For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಹೀಗೆ ಮಾಡಿದ್ರೆ... : ಆರ್‌ ಅಶ್ವಿನ್‌

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿನಾಗ್ಪುರದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾದ ಪರ ಭರವಸೆಯ ಆಟಗಾರರು ಅಬ್ಬರ ನಡೆಸಿ, ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದಾರೆ. ಆದರೆ ಟೀಮ್ ಇಂಡಿಯಾ ಕ್ಯಾಪ್ಟನ್‌ ರೋಹಿತ್ ಶರ್ಮಾ ಅವರ ನೀರಸ ಪ್ರದರ್ಶನ ಮೊದಲ ಪಂದ್ಯದಲ್ಲೂ ಮುಂದುವರೆದಿದೆ. ಇವರು ಮತ್ತೆ ಟೀಕಾಕರಿಗೆ ಆಹಾರವಾಗಿದ್ದಾರೆ.

ಗುರುವಾರ ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಇವರು ಏಳು ಎಸೆತಗಳನ್ನು ಎದುರಿಸಿ ಕೇವಲ 2 ರನ್‌ ಸಿಡಿಸಿದರು. ಈ ವೇಳೆ ರೋಹಿತ್ ಶರ್ಮಾ ಕಳಪೆ ಶಾಟ್ ಪ್ರಯೋಗಿಸಿದರು. ಈ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಈಗ ರೋಹಿತ್‌ ಶರ್ಮಾ ಏನು ಮಾಡಬೇಕು ಎಂಬುದರ ಬಗ್ಗೆ, ಟೀಮ್ ಇಂಡಿಯಾದ ಮಾಜಿ ಸ್ಪಿನ್ ಬೌಲರ್‌ ರವಿಚಂದ್ರನ್‌ ಅಶ್ವಿನ್‌ ತಿಳಿಸಿದ್ದಾರೆ. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು ಈ ಬಗ್ಗೆ ಗಮನ ಹರಿಸಿದ್ದಾರೆ.

R Ashwin Backs Rohit Sharma Amid Poor Form Praises Ravindra Jadeja s All-Round Performance

ರೋಹಿತ್‌ ಶರ್ಮಾ ಬಗ್ಗೆ ಅಶ್ವಿನ್ ಹೇಳಿದ್ದೇನು?

ನಿಜಕ್ಕೂ ಇದು ರೋಹಿತ್ ಶರ್ಮಾ ಅವರ ಪಾಲಿಗೆ ಕಷ್ಟದ ಸಮಯ. ಈ ಸಮಯದಿಂದ ಮೇಲೆ ಬರಲು ರೋಹಿತ್ ಶರ್ಮಾ ಶ್ರಮಿಸಬೇಕು. ಅವರು ತಮ್ಮ ಮೇಲೆ ಎದ್ದಿರುವ ಟೀಕೆಗಳಿಗೆ ಉತ್ತರಿಸಲು ದೊಡ್ಡ ಇನಿಂಗ್ಸ್‌ ಕಟ್ಟುವುದು ಅನಿವಾರ್ಯವಾಗಿದೆ. ರೋಹಿತ್ ಶರ್ಮಾ ಅವರು ಐಸಿಸಿ ಮೆಗಾ ಈವೆಂಟ್‌ಗೂ ಮುನ್ನ ದೊಡ್ಡ ಇನಿಂಗ್ಸ್‌ ಕಟ್ಟಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ.

ರೋಹಿತ್ ಶರ್ಮಾ ಅವರು ಆಡುತ್ತಿರುವ ಧಾಟಿ ನಿಜಕ್ಕೂ ಅವರಿಗೂ ಬೇಸರ ತರಿಸಿರುತ್ತದೆ. ಅವರು ಸದ್ಯ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಅವರು ಲಯಕ್ಕೆ ಮರಳುವುದು ಅನಿವಾರ್ಯ. ಅವರು ತಮ್ಮ ನೆಚ್ಚಿನ ಫಾರ್ಮೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೇಲೆ ಪೋಕಸ್‌ ಮಾಡಬೇಕು. ಇವರ ಆಟವನ್ನು ಕಂಡು ಅಭಿಮಾನಿಗಳು ಪ್ರಶ್ನೆ ಮಾಡುತ್ತಲೆ ಇರುತ್ತಾರೆ. ಈ ಬಗ್ಗೆತಲೆ ಕೆಡಿಸಿಕೊಳ್ಳಬಾರದು. ನೀವು ಆರ್ಭಟಿಸುವ ವರೆಗೂ ಪ್ರಶ್ನೆಗಳು ಏಳುತ್ತಲೇ ಇರುತ್ತವೆ.

R Ashwin Backs Rohit Sharma Amid Poor Form Praises Ravindra Jadeja s All-Round Performance

ಸ್ನೇಹಿತನ ಗುಣಗಾನ ಮಾಡಿದ ಅಶ್ವಿನ್‌

ಇನ್ನು ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಸ್ಪಿನ್ ಬೌಲರ್‌ ರವೀಂದ್ರ ಜಡೇಜಾ ಉತ್ತಮ ಸ್ಪಿನ್ ಬೌಲಿಂಗ್ ನಡೆಸಿದರು. ತಮ್ಮ ಸ್ನೇಹಿತನ ಪ್ರದರ್ಶನ ಬಗ್ಗೆ ಅಶ್ವಿನ್‌ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಒಬ್ಬ ಪ್ಲೇಯರ್‌ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾಗ ಅವರನ್ನು ಖಳನಾಯಕನ ರೀತಿ ಕಾಣುತ್ತದೆ. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾದರೆ, ಅಭಿಮಾನಿಗಳು ಮೆರೆಸುತ್ತಾರೆ. ಜಡೇಜಾ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರು ಒಬ್ಬ ಪರ್ಫೆಕ್ಟ್ ಆಲ್‌ರೌಂಡರ್‌ ಎಂದು ತಿಳಿಸಿದ್ದಾರೆ.

Story first published: Saturday, February 8, 2025, 9:48 [IST]
Other articles published on Feb 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+