For Quick Alerts
ALLOW NOTIFICATIONS  
For Daily Alerts
 

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಈ ಸ್ಟಾರ್ ಬೌಲರ್‌ಗಳ ಮೇಲೆ ಎಲ್ಲರ ಕಣ್ಣು

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್‌ ಸರಣಿಗೆ ದಿನಗಣನೆ ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್‌ 22 ರಂದು ನಡೆಯಲಿದೆ. ಈಗಾಗಲೇ ಉಭಯ ತಂಡಗಳನ್ನು ಟೆಸ್ಟ್‌ಗೆ ಪ್ರಕಟಿಸಲಾಗಿದೆ. ಉಭಯ ತಂಡಗಳು ಜಿದ್ದಾಜಿದ್ದಿನ ಕಾದಾಟ ಕಾಣಲಿದೆ. ಈ ಸರಣಿಯಲ್ಲಿ ಉಭಯ ತಂಡಗಳ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದು ರೋಚಕತೆ ಹೆಚ್ಚಿಸಿದೆ. ಈ ಸರಣಿಯಲ್ಲಿ ಸ್ಟಾರ್‌ ಆಟಗಾರರು ಕಣಕ್ಕೆ ಇಳಿಯಲಿದ್ದು, ದಾಖಲೆಯ ಪುಟ ಸೇರುವ ಕನಸಿನಲ್ಲಿದ್ದಾರೆ. ಹಾಗಿದ್ದರೆ ಆ ಸ್ಟಾರ್ ಆಟಗಾರರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ. ಭಾರತದ ಪರ ರವಿಚಂದ್ರನ್‌ ಅಶ್ವಿನ್‌ ಕಣಕ್ಕೆ ಇಳಿಯಲಿದ್ದು ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಇವರಿಗೆ ಪೈಪೋಟಿಯನ್ನು ಆಸ್ಟ್ರೇಲಿಯಾದ ನಾಥನ್‌ ಲೀಯನ್‌ ನೀಡಲಿದ್ದಾರೆ. ಇಬ್ಬರೂ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದು ರೋಚಕತೆ ಮನೆ ಮಾಡಿದೆ. ಕಾರಣ ಈ ಇಬ್ಬರೂ ಆಟಗಾರರು ಸಕ್ರಿಯ ಕ್ರಿಕೆಟ್‌ ಆಟಗಾರರ ಪೈಕಿ ಹೆಚ್ಚು ವಿಕೆಟ್‌ ಪಡೆದ ಸ್ಪಿನ್ ಬೌಲರ್‌ಗಳಾಗಿದ್ದಾರೆ.

R Ashwin vs Nathan Lyon Battle for Test Cricket Supremacy in India-Australia Series

ಬಲಿಷ್ಠ ಆಟಗಾರರು ಕಣಕ್ಕೆ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಆರ್‌ ಅಶ್ವಿನ್‌, ತಮ್ಮ ಮಾರಕ ಸ್ಪಿನ್‌ನಿಂದ ಎದುರಾಳಿಗಳನ್ನು ಕಾಡಿದ್ದಾರೆ. ಅಲ್ಲದೆ ಅದೆಷ್ಟೋ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವಿನ ಮುಕುಟ ತೋಡಿಸುವ ಆಟಗಾರ. ಬಾರ್ಡರ್‌ ಗವಾಸ್ಕರ್ ಸರಣಿಯಲ್ಲಿ ಭಾರತದ ಪರ ಅಶ್ವಿನ್ ಹಾಗೂ ಆಸ್ಟ್ರೇಲಿಯಾ ಪರ ನಾಥನ್‌ ಲಿಯಾನ್‌ ಕಣಕ್ಕೆ ಇಳಿಯಲಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿ ವಿಕೆಟ್‌ ಪಡೆಯಲು ಈ ಇಬ್ಬರು ಆಟಗಾರರ ನಡುವೆ ಕಾಳಗ ನಡೆಯಲಿದೆ.

R Ashwin vs Nathan Lyon Battle for Test Cricket Supremacy in India-Australia Series

ನಂಬರ್‌ 1 ಪಟ್ಟಕ್ಕಾಗಿ ಸ್ಟಾರ್‌ಗಳ ಫೈಟ್‌

ಆರ್ ಅಶ್ವಿನ್ ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ 105 ಪಂದ್ಯಗಳ 199 ಇನ್ನಿಂಗ್ಸ್‌ಗಳಲ್ಲಿ 536 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನೊಂದೆಡೆ ನಾಥನ್ ಲಿಯಾನ್ ಆಸ್ಟ್ರೇಲಿಯಾ ಪರ 129 ಪಂದ್ಯಗಳಲ್ಲಿ 242 ಇನ್ನಿಂಗ್ಸ್‌ಗಳಲ್ಲಿ 530 ವಿಕೆಟ್‌ಗಳನ್ನು ಪಡೆದಿದ್ದಾರೆ. ನಾಥನ್ ಲಿಯಾನ್ ಅವರು 7 ವಿಕೆಟ್ ಪಡೆದರೆ, ಅಶ್ವಿನ್ ಅವರ ದಾಖಲೆಯನ್ನು ಹಿಂದಿಕ್ಕಬಹುದು. ಈ ಸರಣಿಯಲ್ಲಿ ಅಶ್ವಿನ್‌ ಸಹ ಆಡಲಿದ್ದು, ಯಾರು ಹೆಚ್ಚು ವಿಕೆಟ್‌ ಕಬಳಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಭಾರತದ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸದ್ಯ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇವರ ದಾಖಲೆಗೆ ಈಗ ಅಪಾಯ ಎದುರಾಗಿದೆ. ಏಕೆಂದರೆ ಟೀಮ್ ಇಂಡಿಯಾ ಈ ಪ್ರವಾಸದಲ್ಲಿ ಮೂವರು ಸ್ಪಿನ್‌ ಬೌಲರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಿದೆ. ಹೀಗಾಗಿ ಅಶ್ವಿನ್‌ ಎಲ್ಲ ಪಂದ್ಯಗಳನ್ನು ಆಡುವುದು ಡೌಟ್‌. ಇನ್ನು ಆಸ್ಟ್ರೇಲಿಯಾ ತಂಡದ ಪರವಾಗಿ ನಾಥನ್‌ ಲಿಯಾನ್‌ ಮೂರು ಪಂದ್ಯಗಳಲ್ಲಾದ್ರೂ ಆಡಬಹುದು. ಹೀಗಾಗಿ ಇವರು ಅಶ್ವಿನ್‌ ದಾಖಲೆಗೆ ಅಪಾಯ ಎದುರಾಗಿದೆ.

Story first published: Sunday, November 17, 2024, 13:40 [IST]
Other articles published on Nov 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+