Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೆಬ್ರವರಿ ತಿಂಗಳ ಐಸಿಸಿ ಪ್ಲೇಯರ್ ಆಫ್ ದ ಮಂಥ್ ಪ್ರಶಸ್ತಿಗಾಗಿ ಮೂವರ ಹೆಸರು ಶಿಫಾರಸು

R Ashwin, Joe Root and Kyle Mayers nominated for ICC Player of the month for February

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಹೊಸ ಪ್ರಶಸ್ತಿ ಘೋಷಿಸಿದೆ. 'ಐಸಿಸಿ ಪ್ಲೇಯರ್ ಆಫ್ ದ ಮಂಥ್' ಈ ಪ್ರಶಸ್ತಿಯ ಹೆಸರು. ಫೆಬ್ರವರಿ ತಿಂಗಳ ಪ್ರಶಸ್ತಿಗಾಗಿ ಮೂವರ ಹೆಸರುಗಳು ಶಿಫಾರಸಾಗಿವೆ.

ಫೆಬ್ರವರಿ ತಿಂಗಳ ಐಸಿಸಿ ಪ್ಲೇಯರ್ ಆಫ್ ದ ಮಂಥ್ ಪ್ರಶಸ್ತಿಗಾಗಿ ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಮತ್ತು ವೆಸ್ಟ್ ಇಂಡೀಸ್ ಆಟಗಾರ ಕೈಲ್ ಮೇಯರ್ಸ್ ಹೆಸರುಗಳು ಪ್ರಶಸ್ತಿಗಾಗಿ ಸೂಚಿಸಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್ ದ್ವಿತೀಯ ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 106 ರನ್ ಬಾರಿಸಿದ್ದರು. ಅಲ್ಲದೆ ಟೆಸ್ಟ್ ನಲ್ಲಿ 400 ವಿಕೆಟ್ ಮೈಲಿಗಲ್ಲು ಕೂಡ ಸ್ಥಾಪಿಸಿದ್ದರು. ಜನವರಿ ತಿಂಗಳ ಮೊದಲ ಪ್ರಶಸ್ತಿ ಭಾರತದ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್ ಗೆ ಸಿಕ್ಕಿತ್ತು.

ಭಾರತ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿರುವ ಜೋ ರೂಟ್, 333 ರನ್ ಕೂಡ ಬಾರಿಸಿದ್ದಾರೆ. ಹೀಗಾಗಿ ರೂಟ್ ಅವರನ್ನು ಪರಿಗಣಿಸಲಾಗಿದೆ. ಇನ್ನು ವೆಸ್ಟ್ ಇಂಡೀಸ್ ಪರ ಟೆಸ್ಟ್ ಗೆ ಇತ್ತೀಗಷ್ಟೇ ಪಾದಾರ್ಪಣೆ ಮಾಡಿರುವ ಕೈಲ್ ಮೇಯರ್ಸ್ ಬಾಂಗ್ಲಾದೇಶ ವಿರುದ್ಧ 210 ರನ್ ಬಾರಿಸಿ 395 ರನ್ ಚೇಸ್ ಮಾಡಲು ನೆರವಾಗಿದ್ದರು. ಪಂದ್ಯದಲ್ಲಿ ವಿಂಡೀಸ್ ಗೆದ್ದಿತ್ತು.

Story first published: Wednesday, March 3, 2021, 9:28 [IST]
Other articles published on Mar 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+