ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಾಳುವಾದ ಆರ್ ಅಶ್ವಿನ್!

ಲಂಡನ್, ಜುಲೈ 27: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅವರು ಬಲಗೈಗೆ ಗಾಯ ಮಾಡಿಕೊಂಡಿದ್ದಾರೆ. ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವಾಗ ಅಶ್ವಿನ್ ಅವರು ಗಾಯ ಮಾಡಿಕೊಂಡಿದ್ದು, ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.
ಜುಲೈ 26ರಂದು ಗುರುವಾರ ಬೆಳಗ್ಗೆ ನೆಟ್ ಸೆಷನ್ಸ್ ನಲ್ಲಿ ಆಡುವಾಗ ಗಾಯವಾದ ಬಳಿಕ, ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಆಡಲು ಮೈದಾನಕ್ಕೆ ಇಳಿದಿರಲಿಲ್ಲ. ಆದರೆ, ಅಶ್ವಿನ್ ಅವರ ಗಾಯ ಅಂಥ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ ಎಂದು ಟೀಂ ಇಂಡಿಯಾದ ವೈದ್ಯಾಧಿಕಾರಿ ಹೇಳಿದ್ದಾರೆ.
100.2 ಓವರ್ ಗಳಲ್ಲಿ 395ರನ್ ಗಳಿಸಿ ಟೀಂ ಇಂಡಿಯಾ ಆಲೌಟ್ ಆಗಿದ್ದು, ದಿನೇಶ್ ಕಾರ್ತಿಕ್ ಅವರು 82ರನ್ ಗಳಿಸಿದರು.
ಆಗಸ್ಟ್ 01ರಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಉಳಿದಂತೆ, ಭುವನೇಶ್ವರ್ ಕುಮಾರ್ ಅವರು ಮೊದಲ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರೆ, ಬೂಮ್ರಾ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಲಭ್ಯರಾಗುತ್ತಾರೆ.
ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಭುಜದ ಗಾಯದಿಂದ ಸಮಸ್ಯೆಯಿಂದ ಬಳಲುತ್ತಿದ್ದು, ಮ್ಯಾಂಚೆಸ್ಟರ್ ನಲ್ಲಿ ಸರ್ಜರಿಗೆ ಒಳಗಾಗುತ್ತಿದ್ದಾರೆ. ಸರಣೀಯಿಂದ ಹೊರಗುಳಿಯಬೇಕಾಗುತ್ತದೆ. 300 ವಿಕೆಟ್ ಗಳಿಸಿರುವ ಅನುಭವಿ ಸ್ಪಿನ್ನರ್ ಅಶ್ವಿನ್ ಅವರು ಒಂದು ವೇಳೆ, ಟೆಸ್ಟ್ ಪಂದ್ಯಕ್ಕೆ ಅಲಭ್ಯರಾದರೆ, ಭಾರತಕ್ಕೆ ಭಾರಿ ನಷ್ಟವಾಗಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications