ಟೆಸ್ಟ್ : ಸ್ಟೈನ್ ದಾಖಲೆ ಸಮಗಟ್ಟಿದ್ದ ಆರ್ ಅಶ್ವಿನ್
ಮೊಹಾಲಿ, ನ.06: ಭಾರತದ ನಂ.1 ಸ್ಪಿನ್ನರ್ ಆರ್ ಅಶ್ವಿನ್ ಅವರು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಹೊಸ ದಾಖಲೆ ಬರೆದಿದ್ದಾರೆ. ತ್ವರಿತಗತಿಯಲ್ಲಿ ಟೆಸ್ಟ್ ವಿಕೆಟ್ ಪಡೆದ ಬೌಲರ್ ಗಳ ಸಾಲಿಗೆ ನಿಂತಿದ್ದಾರೆ.
| ದಕ್ಷಿಣ ಆಫ್ರಿಕಾ vs ಭಾರತ ಚಿತ್ರ ಸಂಪುಟ
29 ವರ್ಷ ವಯಸ್ಸಿನ ಆಶ್ವಿನ್ ಅವರು ತ್ವರಿತಗತಿಯಿಂದ 150 ಟೆಸ್ಟ್ ವಿಕೆಟ್ ಪಡೆದುಕೊಂಡಿದ್ದಾರೆ. ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಈ ಮೈಲಿಗಲ್ಲು ದಾಟಿದರು.

ಇಮ್ರಾನ್ ತಾಹೀರ್ ನೀಡಿದ ಕ್ಯಾಚನ್ನು ಚೇತೇಶ್ವರ್ ಪೂಜಾರಾ ಪಡೆಯುತ್ತಿದ್ದಂತೆ ಅಶ್ವಿನ್ ಅವರು 29ನೇ ಟೆಸ್ಟ್ ನಲ್ಲಿ 150 ವಿಕೆಟ್ ಗಡಿ ದಾಟಿದರು. ಅಶ್ವಿನ್ ಅವರು 100 ವಿಕೆಟ್ ಗಳನ್ನು ತವರುನೆಲದಲ್ಲೇ ಗಳಿಸಿರುವುದು ಕೂಡಾ ದಾಖಲೆಯಾಗಿದೆ.
ಅಶ್ವಿನ್ ಅವರು 51 ರನ್ನಿತ್ತು 5 ವಿಕೆಟ್ ಗಳಿಸಿ ಭಾರತಕ್ಕೆ 17ರನ್ ಮುನ್ನಡೆ ದೊರೆಯುವಂತೆ ಮಾಡಿದರು. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 184ರನ್ನಿಗೆ ಆಲೌಟ್ ಆಗಿದೆ. ಇದು ಅಶ್ವಿನ್ ಅವರು 13ನೇ ಬಾರಿ 5 ವಿಕೆಟ್ ಗಳಿಸಿದ್ದಾರೆ.
ಇದಕ್ಕೂ ಮುನ್ನ ಆಫ್ ಸ್ಪಿನ್ನರ್ ಇಎಎಸ್ ಪ್ರಸನ್ನ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ. ಪ್ರಸನ್ನ ಅವರು 34 ಪಂದ್ಯಗಳಲ್ಲಿ 150ವಿಕೆಟ್ ಗಳಿಸಿದ್ದರು. ಈಗ ಅಶ್ವಿನ್ ಅವರು 29 ಪಂದ್ಯಗಳಲ್ಲಿ ಈ ಮೈಲಿಗಲ್ಲು ದಾಟಿ ಭಾರತೀಯ ದಾಖಲೆ ನಿರ್ಮಿಸಿದ್ದಾರೆ. ತ್ವರಿತಗತಿ ವಿಶ್ವದಾಖಲೆ ಇಂಗ್ಲೆಂಡಿನ ಸಿಡ್ನಿ ಬರ್ನ್ ಅವರ ಹೆಸರಿನಲ್ಲಿದೆ. 24 ಟೆಸ್ಟ್ ಗಳಲ್ಲಿ 150 ವಿಕೆಟ್ ಪಡೆದಿದ್ದರು.
ತ್ವರಿತ ಗತಿಯಲ್ಲಿ 150 ವಿಕೆಟ್ ಪಡೆದ ಟಾಪ್ 5 ಬೌಲರ್ಸ್
1. ಸಿಡ್ನಿ ಬರ್ನ್ಸ್ (ಇಂಗ್ಲೆಂಡ್)-24 ಪಂದ್ಯ
2. ವಾಖರ್ ಯೂನಿಸ್ (ಪಾಕಿಸ್ತಾನ) -27
3. ಕ್ಲಾರಿ ಗ್ರಿಮೆಟ್ (ಆಸ್ಟ್ರೇಲಿಯಾ)-28
4. ಆರ್ ಅಶ್ವಿನ್ (ಭಾರತ), ಹ್ಯೂ ಟೇ ಫೀಲ್ಡ್ (ದಕ್ಷಿಣ ಆಫ್ರಿಕಾ), ಇಯಾನ್ ಬೋಥಂ (ಇಂಗ್ಲೆಂಡ್), ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ), ಸಯೀದ್ ಅಜ್ಮಲ್ (ಪಾಕಿಸ್ತಾನ) -29
5. ಡೆನ್ನಿಸ್ ಲಿಲ್ಲಿ, ಶೇನ್ ವಾರ್ನ್, ಸ್ಟುವರ್ಟ್ ಮೆಗ್ ಗಿಲ್ (ಆಸ್ಟ್ರೇಲಿಯಾ)
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications