ಬಿಗ್ ಟೂರ್ನಿಯಿಂದ ಭಾರತದ ಪ್ಲೇಯರ್ ಹೊರಕ್ಕೆ
ಭಾರತದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಇವರು ವಿದೇಶಿ ಲೀಗ್‌ನಲ್ಲಿ ಆಡುವುದನ್ನು ಕಾಣಬಹುದು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಈ ಆಸೆಗೆ ಕೊಂಚ ಬ್ರೇಕ್ ಬಿದ್ದಿದೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಇವರು ಆಡುತ್ತಾರೆ ಎಂದು ಎಲ್ಲರೂ ತಿಳಿದು ಕೊಂಡಿದ್ದರು. ಆದರೆ ಈ ಬಾರಿ ಅವರು ಕಣಕ್ಕೆ ಇಳಿಯುತ್ತಿಲ್ಲ. ಅಲ್ಲದೆ ಇದಕ್ಕೆ ಕಾರಣವನ್ನು ಸಹ ನೀಡಿದ್ದಾರೆ.
ಅಶ್ವಿನ್ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ಅವರು ಮುಂಬರುವ ಬಿಗ್ ಬ್ಯಾಷ್ ಲೀಗ್‌ನಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಬಿಬಿಎಲ್‌ನಲ್ಲಿ ಅವರು ಆಡಲು ಸಾಧ್ಯವಿಲ್ಲ. ಇವರು ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ತಂಡದ ಜೊತೆ ಸಹಿ ಹಾಕಿದ್ದರು. ಈ ಮೂಲಕ ಈ ಲೀಗ್‌ನಲ್ಲಿ ಆಡುವ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿ ತಮ್ಮದಾಗಿಸಿಕೊಳ್ಳಲಿದ್ದರು.

"15ನೇ ಆವೃತ್ತಿಯ ಬಿಗ್ ಬ್ಯಾಷ್ ಲೀಗ್‌ನನಿಂದ ಹೊರ ನಡೆದಿರುವುದು ನನಗೆ ತುಂಬಾ ದುಃಖ ತಂದಿದೆ. ಈಗ ನನ್ನ ಚಿತ್ತ ಚೇತರಿಕೆಯತ್ತ ನೆಟ್ಟಿದೆ. ಸಿಡ್ನಿ ಥಂಡರ್ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞ. ಟ್ರೆಂಟ್ ಕೋಪ್ಲ್ಯಾಂಡ್ ಮತ್ತು ಇಡೀ ಆಡಳಿತ ಮಂಡಳಿಯು ನಮ್ಮ ಮೊದಲ ಸಂಭಾಷಣೆಯಿಂದಲೇ ನನ್ನನ್ನು ಕ್ಲಬ್‌ನ ಭಾಗವೆಂದು ಭಾವಿಸುವಂತೆ ಮಾಡಿತು. ಎಲ್ಲವೂ ಅಂದುಕೊಂಡಂತೆ ಆದರೆ ಆವೃತ್ತಿಯ ಕೊನೆಯಲ್ಲಿ ತಂಡವನ್ನು ಸೇರಬಹುದು ಎಂದು ಅಶ್ವಿನ್ ತಿಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರ ಗಾಯದ ಬಗ್ಗೆ ತಿಳಿದು ಬೇಸರವಾಯಿತು. ಆದರೆ ಈ ಆವೃತ್ತಿಯ ಕೆಲವು ಪಂದ್ಯಗಳಿಗೆ ನಾವು ಅವರನ್ನು ಡಗೌಟ್‌ನಲ್ಲಿ ಸೇರಿಸಿಕೊಳ್ಳುತ್ತೇವೆ ಎಂದು ಸಿಡ್ನಿ ಥಂಡರ್‌ನ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

ಅಶ್ವಿನ್ ಸಾಧನೆ
ಭಾರತದ ಪರ ಮೂರು ಸ್ವರೂಪಗಳಲ್ಲಿ ಆಡಿದ ಅಶ್ವಿನ್ ಒಬ್ಬ ಶ್ರೇಷ್ಠ ಸ್ಪಿನ್ ಬೌಲರ್. ಇವರು ಆಡಿದ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್, 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್, 65 ಟಿ20 ಗಳಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಇವರು ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ಬಿಗ್ ಬ್ಯಾಷ್ ಲೀಗ್ ಆಡಲು ಅರ್ಹರಾಗಿದ್ದಾರೆ. ಇವರು ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 317 ವಿಕೆಟ್ ಉರುಳಿಸಿದ್ದಾರೆ. ಇವರು ಇನ್ನು ವಿದೇಶಿ ಲೀಗ್‌ನಲ್ಲಿ ಆಡುವ ಕನಸು ಇನ್ನು ಕೊಂಚ ದೂರ ಸರಿದಿದೆ.
ಸಿಡ್ನಿ ತಂಡ: ವೆಸ್ ಅಗರ್, ಟಾಮ್ ಆಂಡ್ರ್ಯೂಸ್, ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್, ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್), ಓಲಿ ಡೇವಿಸ್, ಲಾಕಿ ಫರ್ಗುಸನ್ (ನ್ಯೂಜಿಲೆಂಡ್), ಮ್ಯಾಥ್ಯೂ ಗಿಲ್ಕ್ಸ್, ಕ್ರಿಸ್ ಗ್ರೀನ್, ರಯಾನ್ ಹ್ಯಾಡ್ಲೀ, ಶದಾಬ್ ಖಾನ್ (ಪಾಕಿಸ್ತಾನ), ಸ್ಯಾಮ್ ಕಾನ್ಸ್ಟಾಸ್, ನಾಥನ್ ಮೆಕ್‌ಆಂಡ್ರ್ಯೂ, ಬ್ಲೇಕ್ ನಿಕಿತಾರಸ್, ಐಡೆನ್ ಓ'ಕಾನರ್, ಡೇನಿಯಲ್ ಸ್ಯಾಮ್ಸ್, ತನ್ವೀರ್ ಸಂಘ, ಡೇವಿಡ್ ವಾರ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications