Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 14ನೇ ಆವೃತ್ತಿಯಿಂದ ವಿರಾಮ ಪಡೆಯಲು ಆರ್ ಅಶ್ವಿನ್ ನಿರ್ಧಾರ

R Ashwin taking break from IPL 2021 to help family fight against Covid 19

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಈ ಬಾರಿಯ ಐಪಿಎಲ್‌ನಿಂದ ವಿರಾಮ ಪಡೆಯುತ್ತಿರುವುದಾಗಿ ಟ್ಟಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ನನ್ನ ಕುಟುಂಬ ಕೊರೊನಾ ವೈರಸ್ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದು ಅವರಿಗೆ ನಾನು ಬೆಂಬಲವಾಗಿ ನಿಲ್ಲಬೇಕಿದೆ ಎಂದು ಆರ್ ಅಶ್ವಿನ್ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

" ನಾಳೆಯಿಂದ ಈ ವರ್ಷದ ಐಪಿಎಲ್‌ನಿಂದ ನಾನು ವಿರಾಮವನ್ನು ಪಡೆಯುತ್ತಿದ್ದೇನೆ. ನನ್ನ ಕುಟುಂಬ ಕೋವಿಡ್ 19ನ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಈ ಕಠಿಣ ಸಂದರ್ಭದಲ್ಲಿ ನಾನು ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ನಾನು ಮತ್ತೆ ಮರಳಲು ಬಯಸುತ್ತೇನೆ. ಧನ್ಯವಾದಗಳು @ಡೆಲ್ಲಿ ಕ್ಯಾಪಿಟಲ್ಸ್" ಎಂದು ಆರ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಆರ್ ಅಶ್ವಿನ್ ಈ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್ ಅಶ್ವಿನ್ ಡೆಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರವೇ ಅಶ್ವಿನ್ ಶಕ್ತರಾಗಿದ್ದಾರೆ.

ಈ ಬಾರಿಯ ಐಪಿಎಲ್ ಆಯೋಜನೆಗಾಗಿ ಪಂದ್ಯಗಳನ್ನು ನಡೆಸುತ್ತೊರುವ ಎಲ್ಲಾ ಪ್ರಮುಖ ನಗರಗಳಲ್ಲಿ ಬಿಸಿಸಿಐ ಬಯೋಬಬಲ್ ನಿರ್ಮಾಣ ಮಾಡಿಕೊಂಡಿದೆ. ಭಾರತದಲಲ್ಇ ಈಗ ಎರಡನೇ ಅಲೆಯ ಕೊರೊನಾ ವೈರಸ್ ಸಾಕಷ್ಟು ಪ್ರಮಾಣದಲ್ಲಿ ಹರಡುತ್ತಿದ್ದು ನಿತ್ಯವೂ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿದೆ.

Story first published: Monday, April 26, 2021, 9:32 [IST]
Other articles published on Apr 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+