೆ, ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಗಾಯಗೊಂಡು ಹೊರನಡೆದರು.

ಅವರ ಸ್ಥಾನಕ್ಕೆ ಬಂದ ಶುಭ್‌ಮನ್ ಗಿಲ್ ಎರಡನೆಯ ಎಸೆತದಲ್ಲಿಯೇ ಬಿಲ್ಲಿ ಸ್ಟಾನ್ಲೇಕ್ ಬೌಲಿಂಗ್‌ನಲ್ಲಿ ಔಟಾದರು. ಆದರೆ ಅದು ನೋಬಾಲ್ ಆಗಿದ್ದರಿಂದ ಜೀವದಾನ ಪಡೆದುಕೊಂಡರು. ಬಳಿಕ ಎಚ್ಚರಿಕೆಯ ಆಟವಾಡಿದರು.

Quadrangular Series 2018: India B vs Australia A, India A vs South Africa A

ರನ್ ವೇಗ ಹೆಚ್ಚಿಸುವ ಭರದಲ್ಲಿ ಮಯಂಕ್ ವಿಕೆಟ್ ಒಪ್ಪಿಸಿದರು. ಬಳಿಕ ಜತೆಗೂಡಿದ ಮನೀಶ್ ಪಾಂಡೆ ಮತ್ತು ಶುಭ್‌ಮನ್ ಗಿಲ್ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು. ಬಿರುಸಿನ ಆಟವಾಡಿದ ಪಾಂಡೆ 53 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿದರು. ಅದರಲ್ಲಿ 3 ಸಿಕ್ಸರ್‌ಗಳಿದ್ದವು.

ಭಾರತ ಎ ತಂಡಕ್ಕೆ ಗೆಲುವು
ಬೌಲರ್‌ಗಳ ಅಮೋಘ ಪ್ರದರ್ಶನದಿಂದ ಭಾರತ ಎ ತಂಡವು ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಜಯಗಳಿಸಿ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕರಾದ ಆರ್. ಸಮರ್ಥ್ ಮತ್ತು ಅಭಿಮನ್ಯೂ ಈಶ್ವರನ್ ನಿಧಾನಗತಿಯ ಆಟಕ್ಕೆ ಮೊರೆಹೋದರು.

41 ರನ್ ಆಗುವಷ್ಟರಲ್ಲಿ ಇಬ್ಬರೂ ಪೆವಿಲಿಯನ್‌ಗೆ ಮರಳಿದ್ದರು. ಬಳಿಕ ಜತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಅಂಬಾಟಿ ರಾಯುಡು ಶತಕದ ಜತೆಯಾಟ ನೀಡಿ ಚೇತರಿಕೆ ಕೊಟ್ಟರು.

ಕೊನೆಯಲ್ಲಿ ನಿತೀಶ್ ರಾಣಾ, ಕೃಣಾಲ್ ಪಾಂಡ್ಯ ಬಿರುಸಿನ ಆಟವಾಡಿ ತಂಡ ಮೊತ್ತವನ್ನು 275ಕ್ಕೆ ಕೊಂಡೊಯ್ದರು.

ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳತೊಡಗಿತು. ಗಾಯದಿಂದ ಚೇತರಿಸಿಕೊಂಡಿರುವ ಭುವನೇಶ್ವರ್ ಕುಮಾರ್ ಮೊನಚಿನ ದಾಳಿ ನಡೆಸಿದರೆ, ಅವರಿಗೆ ದೀಪಕ್ ಚಾಹರ್ ಬೆಂಬಲ ನೀಡಿದರು. ಬಳಿಕ ಸ್ಪಿನ್ನರ್‌ಗಳು ಉಳಿದ ವಿಕೆಟ್ ತೆಗೆಯುವ ಶಾಸ್ತ್ರ ಮುಗಿಸಿದರು.

ದಕ್ಷಿಣ ಆಫ್ರಿಕಾ ಪರ ಸೆನುರನ್ ಮುತ್ತುಸಾಮಿ ಮತ್ತು ಫರ್ಹಾನ್ ಬೆಹೆರ್ಡೀನ್ ಮಾತ್ರ ಪ್ರತಿರೋಧ ನೀಡಿದರು. ಉಳಿದ ಆಟಗಾರರಿಂದ ಬೆಂಬಲ ದೊರಕದ ಕಾರಣ ಬೆಹರ್ಡೀನ್ ಕೊನೆಯಲ್ಲಿ ಏಕಾಂಗಿಯಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ ಎ: 225/10 (47.5) ಡಿ. ಆರ್ಸಿ ಶಾರ್ಟ್ 72, ಅಲೆಕ್ಸ್ ಕ್ಯಾರಿ 53, ಉಸ್ಮಾನ್ ಖವಾಜಾ 23, ಶ್ರೇಯಸ್ ಗೋಪಾಲ್ 50/3, ಸಿದ್ಧಾರ್ಥ್ ಕೌಲ್ 24/2, ನವದೀಪ್ ಸೈನಿ 33/2, ದೀಪಕ್ ಹೂಡಾ 41/2

ಭಾರತ ಬಿ: ಮಯಂಕ್ ಅಗರ್ವಾಲ್ 69, ಮನೀಶ್ ಪಾಂಡೆ 73*, ಶುಭ್‌ಮನ್ ಗಿಲ್ 66*, ಆಷ್ಟೊನ್ ಅಗರ್ 59/1

ಫಲಿತಾಂಶ: ಭಾರತ ಬಿ ತಂಡಕ್ಕೆ 9 ವಿಕೆಟ್ ಗೆಲುವು ಮತ್ತು ಟ್ರೋಫಿ
ಪಂದ್ಯಶ್ರೇಷ್ಠ: ಮನೀಶ್ ಪಾಂಡೆ

ಭಾರತ ಎ: 275/7 (50) ಶ್ರೇಯಸ್ ಅಯ್ಯರ್ 67, ಅಂಬಾಟಿ ರಾಯುಡು 66, ನಿತೀಶ್ ರಾಣಾ 30, ಸಂಜು ಸ್ಯಾಮ್ಸನ್ 26, ಬಿಯುರನ್ ಹೆಂಡ್ರಿಕ್ಸ್ 39/3, ರಾಬರ್ಟ್ ಫ್ರೈಲಿಂಕ್ 35/2

ದಕ್ಷಿಣ ಆಫ್ರಿಕಾ ಎ: 151/10 (37.1) ಸೆನುರನ್ ಮುತ್ತುಸಾಮಿ 40, ಫರ್ಹಾನ್ ಬೆಹೆರ್ಡೀನ್ 38*, ಪೀಟರ್ ಮಲಾನ್ 21, ಭುವನೇಶ್ವರ್ ಕುಮಾರ್ 33/3, ದೀಪಕ್ ಚಾಹರ್ 31/2, ಮಯಂಕ್ ಮಾರ್ಖಂಡೆ 30/2

ಫಲಿತಾಂಶ: ಭಾರತ ಎ ತಂಡಕ್ಕೆ 124 ರನ್ ಜಯ

Story first published: Wednesday, August 29, 2018, 18:17 [IST]
Other articles published on Aug 29, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+