ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನಾಯಕತ್ವದ ವಿರುದ್ಧ ಅಶ್ವಿನ್ ಬಿಸಿಸಿಐಗೆ ದೂರು ನೀಡಿದ್ದು ನಿಜಾನಾ?; ಕೊನೆಗೂ ಮೌನ ಮುರಿದ ಅಶ್ವಿನ್

R Ashwin clarifies about the news stating he had complained to the BCCI about Virat Kohli

ಕಳೆದ ಕೆಲ ದಿನಗಳಿಂದ ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿ ಕ್ರಿಕೆಟ್ ಜಗತ್ತಿನಲ್ಲಿ ಹರಿದಾಡುತ್ತಿರುವ ಸುದ್ದಿಗಳು ಒಂದೆರಡಲ್ಲ. ವಿರಾಟ್ ಕೊಹ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡುವುದಕ್ಕೂ ಮುಂಚಿನ 2 ವಾರಗಳಿಂದಲೂ ಸಹ ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿ ಸಾಕಷ್ಟು ಭಿನ್ನವಿಭಿನ್ನವಾದ ಸುದ್ದಿಗಳು ಹುಟ್ಟಿಕೊಂಡಿದ್ದವು.

ಐಪಿಎಲ್ 2021: ಟೂರ್ನಿ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್‌ನಿಂದ ಅರ್ಜುನ್ ತೆಂಡೂಲ್ಕರ್ ಔಟ್!ಐಪಿಎಲ್ 2021: ಟೂರ್ನಿ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್‌ನಿಂದ ಅರ್ಜುನ್ ತೆಂಡೂಲ್ಕರ್ ಔಟ್!

ಒಂದೆಡೆ ವಿರಾಟ್ ಕೊಹ್ಲಿ ಭಾರತ ತಂಡದ ಎಲ್ಲಾ ಮಾದರಿಯ ಕ್ರಿಕೆಟ್‍ನ ನಾಯಕತ್ವವನ್ನು ತ್ಯಜಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಮತ್ತೊಂದೆಡೆ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದು ರೋಹಿತ್ ಶರ್ಮಾ ನೂತನ ನಾಯಕನಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿ ಹರಿದಾಡಿದ ಕೂಡಲೇ ಎಚ್ಚೆತ್ತ ಬಿಸಿಸಿಐ ವಿರಾಟ್ ಕೊಹ್ಲಿ ಯಾವುದೇ ಮಾದರಿಯ ನಾಯಕತ್ವದಿಂದಲೂ ಕೂಡಾ ಕೆಳಗಿಳಿಯುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿತ್ತು.

ಬಿಸಿಸಿಐ ಈ ರೀತಿಯ ಸ್ಪಷ್ಟನೆಯನ್ನು ನೀಡಿದ ನಂತರವೂ ಸಹ ವಿರಾಟ್ ಕೊಹ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆಯನ್ನು ಹೊರಡಿಸಿದರು. ವಿರಾಟ್ ಕೊಹ್ಲಿ ಅವರ ಈ ನಿರ್ಧಾರವನ್ನು ಕಂಡ ಅಭಿಮಾನಿಗಳು ಬಿಸಿಸಿಐ ನೀಡಿದ ಸ್ಪಷ್ಟನೆಯೇ ಒಂದು, ಇಲ್ಲಿ ನಡೆಯುತ್ತಿರುವುದೇ ಮತ್ತೊಂದು ಎಂಬ ಗೊಂದಲಕ್ಕೆ ಒಳಗಾಗಿದ್ದರು. ಎಲ್ಲಾ ಮಾದರಿಯ ನಾಯಕನಾಗಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ, ಹೀಗಾಗಿ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದು ಉಳಿದ ಮಾದರಿಯ ಕ್ರಿಕೆಟ್‌ ತಂಡಗಳತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದರು.

ಮುಂಬೈ ಇಂಡಿಯನ್ಸ್‌ನ ಈ ಆಟಗಾರರನ್ನು ಆಯ್ಕೆ ಮಾಡಿದ್ದು ಭಾರತಕ್ಕೆ ತಲೆನೋವಾಗಿದೆ ಎಂದ ಅಗರ್ಕರ್ಮುಂಬೈ ಇಂಡಿಯನ್ಸ್‌ನ ಈ ಆಟಗಾರರನ್ನು ಆಯ್ಕೆ ಮಾಡಿದ್ದು ಭಾರತಕ್ಕೆ ತಲೆನೋವಾಗಿದೆ ಎಂದ ಅಗರ್ಕರ್

ಹೀಗೆ ವಿರಾಟ್ ಕೊಹ್ಲಿ ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದ ಸುದ್ದಿ ಹಲವಾರು ಗೊಂದಲಗಳ ನಡುವೆಯೇ ತಣ್ಣಗಾಗಿ ಹೋಯಿತು. ಕೇವಲ ಟಿ ಟ್ವೆಂಟಿ ಮಾದರಿಯ ನಾಯಕತ್ವದಿಂದ ಮಾತ್ರ ವಿರಾಟ್ ಕೊಹ್ಲಿ ಕಲಿಯುತ್ತಿದ್ದಾರೆಯೇ ಹೊರತು ಇನ್ನುಳಿದ ತಂಡಗಳಿಗೆ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನುವ ಸಮಾಧಾನದೊಂದಿಗೆ ಕೊಹ್ಲಿ ಅಭಿಮಾನಿಗಳು ಈ ಸುದ್ದಿಯ ಕುರಿತಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟರೂ ಸಹ ಈ ಕೆಳಕಂಡ ಮತ್ತೊಂದು ಸುದ್ದಿ ಮತ್ತೆ ಕೊಹ್ಲಿ ಅಭಿಮಾನಿಗಳು ಮತ್ತು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳನ್ನು ಗೊಂದಲಕ್ಕೆ ದೂಡಿತು.

ಕೊಹ್ಲಿ ವಿರುದ್ಧ ಅಶ್ವಿನ್ ದೂರು ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಕೊಹ್ಲಿ ವಿರುದ್ಧ ಅಶ್ವಿನ್ ದೂರು ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಹೀಗೆ ಕೊಹ್ಲಿ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ಸುದ್ದಿ ತಣ್ಣಗಾಗಿ ಯುಎಇಯಲ್ಲಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಂದುವರಿಯುತ್ತಿದ್ದಂತೆಯೇ ಮತ್ತೊಂದು ಗಂಭೀರವಾದ ಗಾಳಿ ಸುದ್ದಿಯೊಂದು ದೊಡ್ಡ ಪ್ರಮಾಣದಲ್ಲಿ ಹರಿದಾಡಲಾರಂಭಿಸಿತು. ಹೌದು ನಾಯಕ ವಿರಾಟ್ ಕೊಹ್ಲಿ ತನಗೆ ತಂಡದಲ್ಲಿ ಸರಿಯಾದ ಸ್ಥಾನವನ್ನು ನೀಡುತ್ತಿಲ್ಲ, ಆಟಗಾರರ ಜತೆ ಕೊಹ್ಲಿ ಸರಿಯಾದ ರೀತಿಯಲ್ಲಿ ವರ್ತಿಸುತ್ತಿಲ್ಲ ಎಂದು ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ರವಿಚಂದ್ರನ್ ಅಶ್ವಿನ್ ಬಿಸಿಸಿಐಗೆ ದೂರು ನೀಡಿದ್ದಾರೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ಹರಿದಾಡುತ್ತಿತ್ತು. ಸಾಮಾಜಿಕ ಜಾಲತಾಣಗಳ ತುಂಬಾ ಅಶ್ವಿನ್ ಕುರಿತಾಗಿ ಸಾಕಷ್ಟು ಟೀಕೆಗಳು ಸಹ ಈ ಸುದ್ದಿಯಿಂದ ವ್ಯಕ್ತವಾಗತೊಡಗಿದವು ಮತ್ತು ಟೀಮ್ ಇಂಡಿಯಾದಲ್ಲಿ ಎಲ್ಲಾ ಅಂದುಕೊಂಡಂತೆ ನಡೆಯುತ್ತಿಲ್ಲ ಎಂಬ ಚರ್ಚೆಗಳು ಕೂಡ ನಡೆಯತೊಡಗಿದವು.

ಈ ಕುರಿತಾಗಿ ಸ್ಪಷ್ಟನೆ ನೀಡಿದ ರವಿಚಂದ್ರನ್ ಅಶ್ವಿನ್

ಈ ಕುರಿತಾಗಿ ಸ್ಪಷ್ಟನೆ ನೀಡಿದ ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿ ಬಿಸಿಸಿಐಗೆ ದೂರು ನೀಡಿದ್ದಾರೆ ಎಂಬ ಸುದ್ದಿಯ ಕುರಿತಾಗಿ ಸ್ವತಃ ರವಿಚಂದ್ರನ್ ಅಶ್ವಿನ್ ಅವರೇ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿಯ ಮೂಲಕ ಉತ್ತರವನ್ನು ನೀಡಿದ್ದಾರೆ. 'ತಾನು ವಿರಾಟ್ ಕೊಹ್ಲಿ ಕುರಿತಾಗಿ ಯಾವುದೇ ರೀತಿಯ ದೂರನ್ನು ಸಹ ನೀಡಿಲ್ಲ, ತಾನು ವಿರಾಟ್ ಕೊಹ್ಲಿ ನಾಯಕತ್ವವನ್ನು ವಿರೋಧಿಸಿ ಬಿಸಿಸಿಐಗೆ ದೂರು ನೀಡಿದ್ದೇನೆ ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕೆಲ ಮಂದಿ ಮಜಾ ತೆಗೆದುಕೊಳ್ಳುತ್ತಿದ್ದಾರೆ ಹೊರತು, ಈ ಸುದ್ದಿಗಳಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ' ಎಂದು ವಿವಾದದ ಕುರಿತಾಗಿ ಸ್ಪಷ್ಟನೆಯನ್ನು ನೀಡಿದ್ದಾರೆ.

 ಈ ಆರೋಪವನ್ನು ತಳ್ಳಿಹಾಕಿದ ಬಿಸಿಸಿಐ

ಈ ಆರೋಪವನ್ನು ತಳ್ಳಿಹಾಕಿದ ಬಿಸಿಸಿಐ


ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಕೂಡ ಈ ಕುರಿತಾಗಿ ಮಾತನಾಡಿದ್ದು ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧವಾಗಿ ರವಿಚಂದ್ರನ್ ಅಶ್ವಿನ್ ಮಾತ್ರವಲ್ಲ, ತಂಡದ ಇತರೆ ಯಾವುದೇ ಆಟಗಾರರಿಂದಲೂ ಕೂಡ ನಮಗೆ ದೂರು ಬಂದೇ ಇಲ್ಲ ಎಂದು ಸ್ಪಷ್ಟನೆಯನ್ನು ನೀಡಿ ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.

Story first published: Friday, October 1, 2021, 10:27 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X