ಭಾರತ vs ಇಂಗ್ಲೆಂಡ್: ಭರ್ಜರಿ ಶತಕ ಸಿಡಿಸಿ ಮಿಂಚಿದ ಆರ್ ಅಶ್ವಿನ್

ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಅದ್ಭುತವಾದ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಅಶ್ವಿನ್ ತಮ್ಮ ವೃತ್ತಿ ಜೀವನದ ಐದನೇ ಶತಕವನ್ನು ಸಿಡಿಸಿದ್ದಾರೆ. ಅಶ್ವಿನ್ ಶತಕದ ಸಾಧನೆಯಿಂದ ಟೀಮ್ ಇಂಡಿಯಾ ಬೃಹತ್ ಗುರಿಯನ್ನು ಇಂಗ್ಲೆಂಡ್ ಮುಂದಿಟ್ಟಿದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಪಡೆ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತ್ತು. ಆಗ ನಾಯಕ ವಿರಾಟ್ ಕೊಹ್ಲಿಗೆ ಜೊತೆಯಾಗಿದ್ದು ಆರ್ ಅಶ್ವಿನ್. ಕೊಹ್ಲಿ ಹಾಗೂ ಅಶ್ವಿನ್ 7ನೇ ವಿಕೆಟ್‌ಗೆ 96 ರನ್‌ಗಳ ಅಮೂಲ್ಯ ಜೊತೆಯಾಟವನ್ನು ನೀಡಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕವನ್ನು ಸಿಡಿಸಿ ವಿಕೆಟ್ ಒಪ್ಪಿಸಿದರು.
ಆದರೆ ಆರ್ ಅಶ್ವಿನ್ ತಮ್ಮ ಹೋರಾಟವನ್ನು ಬಳಿಕವೂ ಮುಂದುವರಿಸಿದರು. ಕೆಳ ಕ್ರಮಾಂಕದ ಆಟಗಾರರ ಜೊತೆಗೆ ಎಚ್ಚರಿಕೆಯ ಆಟವನ್ನು ಆಡುತ್ತಾ ಇನ್ನಿಂಗ್ಸ್ ಕಟ್ಟಿದ್ದಾರೆ. ಈ ಮೂಲಕ ಭಾರತದ ಪರವಾಗಿ ಸ್ಮರಣೀಯ ಇನ್ನಿಂಗ್ಸ್ ಆಡಿದ್ದಾರೆ ಆರ್ ಅಶ್ವಿನ್.
ಆರ್ ಅಶ್ವಿನ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿಯೂ ಇಂಗ್ಲೆಂಡ್ ತಂಡಕ್ಕೆ ಆಘಾತವನ್ನು ನೀಡಿದ್ದರು. ಐದು ವಿಕೆಟ್ ಗೊಂಚಲು ಪಡೆದು ಇಂಗ್ಲೆಂಡ್ ತಂಡವನ್ನು ಬೇಗನೆ ಕಟ್ಟಿ ಹಾಕಲು ಕಾರಣರಾದರು. ಈಗ ಶತಕವನ್ನು ಸಿಡಿಸಿ ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications