Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ ಅಶ್ವಿನ್ ಕುಟುಂಬದ 10 ಸದಸ್ಯರಿಗೆ ಕೋವಿಡ್-19 ಸೋಂಕು!

R Ashwins wife Prithi Narayanan says 10 members returned COVID positive

ನವದೆಹಲಿ: ಕೋವಿಡ್-19 ದ್ವಿತೀಯ ಅಲೆ ಭಾರತದಲ್ಲಿ ತಲ್ಲಣ ಸೃಷ್ಠಿಸಿದೆ. ಕಳೆದ ವಾರದಲ್ಲೇ ಭಾರತದಲ್ಲಿ 3 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ ಎದುರಾಗುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ.

ಭಾರತದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣಕ್ಕೇನೆ ಭಾರತದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಿಂದ ಒಂದಿಷ್ಟು ಪ್ರಮುಖ ಕ್ರಿಕೆಟಿಗರು ಹಿಂದೆ ಸರಿದಿದ್ದರು. ಅವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆರ್‌ ಅಶ್ವಿನ್ ಕೂಡ ಒಬ್ಬರಾಗಿದ್ದರು.

ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಕೋವಿಡ್‌ ಸೋಂಕು ಕುಟುಂಬಸ್ಥರನ್ನು ಭೀತಿಗೆ ತಳ್ಳಿರುವ ಬಗೆಯನ್ನು ಹೇಳಿಕೊಂಡಿದ್ದಾರೆ. ಮನೆಯ 10 ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಈ ವಾರ 'ಭಯಾನಕ ವಾರ'ವಾಗಿ ಕಾಣಿಸಿದೆ ಎಂದು ಪ್ರೀತಿ ಹೇಳಿದ್ದಾರೆ.

'6 ಮಂದಿ ದೊಡ್ಡವರು, 4 ಮಂದಿ ಮಕ್ಕಳು ಒಂದೇ ವಾರ ಕೋವಿಡ್-19ಗೆ ಪಾಸಿಟಿವ್ ಬಂದಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಬೇರೆ ಬೇರೆ ಮನೆ, ಆಸ್ಪತ್ರೆಗಳಲ್ಲಿದ್ದೇವೆ. ಇದು ಭಯಾನಕ ವಾರವಾಗಿದೆ,' ಎಂದು ಪ್ರೀತಿ ಮಾಹಿತಿ ನೀಡಿದ್ದಾರೆ. ಪ್ರೀತಿ ಹಲವಾರು ಟ್ವೀಟ್‌ಗಳಲ್ಲಿ ಕೊರೊನಾ ಕುರಿತ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

Story first published: Saturday, May 1, 2021, 18:04 [IST]
Other articles published on May 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+