32ರ ಹರೆಯಕ್ಕೆ ಕಾಲಿಟ್ಟ ಆರ್. ಅಶ್ವಿನ್ ಗೆ ಶುಭಾಶಯಗಳ ಮಹಾಪೂರ

ಬೆಂಗಳೂರು, ಸೆಪ್ಟೆಂಬರ್ 17: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದಿಗೆ (ಸೆಪ್ಟೆಂಬರ್ 17) 32ನೇ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಚೆನ್ನೈಯ ಈ ಹೆಮ್ಮೆಯ ಕ್ರಿಕೆಟಿಗನಿಗೆ ಇಂದು ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.
ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಅಶ್ವಿನ್ ಒಟ್ಟು 11 ವಿಕೆಟ್ ಕಬಳಿಸಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಬೌಲಿಂಗ್ ಬಲವಾಗಿರುವ ಅಶ್ವಿನ್ 62 ಟೆಸ್ಟ್ ಪಂದ್ಯಗಳಲ್ಲಿ 2.80 ಎಕಾನಮಿಯಂತೆ 327 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಶ್ವಿನ್ 53.4 ಸ್ಟೈಕ್ ರೇಟ್ ಹೊಂದಿದ್ದಾರೆ.

59 ರನ್ನಿಗೆ 7 ವಿಕೆಟ್ ಪಡೆದಿದ್ದು ಅಶ್ವಿನ್ ಅವರ ಅತ್ಯುತ್ತಮ ಸಾಧನೆಗಳಲ್ಲೊಂದು. ಇನ್ನುಳಿದಂತೆ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದ ಸಾಧನೆ ಒಟ್ಟು 26 ಬಾರಿ ಮಾಡಿದ್ದಾರೆ. ಪಂದ್ಯವೊಂದರಲ್ಲಿ 10 ವಿಕೆಟ್ ಉರುಳಿಸಿದ ಸಾಧನೆ 7 ಮಾಡಿರುವ ಖ್ಯಾತಿಯೂ ಅಶ್ವಿನ್ ಅವರದ್ದು. ಅಕ್ಟೋಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಅಶ್ವಿನ್ ಗಮನ ಸೆಳೆಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 3,000ಕ್ಕೂ ಅಧಿಕ ರನ್, 500ಕ್ಕೂ ಹೆಚ್ಚು ವಿಕೆಟ್ ಸಾಧನೆ ರವಿ ಅಶ್ವಿನ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಗಳಿಂದ ಅಶ್ವಿನ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ..
ಸೆಹ್ವಾಗ್ ಶುಭಾಶಯ
ಸ್ಪಿನ್ ಬೌಲರ್ ಆರ್ ಅಶ್ವಿನ್ ಅವರಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಟ್ವೀಟ್ ಮೂಲಕ ಶುಭಾಶಯ ಹೇಳಿದ್ದಾರೆ.
ಬಿಸಿಸಿಐ
ರವಿಚಂದ್ರನ್ ಅಶ್ವಿನ್ ಅವರನ್ನು ಸ್ಪಿನ್ ಮಾಂತ್ರಿಕ ಎಂದು ಕರೆದಿರುವ ಬಿಸಿಸಿಐ, ಪ್ರತಿಭಾನ್ವಿತ ಆಟಗಾರನಿಗೆ ಪ್ರೀತಿಯ ಶುಭ ಹಾರೈಕೆ ತಿಳಿಸಿದೆ. ವಿಡಿಯೋ ಟ್ವೀಟ್ ಮಾಡುವ ಮೂಲಕ ಬಿಸಿಸಿಐ ಶುಭಾಶಯ ಹೇಳಿದೆ.
ಪತ್ನಿ 'ಪ್ರೀತಿ'ಯ ಮುನಿಸು
ಅಶ್ವಿನ್ ಅವರ ಪತ್ನಿ ಪ್ರೀತಿ ಅಶ್ವಿನ್ ಕೂಡ ಪ್ರೀತಿಯಿಂದ ಪತಿಗೆ ಶುಭಾಶಯ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗಾಗಿ ಅಶ್ವಿನ್ ಆಗಾಗ ದೂರವಿರಬೇಕಾದ ಅನಿವಾರ್ಯತೆಗೆ ಹುಸಿ ಮುನಿಸು ತೋರಿಸುತ್ತಲೇ ಪ್ರೀತಿ ಅವರು ಶುಭ ಹಾರೈಸಿದ್ದಾರೆ.
ತಾರಾಗಣ
ಕ್ರಿಕೆಟಿಗ ವೃದ್ಧಿಮಾನ್ ಸಾಹ, ಲಕ್ಷ್ಮೀಪತಿ ಬಾಲಾಜಿ, ಚೇತೇಶ್ವರ ಪೂಜಾರ ಸೇರಿದಂತೆ ಅನೇಕ ಸ್ಟಾರ್ ಗಳ ಸಹಿತ ಅಭಿಮಾನಿಗಳು ಅಶ್ವಿನ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications