ವಿರಾಟ್ ಕೊಹ್ಲಿ ಮನುಷ್ಯನಲ್ಲ: ಆರ್ ಆಶ್ವಿನ್ ಹಿಂಗ್ ಅನ್ನೋದಾ?
R Ashwin: ಇತ್ತೀಚೆಗಷ್ಟೇ ನಡೆದ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿ ಆರ್‌ಸಿಬಿ ನೇರವಾಗಿ ಫೈನಲ್ ಪ್ರವೇಶ ಮಾಡಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಆರ್.ಆಶ್ವಿನ್ ಅವರು ವಿರಾಟ್ ಕೊಹ್ಲಿ ಮನುಷ್ಯನಲ್ಲ ಎಂಬ ಅಚ್ಚರಿ ಹೇಳಿಕೆ ನಿಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಅವರು ಹೀಗೆ ಹೇಳಿದ್ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮೊದಲ ನಾಲ್ಕು ವಿಕೆಟ್‌ಗಳು ಬಿದ್ದಾಗ ವಿರಾಟ್ ಕೊಹ್ಲಿ ಸಂಭ್ರಮಿಸಿದ ರೀತಿ ನೋಡಿದರೆ, ಆ ವಿಕೆಟ್‌ಗಳನ್ನು ಅವರೇ ಪಡೆದಿದ್ದಾರೆನೋ ಎಂಬಂತಿತ್ತು ಎಂದು ಆರ್.ಅಶ್ವಿನ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಇದೇ ವೇಳೆ ತಮಾಷೆ ಮಾಡುತ್ತಾ ವಿರಾಟ್ ಕೊಹ್ಲಿ ಕಾಲೆಳೆಯುವ ಕೆಲಸವನ್ನು ಸಹ ಮಾಡಿದ್ದಾರೆ.

ಜಿಟಿ ಬೌಲರ್‌ಗಳ ಬೆವರಿಳಿಸಿದ ಪಾಟಿದಾರ್
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕ ರಜತ್ ಪಾಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಆರಂಭದಲ್ಲೇ ಎರಡು ಬಾರಿ ಜೀವದಾನ ಪಡೆದ ಪಾಟಿದಾರ್ ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಗುಜರಾತ್ ಟೈಟಾನ್ಸ್ ಬೌಲರ್‌ಗಳ ದಿಕ್ಕು ತಪ್ಪಿಸಿದಂತೂ ನಿಜ.
ಆರ್‌ಸಿಬಿಗೆ ಶರಣಾದ ಗುಜರಾತ್ ಟೈಟಾನ್ಸ್
ಗುಜರಾತ್ ಟೈಟಾನ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ನಂತರ ಬ್ಯಾಟ್ ಬೀಸಿದ ಗುಜರಾತ್ ತಂಡವು 162 ರನ್‌ಗಳಿಗೆ ಆಲೌಟ್ ಆಗಿ ಸೋಲನುಭವಸಿತು. ಆದರೆ ಜಿಟಿಗೆ ಫೈನಲ್ ತಲುಪಲು ಇನ್ನೊಂದು ಅವಕಾಶ ಇದೆ. ಕ್ವಾಲಿಫೈಯರ್ 2ನಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ. ಇದರಲ್ಲಿ ಗೆದ್ದ ತಂಡ ಆರ್‌ಸಿಬಿ ಜೊತೆ ಫೈನಲ್ ಆಡಲಿದೆ.
ಆರ್‌ಸಿಬಿ 5 ಬಾರಿ ಫೈನಲ್ ಪ್ರವೇಶ
* 2009
* 2011
* 2016
* 2025
* 2026
'ವಿರಾಟ್ ಕೊಹ್ಲಿ ಮನುಷ್ಯನಲ್ಲ'
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟ ಬೆನ್ನಲ್ಲೇ ಆರ್ ಅಶ್ವಿನ್ ಅವರು ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಪಂದ್ಯದ ಬಗ್ಗೆ ಮಾತನಾಡಿದ ಅವರು, 'ಗುಜರಾತ್ ತಂಡದ ಮೊದಲ ನಾಲ್ಕು ವಿಕೆಟ್ ಉರುಳಿದಾಗ ಕೊಹ್ಲಿ ಸಂಭ್ರಮಿಸಿದ್ದನ್ನು ನೀವು ನೋಡಿದಿರಾ? ಆ ಮೊದಲ ನಾಲ್ಕು ವಿಕೆಟ್‌ಗಳನ್ನು ಅವರೇ ಪಡೆದಿದ್ದಾರೆ ಎಂಬಂತೆ ಕುಣಿದಾಡುತ್ತಿದ್ದರು. ಒಬ್ಬ ವ್ಯಕ್ತಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತದೆ? ಪ್ರತಿಯೊಂದು ವಿಕೆಟ್ ಅನ್ನು ತನ್ನದೇ ವಿಕೆಟ್ ಎಂಬಂತೆ ಸಂಭ್ರಮಿಸುವುದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು,' ಎಂದು ಹೇಳಿದ್ದಾರೆ.
ಕೊಹ್ಲಿಯ ಎನರ್ಜಿ ಲೆವೆಲ್ ಬಗ್ಗೆ ಮಾತನಾಡಿದ ಅವರು, 'ಖಂಡಿತವಾಗಿಯೂ ಅವನು ಮನುಷ್ಯನಲ್ಲ. ಅವನು ಬೇರೆ ಯಾವುದೋ ಗ್ರಹದಿಂದ ಬಂದಿದ್ದಾನೆ. ಅಷ್ಟೊಂದು ಶಕ್ತಿ ಸಾಮಾನ್ಯ ಮನುಷ್ಯನಲ್ಲಿ ಇರಲು ಸಾಧ್ಯವಿಲ್ಲ,' ಎಂದು ವಿರಾಟ್ ಕೊಹ್ಲಿಯ ಆಟದ ಮೇಲಿನ ಶ್ರದ್ಧೆಯನ್ನು ಕೊಂಡಾಡಿದ್ದಾರೆ.
ಕೃನಾಲ್ ಪಾಂಡ್ಯ ಆಟಕ್ಕೆ ಮೆಚ್ಚುಗೆ
ಪಂದ್ಯದ ಒತ್ತಡದ ಸಂದರ್ಭದಲ್ಲಿ 28 ಎಸೆತಗಳಲ್ಲಿ 43 ರನ್ ಗಳಿಸಿದ ಕೃನಾಲ್ ಪಾಂಡ್ಯ ಅವರನ್ನೂ ಅಶ್ವಿನ್ ಶ್ಲಾಘಿಸಿದರು. 'ಕಠಿಣ ಪರಿಸ್ಥಿತಿ ಇದ್ದಾಗ 108ಕ್ಕೆ ಫೋನ್ ಮಾಡಬೇಡಿ, ಕೃನಾಲ್ ಪಾಂಡ್ಯಗೆ ಕರೆ ಮಾಡಿ,' ಎಂದು ತಮಾಷೆಯಾಗಿ ಹೇಳುವ ಮೂಲಕ ಅವರ ಅವರ ಆಟವನ್ನು ಕೊಂಡಾಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಆರ್ ಅಶ್ವಿನ್ ಅವರು ಅಪರೂಪಕ್ಕೆ ಆರ್‌ಸಿಬಿ ತಂಡದ ಆಟಗಾರರು ಅದರಲ್ಲೂ ವಿರಾಟ್ ಕೊಹ್ಲಿ ಬಗ್ಗೆ ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಇನ್ನೂ ಈ ಭರ್ಜರಿ ಜಯದೊಂದಿಗೆ ಹಾಲಿ ಚಾಂಪಿಯನ್ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications