Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಷೇಕ್‌ ಟೀಕಿಸಿದ ಪಾಕ್‌ ಮಾಜಿ ವೇಗಿ ಅಮೀರ್‌ಗೆ ತಿರುಗೇಟು ನೀಡಿದ ಅಶ್ವಿನ್

ಟಿ20 ವಿಶ್ವಕಪ್ನ ಸೂಪರ್ 8 ಹಂತದಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ 72 ರನ್‌ಗಳ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಕೆಗಳಿಗೆ ಮೈದಾನದಲ್ಲಿ ಉತ್ತರ ನೀಡಿದ್ದಾರೆ. ಇನ್ನು ಟೀಮ್ ಇಂಡಿಯಾ ಆರಂಭಿಕ ಆಟಗಾರನ ವಿರುದ್ಧ ಪಾಕಿಸ್ತಾನದ ಮೊಹಮ್ಮದ್‌ ಅಮೀರ್ ಟೀಕಾ ಪ್ರಹಾರ ಮಾಡಿದ್ದರು. ಪಾಕ್‌ ಆಟಗಾರನಿಗೆ ಟೀಮ್ ಇಂಡಿಯಾ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ತಿರುಗೇಟು ನೀಡಿದ್ದಾರೆ.

ಟಿ20 ವಿಶ್ವಕಪ್ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಅಭಿಷೇಕ್ ಶರ್ಮಾ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು ಈ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಲ್ಲದೆ ಅರ್ಧಶತಕ ಬಾರಿಸಿ ಮಿಂಚಿದರು. ಅಭಿಷೇಕ್ ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದ್ದರು. ಹೀಗಾಗಿ ಇವರ ಬ್ಯಾಟಿಂಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.

R Ashwin Slams Mohammad Amir

ಅಮೀರ್ ಹೇಳಿದ್ದೇನು?

ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಮೊಹಮ್ಮದ್ ಅಮೀರ್ ಅವರ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಅಮೀರ್ ಮಾತನಾಡಿದ್ದಾರೆ. ಅಭಿಷೇಕ್‌ ಶರ್ಮಾ ಅದ್ಭುತ ಬ್ಯಾಟರ್‌ ಅಲ್ಲ. ಅವರು (ಸ್ಲಾಗರ್) ಒಬ್ಬ ಟೆಕ್ನಿಕ್ ಇಲ್ಲದ ಆಟಗಾರ. ಅಭಿಷೇಕ್‌ ಅವರನ್ನು ನಮ್ಮದೇ ತಂಡದ ಸೈಮ್​ ಅಯೂಬ್ಗೆ ಹೋಲಿಸುವೆ. ಅಯೂಬ್ ಅವರು ಲೆಗ್‌ಸೈಡ್‌ನಲ್ಲಿ ಮಾತ್ರ ಆಡುತ್ತಿದ್ದರು. ನಾಲ್ಕನೇ ಹಾಗೂ ಐದನೇ ಸ್ಟಂಪ್‌ ಮೇಲೆ ಚೆಂಡು ಬಂದರೆ ಏನು ಮಾಡಬೇಕು ಎಂಬುದ ಆತನಿಗೆ ತಿಳಿದಿಲ್ಲ. ಟೀಮ್ ಇಂಡಿಯಾ ಆರಂಭಿಕ ಆಟಗಾರ ಸಹ ಇದೇ ರೀತಿ ಇದ್ದಾರೆ ಎಂದು ತಿಳಿಸಿದ್ದರು.

ಅಮೀರ್ ತಮ್ಮ ಹೇಳಿಕೆಯ ಬಗ್ಗೆ ಬದ್ಧರಾಗಿದ್ದಾರೆ. ಅಲ್ಲದೆ ಅಭಿಷೇಕ್‌ ಶರ್ಮಾ ಬಿಗ್ ಹಿಟ್‌ಗಳನ್ನು ಬಾರಿಸುವುದು ಬಿಟ್ಟು ಬೇರೆ ಆಟ ತಿಳಿದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಗಿಸೊ ರಬಾಡ ಬೌಲಿಂಗ್ ಮಾಡಲು ಬಂದಾಗ ಬ್ಯಾಟ್‌ ಮಾಡಲು ಕಂಗಾಲಾಗಿದ್ದರು ಎಂದು ಹೇಳಿದ್ದಾರೆ.

ಅಶ್ವಿನ್‌ ತಿರುಗೇಟು

ಪಾಕಿಸ್ತಾನದ ಮೊಹಮ್ಮದ್ ಅಮೀರ್‌ ಅವರ ಹೇಳಿಕೆಗೆ ಸ್ಪಿನ್ ಮಾಂತ್ರಿಕ ಅಶ್ವಿನ್ ಅಭಿಷೇಕ್ ಅವರ ಬ್ಯಾಟಿಂಗ್ ಶೈಲಿಯನ್ನು ಸಮರ್ಥಿಸಿಕೊಂಡರು. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಮೀರ್ ಅವರ ಟೀಕೆಯ ಬಗ್ಗೆ ಮಾತನಾಡಿರುವ ಅವರು, ಅಭಿಷೇಕ್‌ ಶರ್ಮಾ ಒಬ್ಬ ಬೆಸ್ಟ್‌ ಬ್ಯಾಟರ್. ಅಭಿಷೇಕ್‌ ಅವರಿಗೆ ಯುವರಾಜ್‌ ಸಿಂಗ್ ಮಾರ್ಗದರ್ಶನ ಮಾಡಿದ್ದಾರೆ ಎಂದು ನಮಗೆಲ್ಲಾ ತಿಳಿದಿದೆ. ಸ್ಫೋಟಕ ಬ್ಯಾಟರ್‌ ಯುವರಾಜ್‌ ಸಿಂಗ್‌ ಅವರ ಬ್ಯಾಟ್ ಸ್ವಿಂಗ್‌ಗಿಂತ ಅಭಿಷೇಕ್ ಶರ್ಮಾ ಅವರ ಬ್ಯಾಟ್‌ ಸ್ವಿಂಗ್ ಬಹುಶಃ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಅಶ್ವಿನ್‌ ಅಭಿಷೇಕ್ ಶರ್ಮಾ ಪ್ರತಿ ಎಸೆತದಲ್ಲೂ ಬಿಗ್ ಶಾಟ್‌ಗಳನ್ನು ಬಾರಿಸುವುದನ್ನು ಪ್ರಶ್ನಿಸಿದರು.

Story first published: Friday, February 27, 2026, 19:45 [IST]
Other articles published on Feb 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+