For Quick Alerts
ALLOW NOTIFICATIONS  
For Daily Alerts
 

R Ashwin: ಒಂದೇ ಪಂದ್ಯದಲ್ಲಿ ಹಲವು ದಿಗ್ಗಜ ಆಟಗಾರರ ದಾಖಲೆ ಅಳಿಸುವ ಸನಿಹದಲ್ಲಿ ಅಶ್ವಿನ್

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಎರಡನೇ ಟೆಸ್ಟ್‌ ಕಾನ್ಪುರ್‌ದ ಗ್ರೀನ್‌ ಪಾರ್ಕ್‌ ಅಂಗಳದಲ್ಲಿ ನಡೆಯಲಿದೆ. ಈಗಾಗಲೇ ಚೆನ್ನೈನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದು ಬೀಗಿರುವ ರೋಹಿತ್‌ ಪಡೆ, ಎರಡನೇ ಟೆಸ್ಟ್‌ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಹೊಸ್ತಿಲಲ್ಲಿ ನಿಂತಿದೆ. ಈ ಪಂದ್ಯದಲ್ಲಿ ಹಲವು ಸ್ಟಾರ್‌ ಆಟಗಾರರು ದಾಖಲೆಯನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಆರ್ ಅಶ್ವಿನ್ ಸಹ ದೊಡ್ಡ ದಾಖಲೆಯನ್ನು ಬರೆಯಲು ಸಿದ್ಧರಾಗಿದ್ದಾರೆ.

ಕಾನ್ಪುರ್‌ನಲ್ಲಿ ಮೂರು ವರ್ಷಗಳ ಬಳಿಕ ಟೆಸ್ಟ್‌ ನಡೆಯುತ್ತಿದೆ. ಲಾಸ್ಟ್‌ ಟೆಸ್ಟ್‌ ಈ ಅಂಗಳದಲ್ಲಿ ನವೆಂಬರ್‌ 2021ರಂದು ನಡೆದಿತ್ತು. ಆಗ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈಗ ಬಾಂಗ್ಲಾದೇಶದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಕ್ಲೀನ್‌ ಸ್ವೀಪ್ ಮಾಡಿಕೊಳ್ಳುವ ಆಸೆ ಟೀಮ್ ಇಂಡಿಯಾದ್ದಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್‌ ಅಶ್ವಿನ್ ಈ ಪಂದ್ಯದಲ್ಲಿ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

R Ashwin Poised for Historic Feat in Kanpur Test Match

ಚೆನ್ನೈನಲ್ಲಿ ಭರ್ಜರಿ ಗೆಲುವು

ಮೂರು ವರ್ಷದ ಹಿಂದೆ ನ್ಯೂಜಿಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಇದ್ದ ನಾಲ್ವರು ಆಟಗಾರರು ಈಗ ತಂಡದಲ್ಲಿದ್ದಾರೆ. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿತ್ತು. ಈಗಲೂ ಇದೇ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ಚೆನ್ನೈ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದ ಅಶ್ವಿನ್‌, ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾ ಬ್ಯಾಟರ್‌ಗಳಿಗೆ ಕಾಟ ನೀಡಿದ್ದರು. ಅಲ್ಲದೆ ಆರು ವಿಕೆಟ್‌ ಪಡೆದು ಬೀಗಿದ್ದರು. ಇವರ ಭರ್ಜರಿ ಪ್ರದರ್ಶನದ ಫಲವಾಗಿ ಅಶ್ವಿನ್‌ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

ಕಾನ್ಪುರ್‌ನಲ್ಲಿ ಅಶ್ವಿನ್ ಅಬ್ಬರ

ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಆರ್ ಅಶ್ವಿನ್ ಉತ್ತಮ ದಾಖಲೆ ಹೊಂದಿದ್ದಾರೆ. ಅಶ್ವಿನ್ ಈ ಮೈದಾನದಲ್ಲಿ ಒಟ್ಟು 2 ಟೆಸ್ಟ್‌ ಪಂದ್ಯಗಳ 4 ಇನಿಂಗ್ಸ್‌ಗಳನ್ನು ಆಡಿದ್ದು 21.37ರ ಸರಾಸರಿಯಲ್ಲಿ 16 ವಿಕೆಟ್‌ ಕಬಳಿಸಿದ್ದಾರೆ. ಅಶ್ವಿನ್‌ ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ ಪಡೆಯುವಲ್ಲಿ ಸಫಲರಾದರೆ ಒಂದೇ ಟೈಮ್‌ಗೆ ಮೂವರು ದಿಗ್ಗಜ ಆಟಗಾರರ ದಾಖಲೆಯನ್ನು ಅಳಿಸಿ ಹಾಕಬಹುದು.

R Ashwin Poised for Historic Feat in Kanpur Test Match

ಕಾನ್ಪುರ್‌ನ ಗ್ರೀನ್‌ ಪಾರ್ಕ್ ಅಂಗಳದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಹೊಂದಿದ್ದಾರೆ. ಇಲ್ಲಿ ಆಡಿದ 7 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಪಿಲ್ ದೇವ್ ಅವರ ದಾಖಲೆಯನ್ನು ಹಿಂದಿಕ್ಕಲು ಅಶ್ವಿನ್‌ಗೆ 10 ವಿಕೆಟ್‌ಗಳ ಅವಶ್ಯಕತೆ ಇದೆ. ಈ ಅಂಗಳದಲ್ಲಿ ಅನಿಲ್ ಕುಂಬ್ಳೆ 21 ಹಾಗೂ ಹರ್ಭಜನ್ ಸಿಂಗ್ 20 ವಿಕೆಟ್‌ ಕಬಳಿಸಿದ್ದಾರೆ. ಅಶ್ವಿನ್ ಈ ಟೆಸ್ಟ್‌ ಪಂದ್ಯದಲ್ಲಿ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ.

Story first published: Thursday, September 26, 2024, 10:45 [IST]
Other articles published on Sep 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+