For Quick Alerts
ALLOW NOTIFICATIONS  
For Daily Alerts
 

ತಂಡದ ಆಯ್ಕೆಯನ್ನು ಪ್ರಶ್ನಿಸಿದ ಅಶ್ವಿನ್? ಕುಲ್‌ದೀಪ್‌ಗೆ ಯಾವಾಗ ಅವಕಾಶ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯ ಪರ್ತ್‌ನಲ್ಲಿ ಮುಗಿದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ ಬಗ್ಗೆ ಮಾಜಿ ಸ್ಪಿನ್ ಬೌಲರ್ ಆರ್‌. ಅಶ್ವಿನ್‌ ಪ್ರಶ್ನೆ ಎತ್ತಿದ್ದಾರೆ. ಕುಲ್‌ದೀಪ್‌ ಯಾದವ್ ಅವರನ್ನು ಡ್ರಾಪ್ ಮಾಡಿದ್ದು ಏಕೆ ಎಂಬ ಬಗ್ಗೆ ಅಶ್ವಿನ್‌ ಪ್ರಶ್ನೆ ಕೇಳಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬೆನ್ನಲ್ಲೆ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮೂವರು ಆಲ್‌ರೌಂಡರ್‌ಗಳೊಂದಿಗೆ ಕಣಕ್ಕೆ ಇಳಿದಿತ್ತು. ಇದೇ ವೇಳೆ ನಿತೀಶ್‌ ಕುಮಾರ್ ರೆಡ್ಡಿ ಅವರಿಗೆ ಆಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಭಾರತ ತನ್ನ ಬ್ಯಾಟಿಂಗ್‌ನಲ್ಲಿ ಆಳವನ್ನು ನೋಡಿಕೊಂಡರೂ ಸಹ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 136 ರನ್‌ ಕಲೆ ಹಾಕುವಲ್ಲಿ ಮಾತ್ರ ಸಾಧ್ಯವಾಯಿತು. ಮಳೆ ಪದೇ ಪದೇ ಪಂದ್ಯಕ್ಕೆ ಕಾಟ ನೀಡಿದ್ದರಿಂದ 50 ಓವರ್‌ಗಳ ಪಂದ್ಯವನ್ನು 26 ಓವರ್‌ಗಳಿಗೆ ಇಳಿಸಲಾಯಿತು.

R Ashwin Slams India s Team Selection After Perth ODI Loss Why Drop Kuldeep Yadav

ನನಗೆ ಅರ್ಥವಾಗುತ್ತದೆ ಟೀಮ್ ಇಂಡಿಯಾ ಏಕೆ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಿತು ಎಂದು. ನಿತೀಶ್‌ ಕುಮಾರ್ ಅವರನ್ನು ಸೇರಿಸಿಕೊಂಡಾಗ ಬ್ಯಾಟಿಂಗ್‌ನಲ್ಲಿ ಆಳ ಸಿಗುತ್ತದೆ ಎಂಬುದೇ ತಂಡದ ನಿರ್ಧಾರವಾಗಿತ್ತು. ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು ಎಂಬ ಕಾರಣಕ್ಕೆ ಇವರಿಗೆ ಅವಕಾಶ ನೀಡಲಾಯಿತು. ಕುಲ್‌ದೀಪ್‌ ಅವರು ಸ್ವಾತಂತ್ರ್ತ ವಾಗಿ ಬಿಗುವಿನ ದಾಳಿ ನಡೆಸಿ ಎದುರಾಳಿಗೆ ಕಾಡಬಲ್ಲರು. ಪರ್ತ್‌ನ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳಿಗೂ ಕೊಂಚ ಸಹಾಯ ಸಿಗುತ್ತಿತ್ತು. ಆದರೂ ಕುಲ್‌ದೀಪ್‌ಗೆ ಅವಕಾಶ ನೀಡಲಿಲ್ಲ ಎಂದು ಅಶ್ವಿನ್ ತಿಳಿಸಿದ್ದಾರೆ.

ಬ್ಯಾಟರ್‌ಗಳೇ ಜವಾಬ್ದಾರಿಯನ್ನು ಪಡೆಯಲಿ..

ತಂಡದ ಮ್ಯಾನೇಜ್ಮೆಂಟ್‌ ಬ್ಯಾಟರ್‌ಗಳು ಹೆಚ್ಚು ಬೇಕು ಎಂದು ಭಾವಿಸಿದ್ದರೆ, ಬ್ಯಾಟರ್‌ಗಳೇ ಜವಾಬ್ದಾರಿಯನ್ನು ಪಡೆಯಬೇಕು. ಬ್ಯಾಟರ್‌ಗಳು ರನ್‌ಗಳನ್ನು ಬಾರಿಸಿ ತಂಡಕ್ಕೆ ಆಧಾರವಾಗಬೇಕು. ನೀವು ಒಬ್ಬ ಬ್ಯಾಟರ್‌ ಹೆಚ್ಚಾಗಿ ಆಡಿಸಿದರೂ ಅದು ಅವರಿಗೆ ರಕ್ಷಾ ಕವಚವೇ. ನಾನು ಯಾವಿಗಿನಿಂದಲೂ ಹೇಳುತ್ತಿರುವೆ. ನೀವು ನಿಮ್ಮ ಬೆಸ್ಟ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಬೇಕು. ನೀವು ನಿಮ್ಮ ಬ್ಯಾಟಿಂಗ್ ಆಳವನ್ನು ನೋಡಿಕೊಳ್ಳಲು ಹೋಗಿ ತಂಡದ ಸಮತೋಲವನ್ನು ಕೆಡಿಸುತ್ತಿದ್ದೀರಿ ಎಂದು ತಿಳಿಸಿದ್ದಾರೆ.

R Ashwin Slams India s Team Selection After Perth ODI Loss Why Drop Kuldeep Yadav

ನಿಮಗೆ ಇನ್ನು ತಂಡದಲ್ಲಿ ಎಷ್ಟು ಆಲ್‌ರೌಂಡ್‌ಗಳು ಬೇಕು. ಒಂದು ಕಾಲವಿತ್ತು. ಆಗ ತಂಡದಲ್ಲಿ ಆಲ್‌ರೌಂಡರ್‌ಗಳೇ ಇರಲಿಲ್ಲ. ನೀವು ನಿತೀಶ್‌ಗೆ ಅವಕಾಶ ನೀಡಿ, ನಿಮ್ಮ ಬೆಸ್ಟ್ ಸ್ಪಿನ್ ಬೌಲರ್‌ ಕಡೆಗಣನೆ ಮಾಡಿದ್ದೀರಿ ಎಂದು ತಿಳಿಸಿದ್ದಾರೆ. ಕುಲ್‌ದೀಪ್‌ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ಅವರ ಸೇವೆಯನ್ನು ಭಾರತ ತಂಡ ಸರಿಯಾಗಿ ಪಡೆಯಬಹುದಿತ್ತು ಎಂಬುದೇ ಅಶ್ವಿನ್ ವಾದವಾಗಿದೆ. ಕುಲ್‌ದೀಪ್‌ ಏಷ್ಯಾ ಕಪ್‌ ಟಿ20 ಹಾಗೂ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಮೊನಚಾದ ದಾಳಿ ನಡೆಸಿದ್ದರು.

Story first published: Monday, October 20, 2025, 11:22 [IST]
Other articles published on Oct 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+