Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೇಲ್ ಸ್ಟೇನ್ ದಾಖಲೆ ಮುರಿದ ಆರ್ ಅಶ್ವಿನ್

ಧರ್ಮಶಾಲಾ, ಮಾರ್ಚ್ 26: ತವರಿನಲ್ಲಿ ಆಡಿದ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಕಪಿಲ್ ದೇವ್ ದಾಖಲೆ ಮುರಿದ ಆರ್ ಅಶ್ವಿನ್ ಅವರು ಈಗ ದಕ್ಷಿಣ ಆಫ್ರಿಕಾ ಡೇಲ್ ಸ್ಟೇನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಗಳಿಸಿ, ಈ ಸಾಧನೆ ಮಾಡಿದ್ದಾರೆ.

ಕಪಿಲ್ ದೇವ್ ಅವರು ತವರಿನ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆಯನ್ನು ಅಶ್ವಿನ್ ಅವರು ಮುರಿದರು. 31 ವರ್ಷ ವಯಸ್ಸಿನ ತಮಿಳುನಾಡು ಮೂಲದ ಆಲ್ ರೌಂಡರ್ ಅಶ್ವಿನ್ ಅವರು ಈ ಬಾರಿಯ ಟೆಸ್ಟ್ ಋತುವಿನಲ್ಲಿ ಒಟ್ಟು 64 ವಿಕೆಟ್ ಕಿತ್ತಿದ್ದಾರೆ. ಕಪಿಲ್ ಅವರು 1979-80ರ ಟೆಸ್ಟ್ ಋತುವಿನಲ್ಲಿ 63 ವಿಕೆಟ್ ಕಿತ್ತಿದ್ದರು.[ಟೆಸ್ಟ್ ಕ್ರಿಕೆಟ್ ದಿಗ್ಗಜರ ಸಾಲಿಗೆ ವೇಗಿ ಡೇಲ್ ಸ್ಟೈನ್]

ಈಗ ಟೆಸ್ಟ್ ಕ್ರಿಕೆಟ್​ನ ಒಂದೇ ಋತುವಿನಲ್ಲಿ ಗರಿಷ್ಠ ವಿಕೆಟ್ (79) ಉರುಳಿಸಿದ ದಾಖಲೆಯನ್ನು ಭಾರತದ ಆರ್. ಅಶ್ವಿನ್ ತಮಗೆ ಹೆಸರಿಗೆ ಬರೆದುಕೊಂಡಿದ್ದಾರೆ.2007/08ರಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್'ನಲ್ಲಿ ಒಂದೇ ಋತುವಿನಲ್ಲಿ 78 ವಿಕೆಟ್ ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದ್ದರು.

R Ashwin Breaks Steyn's Record of Most Wickets in a Season

ಒಂದೇ ಋತುವಿನಲ್ಲಿ ಗರಿಷ್ಟ ವಿಕೆಟ್ ಗಳಿಸಿದ ಬೌಲರ್ಸ್
1. ಆರ್. ಅಶ್ವಿನ್ (ಭಾರತ)- 79*
2. ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)- 78
3. ಆರ್. ಜಡೇಜಾ (ಭಾರತ)- 68
4. ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)- 66
5. ಅನಿಲ್ ಕುಂಬ್ಳೆ (ಭಾರತ)- 64
6. ಕಪಿಲ್ ದೇವ್ (ಭಾರತ)- 63
7. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)- 62
8. ಶೇನ್ ವಾರ್ನ್ (ಆಸ್ಟ್ರೇಲಿಯಾ)- 62

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+