Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಜು ಮಿಮಿಕ್ರಿ ಮಾಡಿದ R Ashwin: ಸ್ಯಾಮ್ಸನ್‌ ಪರ ಬ್ಯಾಟ್‌ ಮಾಡಿದ ಸ್ಪಿನ್ ಬೌಲರ್‌

ಸದ್ಯ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ಆಡಲಾಗುತ್ತಿದೆ. ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್‌ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಇವರ ಸ್ಥಾನದಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಜಿಂಬಾಬ್ವೆ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲೂ ಸಂಜು ತಂಡದ ಭಾಗವಾಗಿಲ್ಲ. ಬಿಸಿಸಿಐ ಈ ನಡೆಗೆ ಟೀಮ್ ಇಂಡಿಯಾ ಮಾಜಿ ಆಟಗಾರರು ಹಾಗೂ ಫ್ಯಾನ್ಸ್‌ ಬೇಸರಗೊಂಡಿದ್ದಾರೆ. ಸಂಜು ಸ್ಯಾಮ್ಸನ್‌ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಮತ್ತೊಮ್ಮೆ ಭಾರತ ತಂಡದಲ್ಲಿ ಆಡುವ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಂಜು ಸ್ಯಾಮ್ಸನ್‌ ಅವರ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್‌ ಎಂಟ್ರಿ ನೀಡಿದ್ದಾರೆ. ಇವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಂಜು ಸ್ಯಾಮ್ಸನ್‌ ಅವರ ಸ್ಥಾನದಲ್ಲಿ ನಿಂತು ಮನದ ಭಾವನೆಯನ್ನು ವ್ಯಕ್ತ ಪಡಿಸಿದ್ದಾರೆ.

R Ashwin

ಸಂದರ್ಶನದ ವೇಳೆ ಹಿರಿಯ ಪತ್ರಕರ್ತ ವಿಮಲ್ ಕುಮಾರ್ ಅವರು ಬಿಸಿಸಿಐ ಆಯ್ಕೆ ಸಮಿತಿಯ ಪರವಾಗಿ ಮಾತನಾಡಿದರು. ಸಂಜು ನಿಜಕ್ಕೂ ನೀವು ಟೀಮ್ ಇಂಡಿಯಾದ ಭರವಸೆಯ ಆಟಗಾರ. ನಿಮ್ಮ ಆಟದ ಮೇಲೆ ನಮಗೆ ಗೌರವ ಇದೆ. ನಿಮಗೂ ತಿಳಿದರ ಬೇಕು 2015ರಲ್ಲಿ ನಿಮಗೆ ಸ್ಥಾನವನ್ನು ನೀಡಲು ನಾವು ಸಹ ಇಂತಹದ್ದೇ ಮಾರ್ಗವನ್ನು ಅನುಸರಿಸಿದ್ದೇವು ಎಂದು ವಿಮಲ್‌ ಕುಮಾರ್ ಮಾತು ಮುಂದುವರೆಸುತ್ತಿರುವಾಗಲೇ ಅಶ್ವಿನ್‌ ಮಧ್ಯ ಪ್ರವೇಶಿಸಿದರು.

ಜಿಂಬಾಬ್ವೆ ಪ್ರವಾಸದಲ್ಲಿ ಅವಕಾಶ ನೀಡಿ

ಸರ್‌ ನನಗೆ 2014ರಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿತು. ಈ ಪ್ರವಾಸದಲ್ಲಿ ನನಗೆ ಆಡಲು ಅವಕಾಶಗಳು ಸಿಗಲಿಲ್ಲ. ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ನನಗೂ ಸಹ ಎಂಟು ವರ್ಷ ಬೇಕಾಯಿತು. ಸರ್ ದಯವಿಟ್ಟು ನನಗೆ ವಿಶ್ರಾಂತಿ ಬೇಡ. ಬೇಕಿದ್ದರೆ ಅಪ್ಪ, ಅಮ್ಮ, ಪತ್ನಿಯೊಂದಿಗೆ ಜಿಂಬಾಬ್ವೆ ಪ್ರವಾಸ ಮಾಡುವೆ. 1999ರ ಏಕದಿನ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಟೀಮ್ ಇಂಡಿಯಾವನ್ನು ಮಣಿಸಿತ್ತು. ಇದಕ್ಕೆ ಸೇಡು ತಿರಿಸಿಕೊಳ್ಳುವ ಆಸೆ ನನ್ನದು ಪ್ಲೀಸ್‌ ನನ್ನನ್ನು ಸಹ ಜಿಂಬಾಬ್ವೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಎಂದು ಸಂಜು ಅವರ ಧಾಟಿಯಲ್ಲಿ ಅಶ್ವಿನ್ ಹೇಳಿದ್ದಾರೆ.

ಜು. 23 ರಿಂದ ಟಿ20 ಸರಣಿ

ಟೀಮ್ ಇಂಡಿಯಾ ಇದೇ ತಿಂಗಳ ಅಂತ್ಯದಲ್ಲಿ ಜಿಂಬಾಬ್ವೆ ಪ್ರವಾಸವನ್ನು ಮಾಡಬೇಕಿದೆ. ಈ ವೇಳೆ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈಗಾಗಲೇ ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಭಾರತ ಹಾಗೂ ಜಿಂಬಾಬ್ವೆ ನಡುವಣ ಮೊದಲ ಟಿ20 ಪಂದ್ಯ ಜುಲೈ 23 ರಂದು ನಡೆಯಲಿದೆ. ಸರಣಿಯ ಕೊನೆಯ ಪಂದ್ಯದ ಜುಲೈ 26 ರಂದು ನಡೆಯಲಿದೆ.

ಜಿಂಬಾಬ್ವೆ ಪ್ರವಾಸಕ್ಕೆ ಪ್ರಕಟಿತ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪ ನಾಯಕ), ಇಶಾನ್‌ ಕಿಶನ್‌ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್‌ ಯಾದವ್, ಪ್ರಭ್‌ಸಿಮ್ರನ್‌ ಸಿಂಗ್ (ವಿಕೆಟ್‌ ಕೀಪರ್).

Story first published: Thursday, July 9, 2026, 18:36 [IST]
Other articles published on Jul 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+