Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಯಾನ್‌ ಪರಾಗ್‌ಗೆ ಅಶ್ವಿನ್ ಎಚ್ಚರಿಕೆ: ಎಲ್ಲಿ ಏನು ಮಾಡಬೇಕು ಎಂಬ ಅರಿವಿರಲಿ

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮೈದಾನದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಆದರೆ ಅವರ ಮುಂದಾಳತ್ವದ ರಾಯಲ್ಸ್ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಇವರ ಆ ಒಂದು ವಿಡಿಯೋ ಈಗ ಭಾರೀ ಸಂಚಲನ ಮೂಡಿಸಿದೆ. ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದ ವೇಳೆ ರಿಯಾನ್‌ ಪರಾಗ್‌ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ವೇಪಿಂಗ್ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭಾರತದಲ್ಲಿ ನಿಷೇಧಿತ ಇ-ಸಿಗರೇಟ್‌ ಸೇದುತ್ತಿರುವ ದೃಶ್ಯ ಟೀಕೆಗೆ ಗುರಿಯಾಗಿತ್ತು. ಬಿಸಿಸಿಐ ಸಹ ಶಿಕ್ಷೆ ವಿಧಿಸಿದೆ. ಪರಾಗ್ ಅವರಿಗೆ ಪಂದ್ಯದ ಶುಲ್ಕದ ಶೇ.25 ರಷ್ಟು ದಂಡ ವಿಧಿಸಿತ್ತು ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಸನ್ನಿವೇಶಗಳನ್ನು ತಪ್ಪಿಸಬಹುದು. ವೈಯಕ್ತಿಕವಾಗಿ ಆಟಗಾರ ಏನು ಮಾಡುತ್ತಾರೆ ಎಂಬುದು ಅದು ಅವರ ಸಂಪೂರ್ಣ ಆಯ್ಕೆ. ಆ ಬಗ್ಗೆ ಅವರಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಯಾವ ಸ್ಥಳದಲ್ಲಿ ಏನು ಮಾಡುತ್ತಿದ್ದೀರಿ ಎಂಬ ಅರಿವು ನಿಮಗೆ ಇರಬೇಕು. ನಿಮ್ಮ ವೈಯಕ್ತಿಕ ಆಯ್ಕೆಗಳು ನಿಮ್ಮ ವೈಯಕ್ತಿಕ ಜಾಗಕ್ಕೆ ಸೀಮಿತವಾಗಿರಬೇಕು. ಸಾರ್ವಜನಿಕವಾಗಿ ಇಂತಹ ಕೃತ್ಯಗಳನ್ನು ಮಾಡಬಾರದು" ಎಂದು ಅಶ್ವಿನ್ ಹೇಳಿದ್ದಾರೆ.

R Ashwin

ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಇ-ಸಿಗರೇಟ್‌ ಸೇದಿದ ಬಗ್ಗೆ ಮಾತನಾಡಿರುವ ಅಶ್ವಿನ್, ಪರಾಗ್ ಈಗ ಒಬ್ಬ ಭಾರತೀಯ ಆಟಗಾರನಲ್ಲ. ಇವರು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಒಂದು ಫ್ರಾಂಚೈಸಿಯ ಫೇಸ್ ಆಗಿದ್ದಾರೆ. ಇವರ ನಡುವಳಿಕೆ ಹಲವು ಯುವ ಆಟಗಾರರಿಗೆ ಮಾದರಿ ಆಗಬೇಕು. ಹೀಗಾಗಿ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪರಾಗ್‌ ಬಗ್ಗೆ ನನಗೆ ಸಹಾನುಭೂತಿ ಇದೆ. ಆದರೆ ಇಂತಹ ತಪ್ಪುಗಳು ಮತ್ತೆ ಮತ್ತೆ ಮರುಕಳಿಸಬಾರದು. ಹೀಗಾಗಿ ಇವರ ತಪ್ಪಿಗೆ ಶಿಕ್ಷೆ ಆಗದೇ ಇದ್ದಲ್ಲಿ ಪಾಠ ಕಲಿಯುವುದಿಲ್ಲ ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.

ಯುವ ಆಟಗಾರರು ಇಂತಹ ಅನಗತ್ಯ ವಿವಾದಗಳಲ್ಲಿ ಸಿಲುಕಬಾರದು ಎಂದು ಎಚ್ಚರಿಸಿದ್ದಾರೆ. ರಿಯಾನ್ ಪರಾಗ್ ತಮ್ಮ ವೈಯಕ್ತಿಕ ವರ್ತನೆ ಮತ್ತು ಸಾರ್ವಜನಿಕ ಜವಾಬ್ದಾರಿಯ ಅರಿತುಕೊಳ್ಳಬೇಕು ಎಂಬುದು ಅಶ್ವಿನ್ ಅವರ ಕಠಿಣ ಸಂದೇಶದ ಸಾರಾಂಶವಾಗಿದೆ.

ಪರಾಗ್ ಸಾಧನೆ

ಸಂಜು ಸ್ಯಾಮ್ಸನ್‌ ಅವರ ಬದಲಿಗೆ ರಿಯಾನ್‌ ಪರಾಗ್‌ 2026ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರ ಮುಂದಾಳತ್ವದಲ್ಲಿ ತಂಡದ ಆಡಿದ 9 ಪಂದ್ಯಗಳಲ್ಲಿ 6 ಜಯ, 3 ಸೋಲು ಕಂಡಿದ್ದು 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಈ ವೇಳೆ ರಿಯಾನ್ ಪರಾಗ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಪರಾಗ್ ಆಡಿದ 9 ಪಂದ್ಯಗಳಲ್ಲಿ 14ರ ಸರಾಸರಿಯಲ್ಲಿ 117 ರನ್‌ ಕಲೆ ಹಾಕಿದ್ದಾರೆ. ರಾಯಲ್ಸ್‌ ತಂಡ ಮುಂದಿನ ಹಾದಿಯ ಕನಸು ಸುಗಮ ಆಗಬೇಕಾದಲ್ಲಿ ನಾಯಕ ಲಯಕ್ಕೆ ಮರಳುವುದು ಅನಿವಾರ್ಯ.

Story first published: Friday, May 1, 2026, 16:20 [IST]
Other articles published on May 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+