Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಮುಂದಾದ ಭಾರತದ ಅನುಭವಿ ಆಫ್‌ ಸ್ಪಿನ್ನರ್‌

R Ashwin set to play six games for Nottinghamshire


ಹೊಸದಿಲ್ಲಿ, ಮೃ 19: ಭಾರತ ಟೆಸ್ಟ್‌ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ಆರ್‌. ಅಶ್ವಿನ್‌, ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ನಾಟಿಂಗ್‌ಹ್ಯಾಂಶೈರ್‌ ಪರ ಆಡಲಿದ್ದಾರೆ.

ಚೊಚ್ಚಲ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ಪೂರ್ವ ಸಿದ್ಧತೆಯಲ್ಲಿರುವ ಆಫ್‌ಸ್ಪಿನ್ನರ್‌ ಅಶ್ವಿನ್‌, ಟೀಮ್‌ ಇಂಡಿಯಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಲಭ್ಯವಾಗುವ ಸಮಯದಲ್ಲಿ ನಾಟಿಂಗ್‌ಹ್ಯಾಂಶೈರ್‌ ಪರ ಒಟ್ಟು ಆರು ಪಂದ್ಯಗಳನ್ನು ಆಡಲಿದ್ದಾರೆ.

"ಹೌದು, ನಾಟಿಂಗ್‌ಹ್ಯಾಂಶೈರ್‌ ಪರ ಅಶ್ವಿನ್‌ ಆಡಲಿದ್ದಾರೆ. ಕೌಂಟಿ ಕ್ರಿಕೆಟ್‌ನಿಂದ ಆಹ್ವಾನ ಬಂದರೆ ನೇರವಾಗಿ ಪಾಲ್ಗೊಳ್ಳುವಂತೆ ಬಿಸಿಸಿಐನ ಆಡಳಿತ ಸಮಿತಿಯು ಈಗಾಗಲೇ ಅನುಮತಿ ನೀಡಿದೆ. ಹೀಗಾಗಿ ಅಶ್ವಿನ್‌ ಕೌಂಟಿಯಲ್ಲಿ ಆಡುವುದು ಖಚಿತವಾಗಿದ್ದು, ನಾಟಿಂಗ್‌ಹ್ಯಾಂಶೈರ್‌ ತಂಡದ ಸಿಇಒ ಅವರಿಂದ ಒಪ್ಪಂದಕ್ಕೆ ಸಹಿ ಹಾಕುವುದಷ್ಟೇ ಬಾಕಿ ಇದೆ,'' ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತ ಟೆಸ್ಟ್‌ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಹ್ಯಾಂಶೈರ್‌ ತಂಡದ ಪರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೀಗ ಅಶ್ವಿನ್‌ ಕೂಡ ಇದೇ ಹಾದಿಯನ್ನು ಹಿಡಿದಿದ್ದಾರೆ.

ಅಂದಹಾಗೆ ಕೌಂಟಿ ಕ್ರಿಕೆಟ್‌ನಲ್ಲಿ32 ವರ್ಷದ ಅನುಭವಿ ಆಟಗಾರ ಅಶ್ವಿನ್‌ ಪಾಲ್ಗೊಳ್ಳುತ್ತಿರುವುದು ಇದು ಎರಡನೇ ಬಾರಿ ಆಗಿದೆ. ಇದಕ್ಕೂ ಮುನ್ನ 2017ರಲ್ಲಿ ವೋರ್‌ಸ್ಟರ್‌ಶೈರ್‌ ತಂಡದ ಪರ ಆಡಿ 20 ವಿಕೆಟ್‌ಗಳನ್ನು ಪಡೆದು 214 ರನ್‌ಗಳನ್ನೂ ಗಳಿಸಿದ್ದರು.

ಅಶ್ವಿನ್‌ ಮತ್ತು ರಹಾನೆ ಹೊರತಾಗಿ ಈ ಬಾರಿ ಕೌಂಟಿ ಕ್ರಿಕೆಟ್‌ನಲ್ಲಿ ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ ಮತ್ತು ಚೇತೇಶ್ವರ್‌ ಪೂಜಾರ ಕೂಡ ವಿವಿಧ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.

Story first published: Sunday, May 19, 2019, 19:19 [IST]
Other articles published on May 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+