ಬೌಲಿಂಗ್ ಬಳಿಕ ಬ್ಯಾಟಿಂಗ್‌ನಲ್ಲೂ ಅಶ್ವಿನ್ ಮಿಂಚು : "Ash anna" ಟ್ರೆಂಡಿಂಗ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊಚ್ಚು ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾಗಿದ್ದಾರೆ. ಆದರೆ ಇಂಗ್ಲೆಂಡ್‌ಗೆ ಬೃಹತ್ ಮೊತ್ತದ ಟಾರ್ಗೆಟ್ ನೀಡುವಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಯಶಸ್ವಿಯಾಗಿದ್ದಾರೆ. ಅದು ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್.
ಹೌದು ಈ ಇಬ್ಬರು ಆಟಗಾರರು ಉತ್ತಮ ಜೊತೆಯಾಟವನ್ನು ನೀಡುತ್ತಿದ್ದು ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಅರ್ಧ ಶತಕವನ್ನು ದಾಖಲಿಸಿದ್ದಾರೆ. ಇದರಲ್ಲಿ ಅನುಭವಿ ಆರ್ ಅಶ್ವಿನ್ ಬ್ಯಾಟಿಂಗ್ ಮೂಲಕ ಅದ್ಭುತ ಆಟವನ್ನು ಪ್ರದರ್ಶಿಸುತ್ತಿರುವುದು ನೆಟ್ಟಿಗರ ಹೃದಯ ಗೆದ್ದಿದೆ.
ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬ್ಯಾಟಿಂಗ್ ಸ್ಪೆಶಲಿಸ್ಟ್‌ಗಳೇ ಸ್ಪಿನ್ ದಾಳಿ ಎದುರಿಸಲು ಪರದಾಡುತ್ತಿದ್ದಾರೆ. ಆದರೆ ಇಂತಾ ಸವಾಲಿನ ಪಿಚ್‌ನಲ್ಲಿ ಆರ್ ಅಶ್ವಿನ್ ಸರಾಗವಾಗಿ ಆಡುತ್ತಿದ್ದಾರೆ. ಜೊತೆಗೆ ಅರ್ಧ ಶತಕವನ್ನು ಕೂಡ ದಾಖಲಿಸಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ 96 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ.
ಇನ್ನು ಆರ್ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ವೇಳೆ ಬೌಲಿಂಗ್‌ನಲ್ಲಿ ಐದು ವಿಕೆಟ್ ಪಡೆದಿದ್ದರು. ಈಗ ದ್ವಿತಿಯ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕವನ್ನು ದಾಖಲಿಸಿ ಮುನ್ನುಗ್ಗಿದ್ದಾರೆ. ಈ ಮೂಲಕ ಐದು ವಿಕೆಟ್‌ಗಳ ಗೊಂಚಲು ಹಾಗೂ ಅರ್ಧ ಶತಕವನ್ನು ಒಂದೇ ಪಂದ್ಯದಲ್ಲಿ ಆರು ಬಾರಿ ಪಡೆದ ಸಾಧನೆ ಮಾಡಿದ್ದಾರೆ. ಇದು ಭಾರತೀಯ ಆಟಗಾರರ ಪೈಕಿ ದಾಖಲೆಯಾಗಿದೆ. ಉಳಿದಂತೆ ಮಾಜಿ ನಾಯಕ ಕಪಿಲ್ ದೇವ್ ಹಾಗೂ ರವೀಂದ್ರ ಜಡೇಜಾ ತಲಾ 4 ಬಾರಿ ಈ ಸಾಧನೆಯನ್ನು ಮಾಡಿದ್ದಾರೆ. ಭುವನೇಶ್ವರ್ ಕುಮಾರ್ 2 ಬಾರಿ ಸಾಧನೆ ಮಾಡಿದ್ದಾರೆ.
ಇನ್ನು ಆರ್ ಅಶ್ವಿನ್ ತವರು ಚೆನ್ನೈನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಿಂಚಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಟ್ವಿಟ್ಟರ್‌ನಲ್ಲಿ "Ash anna" ಟ್ರೆಂಡಿಂಗ್‌ನಲ್ಲಿದ್ದು ಸಾಕಷ್ಟು ಸಂಖ್ಯೆಯಲ್ಲಿ ಟ್ವೀಟ್‌ಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications