Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಧುನಿಕ ಕ್ರಿಕೆಟ್‌ನ ದಿಗ್ಗಜ ಎಂದು ಆರ್ ಅಶ್ವಿನ್ ಹೊಗಳಿದ ವಿರಾಟ್ ಕೊಹ್ಲಿ

R Ashwin is a modern-day legend in Tests, lucky to have him our side: Virat Kohli

ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್‌ಗಳ ಜಯವನ್ನು ದಾಖಲಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಪಂದ್ಯದಲ್ಲಿ ಸಾಕಷ್ಟು ದಾಖಲೆಗಳು ಸೃಷ್ಟಿಯಾಗಿದೆ. ಅದರಲ್ಲಿ ಪ್ರಮುಖವಾಗಿ ಆರ್ ಅಶ್ವಿನ್ 400 ವಿಕೆಟ್‌ಗಳ ಮೈಲಿಗಲ್ಲು ದಾಖಲಿಸಿರುವುದು ಪ್ರಮುಖವಾಗಿದೆ.

ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಮಾತನಾಡುತ್ತಾ ಭಾರತೀಯ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಆರ್ ಅಶ್ವಿನ್ ಆಧುನಿಕ ಕ್ರಿಕೆಟ್‌ನ ದಿಗ್ಗಜ ಆಟಗಾರ ಎಂದು ವಿರಾಟ್ ಕೊಹ್ಲಿ ಆರ್ ಅಶ್ವಿನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಆರ್ ಅಶ್ವಿನ್ 400 ವಿಕೆಟ್ ಸಾಧನೆ ಮಾಡುವ ಜೊತೆಗೆ ಈ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರಾಗಿದ್ದಾರೆ. ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಈ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಆಟಗಾರ ಎನಿಸಿದ್ದಾರೆ. ಭಾರತೀಯ ಆಟಗಾರರ ಪೈಕಿ ವೇಗವಾಗಿ ಈ ಸಾಧನೆ ಮಾಡಿದ್ದಲ್ಲದೆ 400 ವಿಕೆಟ್ ಪಡೆದ ಭಾರತೀಯ ಬೌಲರ್‌ಗಳಾದ ಅನಿಲ್ ಕುಂಬ್ಳೆ, ಕಪಿಲ್ ದೇವ್, ಹರ್ಭಜನ್ ಸಿಂಗ್ ಅವರನ್ನು ಕೂಡಿಕೊಂಡಿದ್ದಾರೆ.

"ಭಾರತೀಯ ಕ್ರಿಕೆಟ್‌ಗೆ ಆರ್ ಅಶ್ವಿನ್ ನಿಡಿದ ಕೊಡುಗೆಗೆ ಗೌರವ ಸಲ್ಲಿಸಬೇಕು. ಆತನ ಸಾಧನೆಗೆ ನಾವೆಲ್ಲಾ ಹೆಮ್ಮೆ ಪಡುತ್ತೇವೆ. ನಾನು ಅವರಿಗೆ ಹೇಳೀದ್ದೇನೆ ನಿಮ್ಮನ್ನು ಇನ್ನು 'ಲೆಜಿ' ಎಂದು ಕರೆಯುತ್ತೇನೆ ಎಂದು. 400 ವಿಕೆಟ್‌ಗಳ ಸಾಧನೆ ಶ್ರೇಷ್ಠವಾದ ಸಾಧನೆಯಾಗಿದೆ. ಇನ್ನೂ ಕೂಡ ಸಾಕಷ್ಟು ವರ್ಷ ಭಾರತ ತಂಡಕ್ಕೆ ಅವರ ಸೇವೆ ದೊರೆಯಲಿದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

"ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಆತ ಆಧುನಿಕ ಕ್ರಿಕೆಟ್‌ನ ದಿಗ್ಗಜ. ನಮ್ಮ ತಂಡದಲ್ಲಿ ಆತನನ್ನು ಹೊಂದಿರುವುದಕ್ಕೆ ನಾವು ಅದೃಷ್ಟರಾಗಿದ್ದೇವೆ. ನಾಯಕನಾಗಿ ಆತ ನಮ್ಮೊಂದಿಗೆ ಆಡುತ್ತಿರುವುದಕ್ಕೆ ತುಂಬಾ ಆಭಾರಿಯಾಗಿದ್ದೇನೆ" ಎಂದು ವಿರಾಟ್ ಕೊಹ್ಲಿ ಆರ್ ಅಶ್ವಿನ್ ಸಾಧನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

Story first published: Friday, February 26, 2021, 8:47 [IST]
Other articles published on Feb 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+