ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾರಂಟೈನ್ ಮುಕ್ತಾಯ, ಅಭ್ಯಾಸ ಶುರು

ದುಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೂ ಮುನ್ನ ಪಾಲಿಸಬೇಕಾಗಿದ್ದ 6 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರ್ಣಗೊಳಿಸಿದೆ. ಇನ್ಮುಂದೆ ಆರ್‌ಸಿಬಿ ಅಭ್ಯಾಸ ಶುರು ಮಾಡಲಿದೆ (ಸಾಂದರ್ಭಿಕ ಚಿತ್ರ).
13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ 3 ವಾರಗಳ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ. ಗುರುವಾರ(ಆಗಸ್ಟ್ 27)ದಿಂದ ಬೆಂಗಳೂರು ತಂಡದ ಅಭ್ಯಾಸ ಶುರುವಾಗಲಿದೆ. ಜೈವಿಕ ಸುರಕ್ಷಾ ಪರಿಸರಲ್ಲಿದ್ದು ಆಟಗಾರರು ಅಭ್ಯಾಸ ನಡೆಸಲಿದ್ದಾರೆ.
'ಆಟಗಾರರ ಅಭ್ಯಾಸಕ್ಕೆ ಅನುಕೂಲವಾಗುವಂತೆ ವೈವಿದ್ಯಮಯ ಮತ್ತು ವೈಯಕ್ತಿಕ ಬೆಂಬಲ ನೀಡುವುದನ್ನು ನಮ್ಮ ಸಿಬ್ಬಂದಿ ಮುಂದುವರೆಸಲಿದ್ದಾರೆ. ಆಟಗಾರರ ಮನಸ್ಥಿತಿಗೆ ಒಗ್ಗಿಕೊಳ್ಳುವಂತ, ತುಂಬಾ ಕೌಶಲಭರಿತ ಬೆಂಬಲ ಸಿಬ್ಬಂದಿ ನಮ್ಮಲ್ಲಿದ್ದಾರೆ,' ಎಂದು ಆರ್‌ಸಿಬಿ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸನ್ ಹೇಳಿದ್ದಾರೆ.
ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭಗೊಳ್ಳುವ ಐಪಿಎಲ್ ನವೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಐಪಿಎಲ್ ಸಲುವಾಗಿ ಎಲ್ಲಾ 8 ತಂಡಗಳು ಯುಎಇ ತಲುಪಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications