ಭಾರತದ ಈ ಆಟಗಾರ ಉನ್ನತ ಸ್ಥಾನಕ್ಕೇರುವುದರಲ್ಲಿ ಅನುಮಾನವೇ ಇಲ್ಲ: ಟೀಕಾಕಾರರ ವಿರುದ್ಧ ಸಿಡಿದ ಸ್ಟಾರ್ ಕ್ರಿಕೆಟಿಗ

ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಭಾರತದ ಯುವ ಆಟಗಾರ ಅರ್ಶದೀಪ್ ಸಿಂಗ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಳೆದ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿದ ಬಳಿಕ ಅರ್ಷದೀಪ್ ಸಿಂಗ್ ಬಗ್ಗೆ ಅಭಿಮಾನಿಗಳು ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಇಂಥಾ ಅಭಿಮಾನಿಗಳಿಗೆ ಆರ್ ಅಶ್ವಿನ್ ಚಾಟಿ ಬೀಸಿದ್ದು ಭಾರತೀಯ ಯುವ ವೇಗಿಯ ಸಾಮರ್ಥ್ಯದ ಬಗ್ಗೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್ ಅರ್ಶ್‌ದೀಪ್ ಅವರನ್ನು ಟ್ರೋಲ್ ಮಾಡಿದ ಅಭಿಮಾನಿಗಳ ವಿರುದ್ಧ ಕೆಂಡ ಕಾರಿದ್ದಾರೆ. ಅಭಿಮಾನಿಗಳು ಸ್ವಲ್ಪ ಸಂಯಮದಿಂದ ವರ್ತಿಸಬೇಕು ಎಂದಿರುವ ಅಶ್ವಿನ್ ಅಂಥಾ ಒತ್ತಡದ ಸಂದರ್ಭದಲ್ಲಿಯೂ ಅಂತಿಮ ಓವರ್‌ಅನ್ನು ಅರ್ಧುತವಾಗಿ ಮಾಡಿರುವ ಅರ್ಶದೀಪ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ.

ನಿರ್ಣಾಯಕ ಹಂತದಲ್ಲಿ ಕ್ಯಾಚ್ ಡ್ರಾಪ್
ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ನಿರ್ಣಾಯಕ ಹಂತದ ಸಂದರ್ಭದಲ್ಲಿ ಆಸಿಫ್ ಅಲಿ ನೀಡಿದ್ದ ಸುಲಭ ಕ್ಯಾಚ್‌ಅನ್ನು ಆರ್ಶ್‌ದೀಪ್ ಸಿಂಗ್ ಡ್ರಾಪ್ ಮಾಡಿದ್ದರು. ಈ ಕಾರಣಕ್ಕಾಗಿ ಅಭಿಮಾನಿಗಳು ಯುವ ವೇಗಿಯನ್ನು ನಿರ್ದಯವಾಗಿ ಟೀಕೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಿಂದನೆಗಳನ್ನು ಕೂಡ ಅವರು ಎದುರಿಸಿಬೇಕಾಯಿತು. ಈ ಪಂದ್ಯದ ಅಂತಿಮ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದ ಅರ್ಶದೀಪ್ ಅದ್ಭುತ ಪ್ರದರ್ಶನ ನೀಡಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ.

ಪಾಕ್ ವಿರುದ್ಧದ ಬೌಲಿಂಗ್ ಪ್ರದರ್ಶನಕ್ಕೆ ಅಶ್ವಿನ್ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಅಶ್ವಿನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಪಾಕಿಸ್ತಾನದ ವಿರುದ್ಧ ಅರ್ಶದೀಪ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಅಂತಿಮ ಓವರ್‌ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದ ಅವರು ಪಾಕಿಸ್ತಾನ ತಂಡಕ್ಕೆ ಕಠಿಣ ಸವಾಲೊಡ್ಡಿದರು. ಕ್ಯಾಚ್‌ಅನ್ನು ಕೈಚೆಲ್ಲಿದ್ದರೂ ಎಷ್ಟು ಅದ್ಭುತವಾಗಿ ಅವರು ಬೌಲಿಂಗ್ ನಡೆಸಿದ್ದರು. ಎಷ್ಟಯ ಅದ್ಭುತವಾದ ಹಿಡಿತ. ಶ್ರೀಲಂಕಾ ಹಾಗೂ ಪಾಕಿಸ್ತಾನ ಎರಡು ಪಂದ್ಯಗಳಲ್ಲಿಯೂ ಮೆಚ್ಚುವಂತಾ ಬೌಲಿಂಗ್ ದಾಳಿ. ಆ ಹುಡುಗನಿಗೆ ದೊಡ್ಡ ಸೆಲ್ಯೂಟ್"ಎಂದಿದ್ದಾರೆ ಆರ್ ಅಶ್ವಿನ್.

U-17, U-19 ದಿನಗಳಿಂದ ಗಮನಿಸುತ್ತಿದ್ದೇನೆ
ಮುಂದುವರಿದು ಮಾತನಾಡಿದ ಆರ್ ಅಶ್ವಿನ್ ಯುವ ವೇಗಿ ಅರ್ಷದೀಪ್ ಸಿಂಗ್ ಅವರನ್ನು ತಾನು ಅವರ U-17, U-19 ದಿನಗಳಿಂದಲೂ ಗಮನಿಸಿಕೊಂಡು ಬರುತ್ತಿದ್ದೇನೆ ಎಂದಿದ್ದಾರೆ. "ಅಂಡರ್ 17, 19 ದಿನಗಳಿಂದಲೂ ನಾನು ಅವರನ್ನು ಗಮನಿಸಿಕೊಂಡು ಬಂದಿದ್ದೇನೆ. ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಅವರೊಂದಿಗೆ ಆಡಿಯೂ ಇದ್ದೇನೆ. ಆತನೋರ್ವ ಅದ್ಭುತ ವ್ಯಕ್ತಿ. ಅದ್ಭುತವಾದ ಕರ್ತವ್ಯನಿಷ್ಟೆ ಹೊಂದಿರುವ ಆಟಗಾರ ಆತ. ಈ ಹುಡುಗ ಖಂಡಿತವಾಗಿಯೂ ಉನ್ನತ ಸ್ಥಾನಕ್ಕೇರುತ್ತಾನೆ. ಅದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ"ಎಂದಿದ್ದಾರೆ ಆರ್ ಅಶ್ವಿನ್.

ವಿಶ್ವಕಪ್‌ಗೆ ಆಯ್ಕೆಯಾಗಿರುವ ಅರ್ಷದೀಪ್ ಸಿಂಗ್
ಏಷ್ಯಾ ಕಪ್ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಸಿಕ್ಕ ಅವಕಾಶದಲ್ಲಿ ನೀಡಿದ ಅದ್ಭುತ ಪ್ರದರ್ಶನದ ಕಾರಣ ಈ ಬಾರಿಯ ವಿಶ್ವಕಪ್ ತಂಡದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಜಸ್ಪ್ರೀತ್ ಬೂಮ್ರಾ, ಭುವೇನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಜೊತೆಗೆ ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications