WTC Final: ಕಗಿಸೊ ರಬಾಡ ಪಂಚ್‌ಗೆ ಆಸೀಸ್ ತಬ್ಬಿಬ್ಬು
ವೇಗದ ಬೌಲರ್ ಕಗಿಸೊ ರಬಾಡ ಹಾಗೂ ಮಾರ್ಕೊ ಜಾನ್ಸನ್ ಅವರ ಬಿಗುವಿನ ಮಾರಕ ದಾಳಿಯ ಫಲವಾಗಿ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 212 ರನ್‌ಗಳಿಗೆ ಕಟ್ಟಿ ಹಾಕಿತು. ಈ ಮೂಲಕ ದಕ್ಷಿಣ ಆಫ್ರಿಕಾ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಉಸ್ಮಾನ್ ಖವಾಜ್ ಖಾತೆಯನ್ನು ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಇನ್ನೋರ್ವ ಆರಂಭಿಕ ಆಟಗಾರ ಮಾರ್ನಸ್ ಲಂಬುಶೇನ್ 17 ರನ್‌ಗಳಿಗೆ ಆಟ ಮುಗಿಸಿದರು. ಕ್ಯಾಮರೋನ್ ಗ್ರೀನ್ 4 ರನ್‌ಗಳಿಗೆ ಆಟ ಮುಗಿಸಿದರು.

ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕಗಿಸೊ ರಬಾಡ ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಪಡೆದು ಮಿಂಚಿದರು. ಇವರಿಗೆ ಮಾರ್ಕೊ ಜಾನ್ಸನ್ ಉತ್ತಮ ಸಾಥ್ ನೀಡಿದರು. ಮಾರ್ಕೊ ಜಾನ್ಸನ್ ಭರವಸೆಯ ಬ್ಯಾಟರ್ ಟ್ರಾವಿಸ್ ಹೆಡ್ ಅವರಿಗೆ ಔಟ್ ಮಾಡುವಲ್ಲಿ ಸಫಲರಾದರು.
ಭರ್ಜರಿ ಜೊತೆಯಾಟ
ಐದನೇ ವಿಕೆಟ್‌ಗೆ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಹಾಗೂ ಬ್ಯೂ ವೆಬ್‌ಸ್ಟರ್ ಜೋಡಿ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಕಾಡಿತು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳು ವಿಫಲರಾದರು. ಈ ಜೋಡಿ ಭೋಜನ ವಿರಾಮದ ಬಳಿಕ ಜೊತೆಯಾಗಿ ಇನಿಂಗ್ಸ್ ಮುನ್ನಡೆಸಿತು. ಅಲ್ಲದೆ ಚಹಾ ವಿರಾಮದ ವರೆಗೂ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಈ ಜೋಡಿ 114 ಎಸೆತಗಳಲ್ಲಿ 79 ರನ್ ಸೇರಿಸಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಐಡೇನ್ ಮಾರ್ಕ್ರಾಮ್ ಸಫಲರಾದರು. ಸ್ಟೀವನ್ ಸ್ಮಿತ್ 112 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 66 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ಆರನೇ ವಿಕೆಟ್‌ಗೆ ಬ್ಯೂ ವೆಬ್‌ಸ್ಟರ್ ಜೊತೆಗೂಡಿದ ಅಲೆಕ್ಸ್ ಕ್ಯಾರಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನಡೆಸಿದರು. ಈ ಜೋಡಿ 59 ಎಸೆತಗಳಲ್ಲಿ 46 ರನ್ ಸಿಡಿಸಿತು. ಅಲೆಕ್ಸ್ ಕ್ಯಾರಿ 23 ರನ್‌ಗಳಿಗೆ ಆಟ ಮುಗಿಸಿದರು. ಬ್ಯೂ ವೆಬ್‌ಸ್ಟರ್ 11 ಬೌಂಡರಿ ನೆರವಿನಿಂದ 72 ರನ್ ಸಿಡಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಕಗಿಸೊ ರಬಾಡ
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅಬ್ಬರಿಸಿದರು. ಇವರು 15.4 ಓವರ್ ಬೌಲ್ ಮಾಡಿ 51 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇನ್ನೋರ್ವ ವೇಗಿ ಮಾರ್ಕೊ ಜಾನ್ಸನ್ 49 ರನ್ ನೀಡಿ ಮೂರು ವಿಕೆಟ್ ಪಡೆದರು.
ಮೊದಲ ದಿನದ ಆಟ
ಟಾಸ್ ಸೋತರು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 212 ರನ್ ಕಲೆ ಹಾಕಿತು. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 43 ರನ್ ಕಲೆ ಹಾಕಿದೆ. ಇನ್ನು ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 169 ರನ್ ಹಿನ್ನಡೆ ಅನುಭವಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications