ಆರ್ ಅಶ್ವಿನ್ ಬದಲಿಗೆ ಹರ್ಭಜನ್ ಸಿಂಗ್ ಎಂಟ್ರಿ
ಕಾನ್ಪುರ, ಅ.11: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ಸೋಲಿನ ಆಘಾತದ ಜೊತೆಗೆ ಟೀಂ ಇಂಡಿಯಾಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ತಂಡದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಗಾಯಳುವಾಗಿ ತಂಡದಿಂದ ಹೊರನಡೆದಿದ್ದಾರೆ. ಅಶ್ವಿನ್ ಸ್ಥಾನಕ್ಕೆ ಹರ್ಭಜನ್ ಸಿಂಗ್ ಅವರು ತಂಡಕ್ಕೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರು ಫೀಲ್ಡ್ ಮಾಡುವಾಗ ಗಾಯ ಮಾಡಿಕೊಂಡಿದ್ದಾರೆ. 31.2 ಓವರ್‌ನಲ್ಲಿ ಡಿ ವಿಲೆಯರ್ಸ್ ಚೆಂಡನ್ನು ಮಿಡ್ ಆನ್ ಕಡೆ ತಳ್ಳಿದರು. ಚೆಂಡನ್ನು ತಡೆಯುವ ಯತ್ನದಲ್ಲಿ ಅಶ್ವಿನ್ ಕೈಗೆ ಗಾಯ ಮಾಡಿಕೊಂಡರು. ಈ ಕಾರಣದಿಂದಾಗಿ ಆ ಓವರ್‌ನ್ನು ಪೂರ್ಣಗೊಳಿಸಲಾಗಲಿಲ್ಲ. [ಫಲ ನೀಡದ ರೋಹಿತ್ ಶತಕ, ಭಾರತಕ್ಕೆ 5 ರನ್ ಸೋಲು]

ಕೊನೆಯ ಎರಡು ಎಸೆತಗಳನ್ನು ಕೊಹ್ಲಿ ಎಸೆದು ಓವರನ್ನು ಪೂರ್ಣಗೊಳಿಸಿದರು. ನೂರನೇ ಏಕದಿನ ಕ್ರಿಕೆಟ್ ಪಂದ್ಯವಾಡಿದ ಅಶ್ವಿನ್ ಅವರು ಗಾಯಗೊಂಡು ಮತ್ತೊಮ್ಮೆ ಮೈದಾನಕ್ಕೆ ಮರಳಿದರೂ ಒಂದೇ ಒಂದು ಓವರ್ ಮಾಡಲು ಸಾಧ್ಯವಾಯಿತು.
ಇಂದೋರ್ ನಲ್ಲಿ ಅಕ್ಟೋಬರ್ 14ರಂದು ನಡೆಯಲಿರುವ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆರ್ ಅಶ್ವಿನ್ ಬದಲಿಗೆ ಹರ್ಭಜನ್ ಸಿಂಗ್ ಅವರು ಆಡಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಅದರೆ, ಆರ್ ಅಶ್ವಿನ್ ಅವರು ಎಷ್ಟು ಪಂದ್ಯಗಳಿಂದ ವಂಚಿತರಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಕ್ಟೋಬರ್ ತಿಂಗಳ ಕೊನೆಯಲ್ಲಿ ಮದುವೆಯಾಗುತ್ತಿರುವ ಹರ್ಭಜನ್ ಸಿಂಗ್ ಅವರು ಎರಡನೇ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಆರಂಭಿಕ ದಾಂಡಿಗ ರೋಹಿತ್ ಶರ್ಮರ ಆಕರ್ಷಕ ಶತಕದ ನೆರವಿನಲ್ಲಿ ಧೋನಿ ಪಡೆ ಇಲ್ಲಿ ರವಿವಾರ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನ ಸನಿಹ ತಲುಪಿದ್ದರೂ ಕೊನೆಯ ಓವರ್‌ನಲ್ಲಿ ವೇಗದ ಬೌಲರ್ ಕಾಗಿಸೊ ರಬಾಡ ಮ್ಯಾಜಿಕ್‌ನಿಂದಾಗಿ 5 ರನ್‌ಗಳ ವಿರೋಜಿತ ಸೋಲು ಅನುಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications