Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ತಿಂಗಳ ಕ್ರಿಕೆಟಿಗನಾಗಿ ಆಯ್ಕೆಯಾದ ಟೀಮ್ ಇಂಡಿಯಾದ ಆರ್ ಅಶ್ವಿನ್

R Ashwin winner of the ICC Player of the Month award

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎರಡನೇ ಮಾಸಿಕ ಕ್ರಿಕೆಟಿಗ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಈ ಬಾರಿಯೂ ಈ ಪ್ರಶಸ್ತಿಯನ್ನು ಭಾರತೀಯ ಆಟಗಾರನೇ ಪಡೆದುಕೊಂಡಿದ್ದು ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮುಡಿಗೇರಿದೆ. ಐಸಿಸಿಯ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ಬಗ್ಗೆ ಘೋಷಣೆಯನ್ನು ಮಾಡಲಾಗಿದೆ.

ಐಸಿಸಿ ನೀಡುವ ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಟೀಮ್ ಇಂಡಿಯಾ ಆಟಗಾರನೇ ಸ್ವೀಕರಿಸಿದ್ದರು. ಜನವರಿ ತಿಂಗಳಿನ ಪ್ರಶಸ್ತಿಯನ್ನು ರಿಷಭ್ ಪಂತ್ ಸ್ವೀಕರಿಸಿದ್ದರು. ಈಗ ಫೆಬ್ರವರಿ ತಿಂಗಳ ಪ್ರಶಸ್ತಿಯೂ ಭಾರತ ತಂಡದ ಆಟಗಾರನಿಗೇ ದೊರೆತಿದೆ.

ಫೆಬ್ರವರಿ ತಿಂಗಳ ಪ್ರಶಸ್ತಿಗಾಗಿ ಆರ್ ಅಶ್ವಿನ್ ಜೊತೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜೋ ರೂಟ್, ವೆಸ್ಟ್ ಇಂಡೀಸ್‌ನ ಯುವ ಬ್ಯಾಟಿಂಗ್ ಸೆನ್ಸೇಶನ್ ಕೈಲ್ ಮೇಯರ್ಸ್ ಫೆಬ್ರವರಿ ತಿಂಗಳಿನಲ್ಲಿ ನೀಡಿದ ಅದ್ಭುತ ಪ್ರದರ್ಶನದ ಕಾರಣಕ್ಕೆ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು.

ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಚೆನ್ನೂನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 106 ರನ್‌ಗಳ ಕಾಣಿಕೆ ನೀಡುವುದರ ಜೊತೆಗೆ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 3ನೇ ಪಂದ್ಯದಲ್ಲಿ 400ನೇ ವಿಕೆಟ್ ಪಡೆದು ಮೈಲಿಗಲ್ಲು ಸ್ಥಾಪಿಸಿದ್ದರು.

"ಈ ಪಂದ್ಯಗಳಲ್ಲಿ ಒಟ್ಟಾರೆ 176 ರನ್‌ಗಳ ಜೊತೆಗೆ 24 ವಿಕೆಟ್‌ಗಳಲ್ಲಿ ಪಡೆದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಆರ್ ಅಶ್ವಿನ್ ಫೆಬ್ರವರಿ ತಿಂಗಳಲ್ಲಿ ಈ ಪ್ರಶಸ್ತಿಗೆ ಅರ್ಹ ಆಟಗಾರನಾಗಿದ್ದಾರೆ" ಎಂದು ಐಸಿಸಿ ಮಾಹಿತಿಯನ್ನು ನೀಡಿದೆ.

Story first published: Tuesday, March 9, 2021, 18:54 [IST]
Other articles published on Mar 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+