ಆರ್‌ಸಿಬಿ 2 ವರ್ಷದಲ್ಲಿ ಮತ್ತೊಂದು ಟ್ರೋಫಿ ಗೆಲ್ಲಬಹುದು: ಅಶ್ವಿನ್ ಭವಿಷ್ಯ
17 ವರ್ಷಗಳ ಕಾಯುವಿಕೆ ಕಳೆದ ಬಾರಿ ಕೊನೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಳೆದ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಸಂಭ್ರಮಿಸಿದೆ. ಈ ಬಾರಿ ಆರ್‌ಸಿಬಿ ಹಾಲಿ ಚಾಂಪಿಯನ್ ಹಣೆಪಟ್ಟಿಯೊಂದಿಗೆ ಕಣಕ್ಕೆ ಇಳಿಯಲಿದೆ. 19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಸ್ಪಿನ್ ಮಾಂತ್ರಿಕ ಅಶ್ವಿನ್ ದೊಡ್ಡ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು ತಂಡ ಸಮತೋಲಿತವಾಗಿದೆ. ಪ್ರಸ್ತುತ ತಂಡವು ಎಷ್ಟು ಸಮತೋಲಿತವಾಗಿದೆಯೆಂದರೆ ಅವರು ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಎರಡು ಪ್ರಶಸ್ತಿಗಳನ್ನು ಗೆಲ್ಲಬಹುದು ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಹೊಸ ಹಾಗೂ ಅನುಭವಿಗಳ ತಂಡದ ಗುಣಗಾನ ಮಾಡಿದರು. ಆರ್‌ಸಿಬಿ ತಂಡವನ್ನು ನೋಡಿದಾಗ ತಂಡ ಮುಂದಿನ 2 ವರ್ಷಗಳಲ್ಲಿ ತನ್ನ ಗೆಲುವಿನಲ್ಲಿ ಮತ್ತೊಂದು ಟ್ರೋಫಿ ಗೆಲ್ಲಬಹುದು. ಐಪಿಎಲ್ ಗೆಲ್ಲುವುದು ಸುಲಭವಲ್ಲ. ಆದರೆ ಆರ್‌ಸಿಬಿ ತಂಡದಲ್ಲಿ ಆಟಗಾರರು ಸ್ಥಿರ ಪ್ರದರ್ಶನ ನೀಡಬಲ್ಲರು ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡದಲ್ಲಿನ ನ್ಯೂನತೆಗಳನ್ನು ಚೆನ್ನಾಗಿ ಅರಿತುಕೊಂಡು ಈ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.
ಆರ್‌ಸಿಬಿ ಪ್ಲೇಯಿಂಗ್ ಹೆಸರಿಸಿದ ಅಶ್ವಿನ್
ಅಶ್ವಿನ್ ಇದೇ ವೇಳೆ ಆರ್‌ಸಿಬಿ ತಂಡದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಬಗ್ಗೆಯೂ ಮಾತನಾಡಿದ್ದಾರೆ. ಆರ್‌ಸಿಬಿ ತಂಡದಲ್ಲಿ ವೇಗದ ಬೌಲರ್‌ಗಳೇ ದಂಡೇ ಇದೆ. ಈ ಬೌಲರ್‌ಗಳು ತಂಡದ ಸಂಯೋಜನೆಗೆ ನೆರವು ನೀಡಲಿದ್ದಾರೆ. ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಜೋಶ್ ಹ್ಯಾಜಲ್‌ವುಡ್ ಅಲಭ್ಯರಾಗಲಿದ್ದಾರೆ. ಈ ಸನ್ನಿವೇಶದಲ್ಲಿ ಆರ್‌ಸಿಬಿ ಫಿಲ್ ಸಾಲ್ಟ್, ಜಾಕಬ್ ಬೆಥೆಲ್, ರೊಮಾರಿಯೋ ಶೆಫರ್ಡ್, ಟೀಮ್ ಡೇವಿಡ್ ಅವರನ್ನು ವಿದೇಶಿ ಆಟಗಾರರಾಗಿ ಆಡಿಸುವುದು ಉತ್ತಮ ಆಯ್ಕೆ.
ಆರ್‌ಸಿಬಿ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲೆಂಡ್ ತಂಡದ ಜಾಕಬ್ ಡಫಿ, ಮಂಗೇಶ್ ಯಾದವ್ ಅವರಂತಹ ಬೌಲರ್‌ಗಳು ಇದ್ದಾರೆ. ಇವರನ್ನು ಆರ್‌ಸಿಬಿ ಪರಿಸ್ಥಿತಿಗೆ ಅನುಗುಣವಾಗಿ ಬದಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಅಶ್ವಿನ್ ಅವರು ಸೂಚಿಸಿದ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್ ಅವರಿಗೆ ಸ್ಥಾನವಿಲ್ಲ. ಈ ಇಬ್ಬರೂ ಆಟಗಾರರು ಈಗಾಗಲೇ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಈ ಆಟಗಾರರು ಅಶ್ವಿನ್ ಪ್ರಕಟಿಸಿದ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿಲ್ಲ. ಕೃನಾಲ್ ಪಾಂಡ್ಯ ಆಲ್‌ರೌಂಡರ್ ರೂಪದಲ್ಲಿ ಸ್ಥಾನ ಪಡೆದರೆ, ಸುಯೇಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿಯಬಹುದು ಎಂದು ಅಶ್ವಿನ್ ನಂಬಿದ್ದಾರೆ. ಭುವಿ, ದಯಾಳ್ ಮಂಗೇಶ್ ವೇಗದ ಬೌಲಿಂಗ್ ನೊಗವನ್ನು ಮುನ್ನಡೆಸಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಶ್ವಿನ್ ಸೂಚಿಸಿದ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಾಕಬ್ ಬೆಥೆಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಟೀಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮಂಗೇಶ್ ಯಾದವ್, ಯಶ್ ದಯಾಳ್, ಸುಯೇಶ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications