ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಅಬ್ಬರಿಸಲು ಸಜ್ಜಾಗುತ್ತಿದೆ. ಇದರ ಮಧ್ಯೆ ಭಾರತ ತಂಡ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಸ್ಟಾರ್ ಕ್ರಿಕೆಟಿಗ ಚಾಂಪಿಯನ್ಸ್ ಟ್ರೋಫಿಯ ಭಾರತ ಅಂತಿಮ ತಂಡದಲ್ಲಿಯೂ ಸೇರಿಸಿಕೊಳ್ಳಬಹುದು ಎಂದಿದ್ದಾರೆ. ಏಕೆಂದರೆ ಪ್ರಸ್ತುತ ತಾತ್ಕಾಲಿಕ ಭಾರತ ತಂಡವನ್ನು ಮಾತ್ರ ಆಯ್ಕೆ ಮಾಡಲಾಗಿದೆ.
ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಿರುವ ತಾತ್ಕಾಲಿಕ ಭಾರತ ತಂಡದಲ್ಲಿ ಈ ಸ್ಟಾರ್ ಆಟಗಾರ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಈ ಸ್ಟಾರ್ ಆಟಗಾರ ಬೇರೆ ಯಾರು ಅಲ್ಲ, ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ.

ಚಾಂಪಿಯನ್ಸ್ ಟ್ರೋಫಿ 2025ರ ಅತಿಂಮ ಭಾರತ ತಂಡದಲ್ಲಿ ವರುಣ್ ಚಕ್ರವರ್ತಿ ಅವರಿಗೆ ಅವಕಾಶ ಸಿಗಬಹುದು ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವರುಣ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ವರುಣ್ ಚಕ್ರವರ್ತಿ ಟಿ20 ಸರಣಿಯ 5 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್ ತಂಡದ ಬ್ಯಾಟರ್‌ಗಳನ್ನು ವರುಣ್ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು.
ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ಅವರ ಪ್ರದರ್ಶನವನ್ನು ನೋಡಿದ ಅಶ್ವಿನ್, ಇಂಗ್ಲೆಂಡ್ ವಿರುದ್ಧದ ಭಾರತದ 3 ಪಂದ್ಯಗಳ ಏಕದಿನ ಸರಣಿ ಮತ್ತು ನಂತರ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ವರುಣ್ ಅವರಿಗೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ.
ವರುಣ್ ಬಗ್ಗೆ ಮಾತನಾಡಿರುವ ಅಶ್ವಿನ್, ಭಾರತವು ಅಂತಿಮ ತಂಡವನ್ನು ಬಿಡುಗಡೆ ಮಾಡಿಲ್ಲ. ತಾತ್ಕಾಲಿಕ ತಂಡವನ್ನು ಮಾತ್ರ ಬಿಡುಗಡೆ ಮಾಡಿರುವುದರಿಂದ ಐಸಿಸಿ ಟೂರ್ನಿಗೆ ವರುಣ್ ಚಕ್ರವರ್ತಿಗೆ ಅವಕಾಶ ನೀಡಬಹುದು ಎಂದು ಭಾವಿಸಿದ್ದಾರೆ. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು, 'ವರುಣ್ ಚಕ್ರವರ್ತಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಇರಬೇಕಿತ್ತೇ ಎಂಬುದರ ಕುರಿತು ನಾವೆಲ್ಲರೂ ಮಾತನಾಡುತ್ತಿದ್ದೇವೆ. ಅವರು ಭಾರತ ತಂಡದಲ್ಲಿ ಇರುವ ಸಾಧ್ಯತೆ ಇದೆ ಎಂದು ನಾನು ಭಾವಿಸುತ್ತೇನೆ. ಅವನು ಅಲ್ಲಿಗೆ ಬರಬಹುದು. ಎಲ್ಲಾ ತಂಡಗಳು ಒಂದೇ ತಾತ್ಕಾಲಿಕ ತಂಡವನ್ನು ಹೆಸರಿಸಿರುವುದರಿಂದ ಒಂದು ಸಾಧ್ಯತೆ ಇದೆ. ಆದ್ದರಿಂದ, ಅವರನ್ನು ಆಯ್ಕೆ ಮಾಡಬಹುದು ಎಂದು ಅಶ್ವಿನ್ ಹೇಳಿದ್ದಾರೆ.
ಪ್ರಸ್ತುತ ಭಾರತ ತಂಡವನ್ನು ನೋಡಿದರೆ, ಒಬ್ಬ ವೇಗದ ಬೌಲರ್ ಹೊರಗೆ ಹೋಗಿ ವರುಣ್ ತಂಡಕ್ಕೆ ಬಂದರೆ, ಹೆಚ್ಚುವರಿ ಸ್ಪಿನ್ನರ್ ಇರುತ್ತಾನೆ. ವರುಣ್ ಅವರನ್ನು ತಂಡಕ್ಕೆ ಕರೆತರುವ ಯೋಚನೆ ಬಂದರೆ ಅವರು ಯಾರನ್ನು ಬಿಡಲು ಬಯಸುತ್ತಾರೆಂದು ನನಗೆ ತಿಳಿದಿಲ್ಲ. ನಾವು ಕಾದು ನೋಡೋಣ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಭಾರತವು ಆಕ್ರಮಣಕಾರಿ ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದೆ. 15 ಸದಸ್ಯರ ತಂಡದಲ್ಲಿ ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಈಗಾಗಲೇ ಸ್ಥಾನ ಪಡೆದಿದ್ದಾರೆ.
ಒಂದು ವೇಳೆ ವರುಣ್ ಚಕ್ರವರ್ತಿ ಬಂದರೆ ಭಾರತ ತಂಡಕ್ಕೆ ಐದು ಸ್ಪಿನ್ನರ್‌ಗಳು ಸೇರ್ಪಡೆಯಾಗಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಆಡಲು ವರುಣ್‌ಗೆ ಅವಕಾಶ ಸಿಗಬಹುದು. ಅವರನ್ನು ನೇರವಾಗಿ ಚಾಂಪಿಯನ್ಸ್ ಟ್ರೋಫಿಗೆ ಕರೆದೊಯ್ಯುವುದು ಸುಲಭದ ನಿರ್ಧಾರ. ಅವರು ಇಲ್ಲಿವರೆಗೂ ಏಕದಿನ ಪಂದ್ಯಗಳನ್ನು ಆಡಿಲ್ಲ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಅಶ್ವಿನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.