Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rachin Ravindra: ನ್ಯೂಜಿಲೆಂಡ್‌ ಸ್ಪೋಟಕ ಬ್ಯಾಟರ್‌ ರಚಿನ್ ರವೀಂದ್ರಗೆ ಖುಲಾಯಿಸಿದ ಅದೃಷ್ಟ!

ಜುಲೈ 11 ಬುಧವಾರ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು 2024-25ರ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ಆಟಗಾರರ ಈ ಪಟ್ಟಿಯಲ್ಲಿ ಮೊದಲ ಬಾರಿಗೆ ನಾಲ್ವರು ಕ್ರಿಕೆಟಿಗರು ಸೇರ್ಪಡೆಯಾಗಿದ್ದಾರೆ.

ಭಾರತ ಮೂಲದ ಆಟಗಾರರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಅದೃಷ್ಟ ಖುಲಾಯಿಸಿದೆ. ನ್ಯೂಜಿಲೆಂಡ್‌ನ ಭಾರತ ಮೂಲದ ಯುವ ಕ್ರಿಕೆಟಿಗ ರಚಿನ್ ರವೀಂದ್ರ ಅವರು ಏಕದಿನ ವಿಶ್ವಕಪ್ 2023 ಸೇರಿದಂತೆ ಕಳೆದ ಒಂದು ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನದಿಂದಾಗಿ ಮೊದಲ ಬಾರಿಗೆ ಕೇಂದ್ರ ಒಪ್ಪಂದಕ್ಕೆ ಸೇರ್ಪಡೆಗೊಂಡಿದ್ದಾರೆ.

Rachin Ravindra has been named in New Zealand Annual Central Contract List

ಈ 24 ವರ್ಷದ ಸ್ಪೋಟಕ ಬ್ಯಾಟರ್‌ ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ 578 ರನ್ ಗಳಿಸಿದ್ದರು. ಇದರೊಂದಿಗೆ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ 4ನೇ ಸ್ಥಾನ ಪಡೆದಿದ್ದರು. ಏಕದಿನ ವಿಶ್ವಕಪ್‌ನಲ್ಲಿ ರಚಿನ್‌ ಅವರ ಅದ್ಭುತ ಪ್ರದರ್ಶನ ಆಧಾರದ ಮೇಲೆ ಐಪಿಎಲ್ ಹರಾಜಿನಲ್ಲಿ 1.80 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಬಿಡ್‌ ಮಾಡಿತ್ತು.

ವಾರ್ಷಿಕ ಪಟ್ಟಿಯಲ್ಲಿ ಸ್ಟಾರ್‌

ರವೀಂದ್ರ 2023ರಲ್ಲಿ ಐಸಿಸಿ ವರ್ಷದ ರೈಸಿಂಗ್ ಆಟಗಾರನಾಗಿ ಆಯ್ಕೆಯಾಗಿದ್ದರು. ಜೊತೆಗೆ ರಚಿನ್‌ ಸರ್ ರಿಚರ್ಡ್ ಹ್ಯಾಡ್ಲಿ ಪದಕವನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ರವೀಂದ್ರ ಮೂಲತಃ ಬೆಂಗಳೂರಿನವರು. ರಚಿನ್‌ ತಂದೆ-ತಾಯಿಯೊಂದಿಗೆ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದಾರೆ. ಆದರೇ ರಚಿನ್‌ ಅವರ ಅಜ್ಜಿ-ತಾತ ಬೆಂಗಳೂರಿನಲ್ಲೇ ವಾಸ ಮಾಡುತ್ತಿದ್ದಾರೆ.

ರವೀಂದ್ರ ಅವರು ಸತತವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ದಿಗ್ಗಜ ಕ್ರಿಕೆಟಿಗರಿಂದ ಮೆಚ್ಚುಗೆಗೆ ಪಡೆದಿದ್ದಾರೆ. ಹೀಗಾಗಿ 2024-25ರ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ರಚಿನ್ ಸ್ಥಾನ ಪಡೆದಿದ್ದಾರೆ.

ಅಲ್ಲದೆ ಹೊಸದಾಗಿ ಇತರ ಮೂವರು ಆಟಗಾರರಾದ ಬೆನ್ ಸಿಯರ್ಸ್, ವಿಲ್ ಒ'ರೂರ್ಕ್ ಮತ್ತು ಜಾಕೋಬ್ ಡಫಿ ಕೂಡ ನ್ಯೂಜಿಲೆಂಡ್‌ನ ಕೇಂದ್ರ ಒಪ್ಪಂದದಲ್ಲಿ ಮೊದಲ ಬಾರಿಗೆ ಸೇರ್ಪಡೆಗೊಂಡಿದ್ದಾರೆ. ಆದರೆ, ದಿಗ್ಗಜ ಬ್ಯಾಟರ್‌ ಹಾಗು ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿ ಸ್ಥಾನ ನೀಡಿಲ್ಲ.

ರಚಿನ್‌ ರವೀಂದ್ರ ಹೇಳಿದ್ದೇನು?

ಮೊದಲ ಬಾರಿಗೆ ವಾರ್ಷಿಕ ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆದಿರುವುದಕ್ಕೆ ರಚಿನ್ ರವೀಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಗುತ್ತಿಗೆ ಪಟ್ಟಿಯನ್ನು ನೋಡುತ್ತಿದ್ದೆ. ಒಂದು ದಿನ ಆ ಪಟ್ಟಿಗೆ ಸೇರಿಸಿದರೆ ಒಳ್ಳೆಯದು ಎಂದುಕೊಂಡಿದ್ದ ನನಗೆ ಇದು ದೊಡ್ಡ ಕ್ಷಣವಾಗಿದೆ.

ಕಳೆದ 12 ತಿಂಗಳುಗಳು ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದು ನಿಜಕ್ಕೂ ಅದ್ಭುತವಾಗಿದೆ. ನಾನು ಬಹಳಷ್ಟು ಕಲಿತಿದ್ದೇನೆ. ಬ್ಲಾಕ್‌ಕ್ಯಾಪ್‌ಗಳನ್ನು ಸುಧಾರಿಸಲು ಮತ್ತು ಕೊಡುಗೆ ನೀಡಲು ಖಂಡಿತವಾಗಿಯೂ ಕಾಯುತ್ತಿದ್ದೇನೆ. ನ್ಯೂಜಿಲೆಂಡ್‌ ತಂಡವು ಆಟಗಾರರಿಂದ ಸಹಾಯಕ ಸಿಬ್ಬಂದಿಯವರೆಗೆ ಇರುವಂತಹ ವಿಶೇಷ ಗುಂಪು ಎಂದು ರಚಿನ್‌ ಹೇಳಿದ್ದಾರೆ.

ನ್ಯೂಜಿಲೆಂಡ್‌ ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರು: ಫಿನ್ ಅಲೆನ್, ಟಾಮ್ ಬ್ಲಂಡೆಲ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ವಿಲ್ ಓ'ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಾಚಿನ್‌ಲ್ ಸಿಲಿಪ್ಸ್ ಬೆನ್ ಸಿಯರ್ಸ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.

Story first published: Wednesday, July 10, 2024, 17:32 [IST]
Other articles published on Jul 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+