Kagiso Rabada: ಜಾಕ್ ಕಾಲಿಸ್ ದಾಖಲೆ ಅಳಿಸಿದ ರಬಾಡ
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಇತಿಹಾಸ ಬರೆದಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ರಬಾಡ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿ ಅಬ್ಬರಿಸಿದರು. ಈ ಮೂಲಕ ರಬಾಡ ದಕ್ಷಿಣ ಆಫ್ರಿಕಾ ದಿಗ್ಗಜ ಆಲ್‌ರೌಂಡರ್ ಜಾಕ್ ಕಾಲಿಸ್ ಅವರ ದಾಖಲೆ ಅಳಸಿ ಹಾಕಿದರು.
ಗುರುವಾರ 4 ವಿಕೆಟ್‌ಗೆ 43 ರನ್‌ಗಳಿಂದ ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 138 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ರನ್ ಕಲೆ ಹಾಕಲು ಪರದಾಟ ನಡೆಸಿತು. ಪರಿಣಾಮ ದಿನದಾಟದಂತ್ಯಕ್ಕೆ 8 ವಿಕೆಟ್‌ಗೆ 144 ರನ್ ಸೇರಿಸಿದೆ. ಎರಡನೇ ಇನಿಂಗ್ಸ್‌ನಲ್ಲೂ ರಬಾಡ ಮಾರಕ ಬೌಲಿಂಗ್ ದಾಳಿ ಸಂಘಟಿಸಿ ಮೂರು ವಿಕೆಟ್‌ಗಳನ್ನು ಪಡೆದರು. ಈ ಮೂಲಕ ರಬಾಡ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

ದಾಖಲೆ ಬರೆದ ರಬಾಡ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ರಬಾಡ ತಮ್ಮ ಅಮೋಘ ದಾಳಿಯನ್ನು ಪ್ರದರ್ಶಿಸಿದ್ದಾರೆ. ಇವರು ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಬೀಗಿದ್ದರು. ಇದೇ ಅಮೋಘ ಲಯವನ್ನು ರಬಾಡಾ ಎರಡನೇ ಇನಿಂಗ್ಸ್‌ನಲ್ಲೂ ಮುಂದುವರೆಸಿದರು. ಇವರು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದರು. ಈ ಮೂಕ ರಬಾಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಐದನೇ ದಕ್ಷಿಣ ಆಫ್ರಿಕಾದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 3 ಫಾರ್ಮೆಟ್‌ಗಳಲ್ಲಿ ಒಟ್ಟು 574 ವಿಕೆಟ್‌ಗಳನ್ನು ಪಡೆದು ಬೀಗಿದ್ದಾರೆ. ಈ ಸಾಧನೆಯ ಮೂಲಕ ರಬಾಡ ಜಾಕ್ ಕಾಲಿಸ ಸಾಧನೆಯನ್ನು ಅಳಿಸಿ ಹಾಕಿದರು.
ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‌ರೌಂಡರ್ ಜಾಕ್ ಕಾಲಿಸ್ ದೇಶದ ಪರ ಮೂರು ಫಾರ್ಮೆಟ್‌ಗಳಲ್ಲಿ 572 ವಿಕೆಟ್‌ಗಳನ್ನು ಪಡೆದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಸಾಧನೆಯನ್ನು ರಬಾಡ ಅಳಿಸಿ ಹಾಕಿದ್ದಾರೆ. ದಕ್ಷಿಣ ಆಫ್ರಿಕಾ ಪರ ಅತಿ ಹೆ್ಚ್ಚು ವಿಕೆಟ್‌ಗಳನ್ನು ಪಡೆದ ಕೀರ್ತಿ ದಿಗ್ಗಜ ವೇಗದ ಬೌಲರ್ ಶಾನ್ ಪೊಲಾಕ್ ಅವರಿಗೆ ಸಲ್ಲುತ್ತದೆ. ಇವರು ಒಟ್ಟಾರೆ ಮೂರು ಫಾರ್ಮೆಟ್‌ಗಳಲ್ಲಿ 823 ವಿಕೆಟ್ ಪಡೆದ ಹಿರಿಮೆ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಶಾನ್ ಪೊಲಾಕ್ - 823 ವಿಕೆಟ್
ಡೇಲ್ ಸ್ಟೇನ್ - 697 ವಿಕೆಟ್
ಮಖಾಯ ಎನ್ಟಿನಿ - 661 ವಿಕೆಟ್
ಅಲನ್ ಡೊನಾಲ್ಡ್ - 602 ವಿಕೆಟ್
ಕಾಗಿಸೊ ರಬಾಡ - 574 ವಿಕೆಟ್
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಇನ್ನು ಎರಡು ವಿಕೆಟ್‌ಗಳು ಉಳಿದಿವೆ. ಇದರಲ್ಲಿ ರಬಾಡಾ ಎಷ್ಟು ವಿಕೆಟ್‌ಗಳನ್ನು ಪಡೆಯುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications