ಮುತ್ತಯ್ಯ ಸಮಕ್ಕೆ ನಿಂತು 350 ವಿಕೆಟ್ ಕ್ಲಬ್ ಸೇರಿದ ರವಿಚಂದ್ರನ್ ಅಶ್ವಿನ್

ಬೆಂಗಳೂರು, ಅಕ್ಟೋಬರ್ 07: ಬಹುಕಾಲದ ನಂತರ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಕಮ್ ಬ್ಯಾಕ್ ಮೊದಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೊಸ ಮೈಲಿಗಲ್ಲು ದಾಟಿದ್ದಾರೆ.
ವಿಶಾಖಪಟ್ಟಣಂ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ತ್ವರಿತವಾಗಿ 350 ವಿಕೆಟ್ ಪಡೆದವರ ಕ್ಲಬ್ಬಿಗೆ ಅಶ್ವಿನ್ ಸೇರ್ಪಡೆಯಾದರು. ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರ ಸಾಧನೆಯ ಸಮಕ್ಕೆ ನಿಂತರು. ಅಶ್ವಿನ್ ಹಾಗೂ ಮುರಳಿಧರನ್ 66 ಪಂದ್ಯಗಳಲ್ಲಿ 350 ವಿಕೆಟ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 5 ಪ್ಲಸ್ ವಿಕೆಟ್ ಗಳಿಸುವ ಮೂಲಕ 27 ಬಾರಿ ಈ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ಗೆ 502 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 431 ರನ್ ಮಾತ್ರ ಗಳಿಸಿತು. ಎರಡನೇ ಇನ್ನಿಂಗ್ಸನಲ್ಲಿ 4 ವಿಕೆಟ್ ಕಳೆದುಕೊಂಡು 323 ರನ್ ಗಳಿಸಿದ ಭಾರತ, ಹರಿಣಗಳಿಗೆ 395 ರನ್ ಗುರಿ ನೀಡಿತ್ತು. ಎರಡನೇ ಇನ್ನಿಂಗ್ಸ್ ಪ್ರಾರಂಭದಲ್ಲೇ ಥ್ರಿನಿಯಸ್ ಡಿ ಬ್ರೂಯ್ನ್ ಅವರ ವಿಕೆಟ್ ಅನ್ನು ಕಬಳಿಸಿದ ಅಶ್ವಿನ್ ಹೊಸ ದಾಖಲೆ ಬರೆದರು.
33 ವರ್ಷ ವಯಸ್ಸಿನ ತಮಿಳುನಾಡಿನ ಅಶ್ವಿನ್ ಅವರು 54 ಟೆಸ್ಟ್ ಪಂದ್ಯಗಳಲ್ಲಿ 300 ಟೆಸ್ಟ್ ವಿಕೆಟ್ ಗಳಿಸಿ ಡೆನ್ನಿಸ್ ಲಿಲ್ಲಿ(56 ಟೆಸ್ಟ್) ಅವರ ದಾಖಲೆ ಮುರಿದಿದ್ದರು. 300 ಪ್ಲಸ್ ವಿಕೆಟ್ ಗಳಿಕೆ ಪಟ್ಟಿಯಲ್ಲಿ ಅಶ್ವಿನ್ ಸದ್ಯ 4ನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಅನಿಲ್ ಕುಂಬ್ಳೆ 619, ಕಪಿಲ್ ದೇವ್ 434, ಹರ್ಭಜನ್ ಸಿಂಗ್ 417 ಹಾಗೂ ಜಹೀರ್ ಖಾನ್ 311 ವಿಕೆಟ್ ಗಳಿಸಿದ್ದಾರೆ.
ತ್ವರಿತಗತಿಯಲ್ಲಿ 350 ಟೆಸ್ಟ್ ವಿಕೆಟ್ ಗಳಿಸಿದವರು:
66 ಟೆಸ್ಟ್ : ಮುತ್ತಯ್ಯ ಮುರಳೀಧರನ್(ಶ್ರೀಲಂಕಾ)/ ಆರ್ ಅಶ್ವಿನ್ (ಭಾರತ)
69: ರಿಚರ್ಡ್ ಹ್ಯಾಡ್ಲಿ(ನ್ಯೂಜಿಲೆಂಡ್)/ ಡೇಲ್ ಸ್ಟೈನ್(ದಕ್ಷಿಣ ಆಫ್ರಿಕಾ)
70: ಡೆನ್ನಿಸ್ ಲಿಲ್ಲಿ(ಆಸ್ಟ್ರೇಲಿಯಾ)
74: ಗ್ಲೆನ್ ಮೆಗ್ರಾ(ಆಸ್ಟ್ರೇಲಿಯಾ)
75: ಮಾಲ್ಕಂ ಮಾರ್ಷಲ್(ವೆಸ್ಟ್ ಇಂಡೀಸ್)/ ರಂಗಣಾ ಹೆರಾತ್(ಶ್ರೀಲಂಕಾ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications