For Quick Alerts
ALLOW NOTIFICATIONS  
For Daily Alerts
 

ಗೋಲ್ಡನ್‌ ಬ್ಯಾಟ್‌ ಪ್ರಶಸ್ತಿಯ ಮೇಲೆ ಐವರು ಬ್ಯಾಟರ್‌ಗಳ ಕಣ್ಣು: ಕಣದಲ್ಲಿ ಮೂವರು ಭಾರತೀಯರು

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಭಾನುವಾರ ಟೂರ್ನಿಯ ಪ್ರಶಸ್ತಿ ಸುತ್ತಿನ ಕಾದಾಟ ದುಬೈನಲ್ಲಿ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಐಸಿಸಿ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿವೆ. ಎರಡೂ ತಂಡಗಳಲ್ಲಿನ ಸ್ಪಿನ್ ಬೌಲರ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿ ಸ್ಟಾರ್ ಆಟಗಾರರು ಫಾರ್ಮ್‌ಗೆ ಬಂದಿದ್ದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಆಗಿದೆ.

ಚಾಪಿಯನ್ಸ್‌ ಟ್ರೋಫಿಯ ವೇಳೆ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತವೆ. ಈ ವೇಳೆ ಗೋಲ್ಡನ್‌ ಬ್ಯಾಟ್‌ ಅವಾರ್ಡ್‌ ಸಹ ಒಂದಾಗಿದೆ. ಈ ಪ್ರಶಸ್ತಿಯನ್ನು ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರನಿಗೆ ನೀಡಲಾಗುತ್ತದೆ. ಈ ಬಾರಿ ಈ ರೇಸ್‌ನಲ್ಲಿ ಟಾಪ್‌ ಆಟಗಾರರು ಇದ್ದು ಕುತೂಹಲ ಮನೆ ಮಾಡಿದೆ. ಈ ರೇಸ್‌ನಲ್ಲಿ ಮೂವರು ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಆ ಬಗ್ಗೆ ವರದಿ ಇಲ್ಲಿದೆ.

Race for the Golden Bat Rachin Ravindra Virat Kohli and Ben Duckett in Close Contest

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿರುವ ಆಟಗಾರರಿಗೆ ಏನು ಕಮ್ಮಿ ಇಲ್ಲ. ಈ ಬಾರಿಯ ಗೋಲ್ಡನ್‌ ಬ್ಯಾಟ್‌ ಮೇಲೆ ಒಬ್ಬ ಅನುಭವಿ ಹಾಗೂ ಇಬ್ಬರು ಯುವ ಬ್ಯಾಟರ್‌ಗಳು ಕಣ್ಣು ನೆಟ್ಟಿದ್ದಾರೆ. ಇದರಲ್ಲಿ ಮುಂಚೂಣಿಯಲ್ಲಿರುವ ಆಟಗಾರ ನ್ಯೂಜಿಲೆಂಡ್ ತಂಡದ ರಚಿನ್‌ ರವೀಂದ್ರ. ಇವರು ಟೂರ್ನಿಯಲ್ಲಿ ಅಧಿಕ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Take a Poll

ಗೋಲ್ಡನ್‌ ಬ್ಯಾಟ್‌ ಯಾರಿಗೆ?

ಫೈನಲ್‌ ಪಂದ್ಯದಲ್ಲಿ ಇವರು ನಂಬರ್ 1 ಪಟ್ಟವನ್ನು ಸಹ ಅಲಂಕರಿಸಬಹುದು. ಇದಕ್ಕೆ ಜಸ್ಟ್‌ 2 ರನ್‌ ಅವಶ್ಯಕತೆ ಇದೆ. ಇದು ಸಾಧ್ಯವಾದಲ್ಲಿ ಈ ಸಾಧನೆಯನ್ನು ಇವರು ಮಾಡಬಹುದಾಗಿದೆ. ರಚಿನ್ ರವೀಂದ್ರ ಆಡಿದ 3 ಪಂದ್ಯಗಳಲ್ಲಿ 2 ಶತಕ ಸೇರಿದಂತೆ 226 ರನ್‌ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸದ್ಯ ಇಂಗ್ಲೆಂಡ್ ತಂಡದ ಬೆನ್‌ ಡಕೆಟ್‌ ಇದ್ದು, ಇವರು 227 ರನ್‌ ಕಲೆ ಹಾಕಿದ್ದಾರೆ.

Race for the Golden Bat Rachin Ravindra Virat Kohli and Ben Duckett in Close Contest

ಇಂಗ್ಲೆಂಡ್ ತಂಡ ಈಗಾಗಲೇ ಲೀಗ್‌ ಹಂತದಿಂದ ಟೂರ್ನಿಯಿಂದ ಹೊರ ಬಿದ್ದಿದೆ. ಆಗಲೇ ಇಂಗ್ಲೆಂಡ್ ತಂಡದ ಆಟಗಾರರಾದ ಜೋ ರೂಟ್‌ ಹಾಗೂ ಬೆನ್‌ ಡಕೆಟ್‌ ಇನ್ನು ಕಣಕ್ಕೆ ಇಳಿಯುವುದಿಲ್ಲ. ಜೋ ರೂಟ್ ಸಹ ಅಧಿಕ ರನ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ ಮೂರು ಪಂದ್ಯಗಳಲ್ಲಿ 225 ರನ್‌ ಸಿಡಿಸಿದ್ದಾರೆ.

ಇಬ್ಬರು ಭಾರತೀಯರು ಕಣದಲ್ಲಿ

ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್‌ ವಿರಾಟ್ ಕೊಹ್ಲಿ ಅವರದ್ದಾಗಿದೆ. ವಿರಾಟ್‌ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ರನ್‌ಗಳ ಮಹಲ್‌ ಕಟ್ಟುತ್ತಿದ್ದರು. ಇವರು ಆಡಿರುವ 4 ಪಂದ್ಯಗಳಲ್ಲಿ 217 ರನ್‌ ಸಿಡಿಸಿದ್ದಾರೆ. ಇವರಿಗೆ ಇನ್ನು ಒಂದು ಪಂದ್ಯ ಇದ್ದು ಈ ವೇಳೆ ಇವರು ಗರಿಷ್ಠ ರನ್‌ ಸಾಧಕ ಆಗುವ ಹತ್ತಿರದಲ್ಲಿ ನಿಂತಿದ್ದಾರೆ.

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್‌ ಸಹ ಈ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇವರು ಆಡಿರುವ 4 ಪಂದ್ಯಗಳಲ್ಲಿ 2 ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಇವರು 195 ರನ್‌ ಕಲೆ ಹಾಕಿದ್ದಾರೆ. ಇವರು ಸಹ ಗೋಲ್ಡನ್‌ ಬ್ಯಾಟ್ ಮೇಲೆ ಕಣ್ಣು ನೆಟ್ಟಿದ್ದಾರೆ.

1
7-2025

ಇನ್ನು ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಹಾಗೂ ಭಾರತದ ಶುಭಮನ್‌ ಗಿಲ್‌ ಅವರಿಗೂ ಈ ಅವಕಾಶ ಇದೆ. ಆದರೆ ಇವರು ಫೈನಲ್‌ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟಬೇಕಿದೆ. ಅಂದಾಗ ಮಾತ್ರ ಗರಿಷ್ಠ ರನ್‌ ಸಾಧನೆಯ ಕೀರ್ತಿ ಇವರ ಮುಕುಟಕ್ಕೆ ಲಭಿಸಲಿದೆ.

Story first published: Thursday, March 6, 2025, 13:03 [IST]
Other articles published on Mar 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+